ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಾಗತಿಕ ತೈಲ ಬೆಲೆ ಕುಸಿತ  Search similar articles
ಜಾಗತಿಕ ತೈಲ ಬೆಲೆಯು ದಶಕಗಳಲ್ಲೇ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ತೈಲ ಉತ್ಪಾದನೆಯನ್ನು ಹೆಚ್ಚಿಸುವ ಭರವಸೆಯನ್ನು ಸೌದಿ ಅರೇಬಿಯಾವು ನೀಡಿದ ನಂತರ, ಜಾಗತಿಕ ಮಾರುಕಟ್ಟೆಯು ತೈಲ ಬೆಲೆಯು ಅರ್ಧ ಪ್ರತಿಶತದಷ್ಟು ಇಳಿಕೆ ಕಂಡಿದ್ದು, ಪ್ರತಿ ಬ್ಯಾರಲಿಗೆ 134 ಡಾಲರ್ ತಲುಪಿದೆ.

ಜಗತ್ತಿನ ಅತಿ ದೊಡ್ಡ ತೈಲ ರಫ್ತುದಾರರು ತೈಲ ಉತ್ಪಾದನೆಯನ್ನು ಜುಲೈ ತಿಂಗಳಲ್ಲಿ 9.7 ಮಿಲಿಯನ್ ಬ್ಯಾರೆಲ್‌ಗೆ ಹೆಚ್ಚಿಸುವುದಾಗಿ ಹೇಳಿರುವುದನ್ನು ವಿಶ್ವಸಂಸ್ಥೆ ಮುಖ್ಯಸ್ಥ ಬಾನ್ ಕಿ ಮೂನ್ ತಿಳಿಸಿದ್ದರು.

ಪ್ರಸಕ್ತ ತೈಲ ಬೆಲೆಯು ಗಣನೀಯವಾಗಿ ಏರಿಕೆಗೊಂಡಿದ್ದು, ತೈಲ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸೌದಿ ಅರೇಬಿಯಾಗೆ ಸಾಧ್ಯವಿದೆ ಎಂದು ಸೌದಿ ದೊರೆ ಅಬ್ದುಲ್ಲಾ ಅವರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದ್ದವು.

ಈ ನಡುವೆ, ಒಪಿಇಸಿಯ ಅತಿ ದೊಡ್ಡ ತೈಲ ಉತ್ಪಾದಕರಾದ ಸೌದಿ ಅರೇಬಿಯಾವು ತೈಲ ಬೆಲೆ ವರ್ಧಿಸುವ ಮತ್ತು ತೈಲ ಬೆಲೆ ಇಳಿಸುವ ಕುರಿತಾದ ವಿಚಾರಗಳ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಮತ್ತಷ್ಟು
ವೆಚ್ಚ ಕಡಿತಕ್ಕೆ ಚಿದಂಬರಂ ಮನವಿ
ರೇಪೋ ದರ ಇನ್ನಷ್ಟು ಹೆಚ್ಚಳ ಸಾಧ್ಯತೆ
ಸರಕಾರ 'ಮ್ಯಾಜಿಕ್ ಮಂತ್ರ ಹೊಂದಿಲ್ಲ': ಮಾಂಟೆಕ್ ಸಿಂಗ್
ಮೊಬೈಲ್ ಪಾವತಿ ವಿಧಾನಕ್ಕೆ ಆರ್‌ಬಿಐ ಅಂಗೀಕಾರ
ನೀರು ಚಾಲಿತ ಕಾರು ಅನಾವರಣ
ತೆರಿಗೆ ವಿವರ ಸಲ್ಲಿಸದವರ ವಿರುದ್ಧ ಕ್ರಮ