ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಖಾದ್ಯ ತೈಲ ಆಮದಿನಲ್ಲಿ ಇಳಿಕೆ  Search similar articles
ವಿವಿಧ ರಾಜ್ಯ ಸರಕಾರಗಳಿಂದ ದಾಸ್ತಾನು ಮಿತಿ ಹೇರಲ್ಪಟ್ಟ ಪರಿಣಾಮವಾಗಿ ವ್ಯಾಪಾರಿಗಳು ಮತ್ತು ಶುದ್ಧೀಕರಣಗಾರರು ಸರಕುಪಟ್ಟಿಯನ್ನು ಕಡಿಮೆದೊಳಿಸಿದ ಫಲವಾಗಿ ಭಾರತ ಖಾದ್ಯ ತೈಲ ಆಮದಿನ ಪ್ರಮಾಣವು ಶೇ.39ರಷ್ಟು ಇಳಿಮುಖಗೊಂಡಿದೆ ಎಂದು ಆಮದು ಅಂಕಿ ಅಂಶಗಳು ತಿಳಿಸಿವೆ.

ಆಮದು ಖಾದ್ಯ ತೈಲವು ದಾಸ್ತಾನು ಮಿತಿಯಿಂದ ವಿನಾಯತಿ ಹೊಂದಿದ್ದರೂ, ವ್ಯಾಪಾರಿಗಳು ಸರಕಾರದ ಆದೇಶಕ್ಕೆ ತಲೆಬಾಗಿದ ಕಾರಣದಿಂದಾಗಿ ಖಾದ್ಯ ತೈಲ ಆಮದಿನ ಪ್ರಮಾಣವು ಮೇ ತಿಂಗಳಲ್ಲಿ 3.02ಲಕ್ಷ ಟನ್‌ಗೆ ಇಳಿಕೆಗೊಂಡಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ 4.94 ಲಕ್ಷ ಟನ್‌ಗಳಷ್ಟಿದ್ದ ಖಾದ್ಯ ತೈಲ ಪ್ರಮಾಣವು ಈ ವರ್ಷ ಮೇ ತಿಂಗಳಲ್ಲಿ 3.02 ಲಕ್ಷ ಟನ್‌ಗಳಿಗೆ ಇಳಿಯುವ ಮೂಲಕ ಶೇ.39ರಷ್ಟು ಇಳಿಕೆಗೊಂಡಿದೆ.

ಹೆಚ್ಚುತ್ತಿರುವ ಬೆಲೆಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಹೆಚ್ಚಿನ ರಾಜ್ಯ ಸರಕಾರಗಳು ಖಾದ್ಯ ತೈಲ ದಾಸ್ತಾನುವಿನ ಮೇಲೆ ಮಿತಿಯನ್ನು ಹೇರಿದ್ದವು. ಇದು ಆಮದು ಇಳಿಕೆಗೆ ಮುಖ್ಯ ಕಾರಣವಾಗಿದೆ.
ಮತ್ತಷ್ಟು
ಜಿಡಿಪಿ ಶೇ.9.5ರಷ್ಟು ಏರಿಕೆ ಸಾಧ್ಯತೆ: ಸಿಎಂಐಇ
ವಿಮಾ ಉತ್ಪನ್ನಗಳು ಸರಳವಾಗಿರಬೇಕು: ಚಿದಂಬರಂ
ಬೆಲೆ ಏರಿಕೆ ಆರ್ಥಿಕ ಸ್ಥಿರತೆಗೆ ಧಕ್ಕೆ: ಎಡಿಬಿ
ಮೊಬೈಲ್ ಬಳಕೆಯಿಂದ ಮೆದುಳಿಗೆ ಅಪಾಯ: ಸರಕಾರ ಎಚ್ಚರಿಕೆ
ಜಾಗತಿಕ ತೈಲ ಬೆಲೆ ಕುಸಿತ
ವೆಚ್ಚ ಕಡಿತಕ್ಕೆ ಚಿದಂಬರಂ ಮನವಿ