ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೊಬೈಲ್ ಪಾವತಿ ವಿಧಾನಕ್ಕೆ ಆರ್‌ಬಿಐ ಅಂಗೀಕಾರ  Search similar articles
ಮೊಬೈಲ್ ಬಳಕೆದಾರರು ಭವಿಷ್ಯದಲ್ಲಿ ತಮ್ಮ ಮೊಬೈಲ್ ಮೂಲಕವೇ ಬ್ಯಾಂಕ್ ಖಾತೆಯಿಂದ ಹಣವನ್ನು ವರ್ಗಾಯಿಸಬಹುದಾಗಿದ್ದು, ಮೊಬೈಲ್ ಪಾವತಿ ವಿಧಾನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸಿದ್ಧಪಡಿಸಿದ ಕರಡಿನಲ್ಲಿ ತಿಳಿಸಿದೆ.

ಆರ್‌ಬಿಐಯ ಈ ಕರಡಿನ ಪ್ರಕಾರ, ಸಾಮಾನ್ಯ ಮೊಬೈಲ್ ಪೋನ್ ಹೊಂದಿರುವವರು ಕೂಡಾ ತಮ್ಮ ಮೊಬೈಲ್ ಮೂಲಕ ಬ್ಯಾಂಕಿಂಗ್ ವ್ಯವಹಾರಗಳನ್ನು ನಡೆಸಬಹುದಾಗಿದೆ. ಸಣ್ಣ ಬ್ಯಾಂಕಿಂಗ್ ವ್ಯವಹಾರಗಳಿಗಾಗಿ ಸುಮಾರು 1,500ರರವರೆಗಿನ ಎಸ್ಎಂಎಸ್ ಆಧಾರಿತ ಪಾವತಿ ವಿಧಾನವನ್ನು ಅನುಸರಿಸಲು ತನ್ನ ಡ್ರಾಫ್ಟ್‌ನಲ್ಲಿ ಆರ್‌ಬಿಐ ಅನುಮತಿ ನೀಡಿದೆ.

ಸುಮಾರು 1,500ರೂಪಾಯಿವರೆಗಿನ ಸಣ್ಣ ಪಾವತಿಗಳನ್ನು ಎಸ್ಎಂಎಸ್ ಆಧಾರಿತ ಪಾವತಿ ವಿದಾನದ ಮೂಲಕ ಮೊಬೈಲ್ ಬಳಕೆದಾರರು ಮಾಡಬಹುದಾಗಿದೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದ್ದು, ತಮ್ಮ ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಎಲ್ಲಾ ಪೋನ್ ನೆಟ್ವರ್ಕ್‌ಗಳಲ್ಲಿ ದೊರೆಯುವಂತೆ ಮಾಡಲು ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದೆ.

ಯಾವುದೇ ನೆಟ್ವರ್ಕ್ ಪೂರೈಕೆದಾರರೇ ಇರಲಿ ತ್ವರಿತಗತಿಯಲ್ಲಿ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣವನ್ನು ಎಸ್ಎಂಎಸ್ ಆಧಾರಿತ ಮೊಬೈಲ್ ಪಾವತಿ ವಿಧಾನದ ಮೂಲಕ ವರ್ಗಾಯಿಸಲು ಸಾಧ್ಯವಾಗಲಿದೆ ಎಂದು ಆರ್‌ಬಿಐ ತಿಳಿಸಿದೆ.
ಮತ್ತಷ್ಟು
ನೀರು ಚಾಲಿತ ಕಾರು ಅನಾವರಣ
ತೆರಿಗೆ ವಿವರ ಸಲ್ಲಿಸದವರ ವಿರುದ್ಧ ಕ್ರಮ
ಅಂಬಾನಿ ಕುಟುಂಬದಲ್ಲಿ ಮತ್ತೆ ಭಿನ್ನಮತ
ಆವಶ್ಯ ವಸ್ತುಗಳ ಬೆಲೆ ಶೇ.22ರಷ್ಟು ಏರಿಕೆ
ಉತ್ತಮ ಮಳೆಯಿಂದ ಹಣದುಬ್ಬರ ಹತೋಟಿ:ಅಹ್ಲುವಾಲಿಯಾ
ಪಾಕಿಸ್ತಾನದಿಂದ ಸಿಮೆಂಟ್ ಆಮದಿಗೆ ಚಿಂತನೆ