ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೇಪೋ ದರ ಇನ್ನಷ್ಟು ಹೆಚ್ಚಳ ಸಾಧ್ಯತೆ  Search similar articles
ಮುಂಬರುವ ವಾರಗಳಲ್ಲಿ ಸಗಟು ಬೆಲೆ ಆಧಾರಿತ ಹಣದುಬ್ಬರವು ಎರಡಂಕಿಗೆ ತಲುಪುವ ನಿರೀಕ್ಷೆಯೊಂದಿಗೆ ಹಣದುಬ್ಬರ ಹಾಗೂ ಬೆಲೆ ಏರಿಕೆಯನ್ನು ನಿಯಂತ್ರಿಸುವ ಪ್ರತಿಜ್ಞೆ ಹೊಂದಿರುವ ಯುಪಿಎ ಸರಕಾರವು, ರೇಪೋ ದರವನ್ನು ಮತ್ತಷ್ಟು ಹೆಚ್ಚಗೊಳಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕುಗಳ ಮೇಲೆ ಒತ್ತಡ ಹೇರುವ ಸಾಧ್ಯತೆಯಿದೆ.

ಸರಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಸಾಕಷ್ಟು ಕ್ರಮಗಳನ್ನು ಕೈಗೊಂಡಿರುವ ನಡುವೆಯೂ, ಜೂನ್ ಐದಕ್ಕೆ ಅಂತ್ಯಗೊಂಡ ವಾರದಲ್ಲಿ ಹಣದುಬ್ಬರವು 8.75ರಷ್ಟು ಏರುವ ಮೂಲಕ ಏಳು ವರ್ಷಗಳಲ್ಲೇ ಅಧಿಕ ಮಟ್ಟದ ಏರಿಕೆಯನ್ನು ಕಂಡಿತ್ತು. ಅಲ್ಲದೆ, ಇಂಧನ ಬೆಲೆ ಏರಿಕೆಯಿಂದಾಗಿ ಮುಂದಿನ ವಾರಗಳಲ್ಲಿ ಇನ್ನಷ್ಟು ವರ್ಧನೆಗೊಳ್ಳುವ ನಿರೀಕ್ಷೆಯಿದೆ.

ಗಗನಾಭಿಮುಖವಾಗಿ ಸಾಗುತ್ತಿರುವ ಹಣದುಬ್ಬರವು ಜುಲೈಯ ಹಣಕಾಸು ನೀತಿ ಯೋಜನೆಯ ಮುನ್ನ ಭಾರತೀಯ ರಿಸರ್ವ್ ಬ್ಯಾಂಕ್‌ರೇಪೋ ದರವನ್ನು ಮತ್ತೆ ಶೇ.0.25ರಷ್ಟು ಏರಿಸುವಂತೆ ಮಾಡಲಿದೆ ಎಂದು ಎಸ್‌ಡಿಎಫ್‌‍ಸಿ ಬ್ಯಾಂಕ್‌ನ ಮುಖ್ಯ ಆರ್ಥಿಕ ತಜ್ಞ ಅಬೀಕ್ ಬರುವಾ ಸುದ್ದಿಸಂಸ್ಥೆಗಳಿಗೆ ತಿಳಿಸಿದ್ದಾರೆ.

ಇಂಧನ ಬೆಲೆ ಏರಿಕೆಯ ಪ್ರಬಾವವು ಹಣದುಬ್ಬರ ಅಂಕಿಅಂಶಗಳಲ್ಲಿ ಪ್ರತಿಬಿಂಬಿಸುವುದರೊಂದಿಗೆ, 13 ವರ್ಷಗದಳಲ್ಲೇ ಅಧಿಕ ಮಟ್ಟದಲ್ಲಿ ಶೇ.ಹತ್ತರಷ್ಟು ಹಣದುಬ್ಬರವು ಏರಿಕೆಗೊಳ್ಳಲಿದೆ ಎಂದು ಇತರ ಆರ್ಥಿಕತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆರ್‌ಬಿಐಯು ತನ್ನ ರೇಪೋ ದರವನ್ನು ಶೇ.0.25ರಷ್ಟು ಮತ್ತು ನಗದು ಮೀಸಲು ಅನುಪಾತವನ್ನು ಶೇ.ಒಂದರಷ್ಟು ಏರಿಸುವ ನಿರೀಕ್ಷೆಯನ್ನು ಆರ್ಥಿಕತಜ್ಞರು ಹೊಂದಿದ್ದಾರೆ.
ಮತ್ತಷ್ಟು
ಸರಕಾರ 'ಮ್ಯಾಜಿಕ್ ಮಂತ್ರ ಹೊಂದಿಲ್ಲ': ಮಾಂಟೆಕ್ ಸಿಂಗ್
ಮೊಬೈಲ್ ಪಾವತಿ ವಿಧಾನಕ್ಕೆ ಆರ್‌ಬಿಐ ಅಂಗೀಕಾರ
ನೀರು ಚಾಲಿತ ಕಾರು ಅನಾವರಣ
ತೆರಿಗೆ ವಿವರ ಸಲ್ಲಿಸದವರ ವಿರುದ್ಧ ಕ್ರಮ
ಅಂಬಾನಿ ಕುಟುಂಬದಲ್ಲಿ ಮತ್ತೆ ಭಿನ್ನಮತ
ಆವಶ್ಯ ವಸ್ತುಗಳ ಬೆಲೆ ಶೇ.22ರಷ್ಟು ಏರಿಕೆ