ಹಣದುಬ್ಬರ ನಿಯಂತ್ರಣಕ್ಕಾಗಿ ಸರಕಾರವು ಯಾವುದೇ ಮ್ಯಾಜಿಕ್ ಮಂತ್ರವನ್ನು ಹೊಂದಿಲ್ಲ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಸ್ಪಷ್ಟಪಡಿಸಿದ್ದು, ಹೆಚ್ಚುತ್ತಿರುವ ಕಚ್ಛಾತೈಲ ಬೆಲೆಯಿಂದಾಗಿ ಗ್ರಾಹಕರು ಹೆಚ್ಚು ಪಾವತಿ ಮಾಡಬೇಕು ಎಂದು ತಿಳಿಸಿದ್ದಾರೆ.
ಬೆಲೆ ಏರಿಕೆ ಬಿಸಿಯಿಂದ ಬಡವರನ್ನು ಪ್ರತ್ಯೇಕಿಸುವ ಸನ್ನಿವೇಶಗಳಿಗೆ .ಯಾಕೆಂದರೆ ಬಡ ಕುಟುಂಬಗಳಿಗೆ ಬೆಲೆ ಏರಿಕೆ ಆಘಾತವನ್ನು ನೀಡಲು ಸರಕಾರವು ಇಷ್ಟಪಡುವುದಿಲ್ಲ. ಆದರೆ, ಶ್ರೀಮಂತರನ್ನು ಬೆಲೆ ಏರಿಕೆಯಿಂದ ಪ್ರತ್ಯೇಕಿಸುವ ಉದಾಹರಣೆಯು ವಿರಳ ಎಂದು ಅವರು ಹೇಳಿದ್ದಾರೆ.
ವಾಸ್ತವವೆಂದರೆ, ಕಚ್ಛಾತೈಲ ಬೆಲೆಯು ಏರುತ್ತಾ ಹೋದಂತೆ ಸರಕಾರವು ಕೂಡಾ ಇದಕ್ಕಾಗಿ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಖಾಸಗಿ ಟಿವಿ ಚಾನೆಲ್ ಸಂದರ್ಶನವೊಂದರಲ್ಲಿ ಮಾಂಟೆಕ್ ಸಿಂಗ್ ತಿಳಿಸಿದ್ದಾರೆ.
ವಾಸ್ತವವೆಂದರೆ, ಕಚ್ಛಾತೈಲ ಬೆಲೆಯು ಏರುತ್ತಾ ಹೋದಂತೆ ಸರಕಾರವು ಕೂಡಾ ಇದಕ್ಕಾಗಿ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಖಾಸಗಿ ಟಿವಿ ಚಾನೆಲ್ ಸಂದರ್ಶನವೊಂದರಲ್ಲಿ ಮಾಂಟೆಕ್ ಸಿಂಗ್ ತಿಳಿಸಿದ್ದಾರೆ.
'ಸರಕಾರದೊಂದಿಗೆ ಯಾವುದೇ ಮ್ಯಾಜಿಕ್ ಮಂತ್ರವಿಲ್ಲ ಎಂಬುದನ್ನು ಹೇಳಲು ನಾನು ಹಿಂಜರಿಯುವುದಿಲ್ಲ. ಆಮದು ಬೆಲೆ ಹೆಚ್ಚಾದಲ್ಲಿ ಪ್ರಾದೇಶಿಕ ಗ್ರಾಹಕರನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ' ಎಂದು ಮಾಂಟೆಕ್ ಸಿಂಗ್ ಹೇಳಿದ್ದಾರೆ.
|