ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದಲ್ಲಿ ಬಂಡವಾಳ ಹೂಡಲು ಸೌದಿ ಒಲವು  Search similar articles
ವಿವಿಧ ಕ್ಷೇತ್ರಗಳ ಅಭಿವೃದ್ಧಿಯ ಸಂಭಾವ್ಯತೆಯನ್ನು ಪರಿಗಣಿಸಿ, ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ವೃದ್ಧಿಗೊಳಿಸಲು ಸೌದಿ ಅರೇಬಿಯಾವು ಚಿಂತನೆ ನಡೆಸಿದೆ.

ಭಾರತವು ಏಶಿಯಾದ ಮೂರನೇ ಅತಿ ದೊಡ್ಡ ರಾಷ್ಟ್ರವಾಗಿದ್ದು, ಚೀನಾದ ನಂತರ ಅತಿ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರವಾಗಿದೆ. ಅಲ್ಲದೆ, ವಿದೇಶಿ ಹೂಡಿಕೆಗಳಿಗೆ ತೀವ್ರ ರೀತಿಯ ಸಂಬಾವ್ಯತೆಯನ್ನೂ ಹೊಂದಿದೆ ಎಂದು ಸೌದಿ ಆರ್ಥಿಕ ಮತ್ತು ಅಭಿವೃದ್ಧಿ ಕಂಪನಿ(ಎಸ್ಇ‌ಡಿಸಿಒ) ಸಿಇಒ ಅಹ್ಮದ್ ಎಸ್.ಬನಾಜಾ ಹೇಳಿದ್ದಾರೆ.

ಮಾರ್ಚ್ 2008ರ ವೇಳೆಗೆ ಭಾರತದ ವಿದೇಶಿ ವಿನಿಮಯ ಆಸ್ತಿಪಾಸ್ತಿಯು 300 ಶತಕೋಟಿ ಡಾಲರ್ ದಾಟಿರುವುದರೊಂದಿಗೆ, ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸುವ ಎಲ್ಲಾ ಅನುಕೂಲತೆಗಳನ್ನು ಹೊಂದಿದೆ ಎಂದು ಹೇಳಿದರು.

ಸ್ಥಳೀಯ ಪಾಲುದಾರರೊಂದಿಗಿನ ತನ್ನ ಜಂಟಿ ಯೋಜನೆಗಳಾದ ಬೆಂಗಳೂರಿನಲ್ಲಿ ವಿಶ್ವಮಟ್ಟದ ಪಾರ್ಕ್ ಮತ್ತು ಹೈದರಾಬಾದಿಲ್ಲಿನ ಆಧುನಿಕ ವಸತಿಗೃಹ ಸಂಕೀರ್ಣವು ಪ್ರಗತಿಯ ಹಂತದಲ್ಲಿದೆ ಎಂದು ಎಸ್ಇಡಿಸಿಒ ಹಣಕಾಸು ಬಂಡವಾಳದ ಉಪಾಧ್ಯಕ್ಷ ಖಾಲಿದ್ ಎ.ಗಾಮಾ ತಿಳಿಸಿದ್ದಾರೆ.
ಮತ್ತಷ್ಟು
ಖಾದ್ಯ ತೈಲ ಆಮದಿನಲ್ಲಿ ಇಳಿಕೆ
ಜಿಡಿಪಿ ಶೇ.9.5ರಷ್ಟು ಏರಿಕೆ ಸಾಧ್ಯತೆ: ಸಿಎಂಐಇ
ವಿಮಾ ಉತ್ಪನ್ನಗಳು ಸರಳವಾಗಿರಬೇಕು: ಚಿದಂಬರಂ
ಬೆಲೆ ಏರಿಕೆ ಆರ್ಥಿಕ ಸ್ಥಿರತೆಗೆ ಧಕ್ಕೆ: ಎಡಿಬಿ
ಮೊಬೈಲ್ ಬಳಕೆಯಿಂದ ಮೆದುಳಿಗೆ ಅಪಾಯ: ಸರಕಾರ ಎಚ್ಚರಿಕೆ
ಜಾಗತಿಕ ತೈಲ ಬೆಲೆ ಕುಸಿತ