ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೊಬೈಲ್ ಬಳಕೆಯಿಂದ ಮೆದುಳಿಗೆ ಅಪಾಯ: ಸರಕಾರ ಎಚ್ಚರಿಕೆ  Search similar articles
PTI
ಮೊಬೈಲ್ ಫೋನ್‌ಗಳಿಂದ ಹೊರಸೂಸುವ ವಿಕಿರಣಗಳಿಂದ ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮ ಬೀರುವುದರ ಕುರಿತು ಸರಕಾರವು ಎಚ್ಚರಿಕೆ ನೀಡಿದ್ದು, ಮಕ್ಕಳು ಮತ್ತು ಗರ್ಭಿಣಿಯರು ಸೆಲ್ ಪೋನ್ ಬಳಸುವಂತಹ ಜಾಹೀರಾತು ಪ್ರದರ್ಶಿಸುವುದನ್ನು ತಪ್ಪಿಸಬೇಕೆಂದು ಮೊಬೈಲ್ ನಿರ್ಮಾಣ ಕಂಪನಿಗಳಿಗೆ ಮನವಿ ಮಾಡಿದೆ.

ಮೊಬೈಲ್ ಪೋನ್‌ಗಳಿಂದ ಹೊರಸೂಸುವ ಎಲೆಕ್ಟ್ರೋಮ್ಯಾಗ್ನೆಟಿಕ್ ತರಂಗಗಳು ಮಾನವನ ಮೆದುಳಿನ ಜೀವಕೋಶದ ಮೇಲೆ ತೀವ್ರ ರೀತಿಯ ಪರಿಣಾಮವನ್ನು ಬೀರುತ್ತದೆ ಎಂದು ಟೆಲಿಕಮ್ಯುನಿಕೇಶನ್ ಸಚಿವಾಲಯದ ಇತ್ತೀಚಿನ ಸಲಹಾ ಸೂತ್ರಗಳು ತಿಳಿಸಿವೆ.

ಅಲ್ಲದೆ, ಮಕ್ಕಳು, ಗರ್ಭಿಣಿ ಮಹಿಳೆಯರು ಮತ್ತು ಹೃದಯ ಸಂಬಂಧಿ ಕಾಯಿಲೆಯನ್ನು ಹೊಂದಿರುವವರು ಮೊಬೈಲನ್ನು ಮಿತವಾಗಿ ಬಳಸುವಂತೆಯೂ ಈ ಸಲಹಾ ಪಟ್ಟಿಯಲ್ಲಿ ಸೂಚಿಸಲಾಗಿದೆ.

ಭಾರತದಲ್ಲಿ ಮೊಬೈಲ್ ಫೋನ್ ಬಳಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, 2010ರ ವೇಳೆಗೆ ಮೊಬೈಲ್ ಬಳಕೆದಾರರ ಸಂಖ್ಯೆಯು 500 ದಶಲಕ್ಷ ದಾಟುವ ಸಾಧ್ಯತೆ ಇದೆ.

ಸುರಕ್ಷತಾ ದೃಷ್ಟಿಯಿಂದ ಮತ್ತು ಯಾವತ್ತೂ ತಮ್ಮ ಸಂಪರ್ಕಕ್ಕೆ ದೊರಕುವ ಉದ್ದೇಶದಿಂದ ಹೆಚ್ಚಿನ ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್ ನೀಡುತ್ತಾರೆ ಆದರೆ ಇದು ಮಕ್ಕಳ ಆರೋಗ್ಯದ ಮೇಲೆ ತೀವ್ರ ರೀತಿಯ ಪರಿಣಾಮವನ್ನು ಬೀರುತ್ತದೆ ಎಂದು ಈ ಸಲಹಾಸೂತ್ರವು ಹೇಳುತ್ತದೆ.

ಮೊಬೈಲ್ ಬಳಕೆಯ ಸಂದರ್ಭದಲ್ಲಿ ಮೊಬೈಲನ್ನು ಹೆಚ್ಚು ಹೊತ್ತು ಕಿವಿಯ ಬಳಿ ಹಿಡಿದುಕೊಳ್ಳುವುದರಿಂದ ಮೊಬೈಲ್‌ನಿಂದ ಹೊರಸೂಸುವ ವಿಕಿರಣಗಳು ಮೆದುಳಿನ ಜೀವಕೋಶಗಳಿಗೆ ಅಪಾಯವನ್ನುಂಟುಮಾಡುತ್ತದೆ .

ಹದಿನಾರು ವಯಸ್ಸಿಗಿಂತ ಕಿರಿಯ ವಯಸ್ಸಿನ ಮಕ್ಕಳ ಜೀವಕೋಶಗಳು ಮೃದುವಾಗಿರುವ ಕಾರಣ ಮೊಬೈಲ್ ಬಳಕೆಯು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ 16 ವರ್ಷಕ್ಕಿಂತ ಕೆಳಗಿನ ಮಕ್ಕಳ ಕೈಗೆ ಮೊಬೈಲ್ ಕೊಡದೇ ಇರುವಂತೆ ಈ ಸಲಹಾಸೂತ್ರವು ಶಿಫಾರಸ್ಸು ಮಾಡಿದೆ.
ಮತ್ತಷ್ಟು
ಜಾಗತಿಕ ತೈಲ ಬೆಲೆ ಕುಸಿತ
ವೆಚ್ಚ ಕಡಿತಕ್ಕೆ ಚಿದಂಬರಂ ಮನವಿ
ರೇಪೋ ದರ ಇನ್ನಷ್ಟು ಹೆಚ್ಚಳ ಸಾಧ್ಯತೆ
ಸರಕಾರ 'ಮ್ಯಾಜಿಕ್ ಮಂತ್ರ ಹೊಂದಿಲ್ಲ': ಮಾಂಟೆಕ್ ಸಿಂಗ್
ಮೊಬೈಲ್ ಪಾವತಿ ವಿಧಾನಕ್ಕೆ ಆರ್‌ಬಿಐ ಅಂಗೀಕಾರ
ನೀರು ಚಾಲಿತ ಕಾರು ಅನಾವರಣ