ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೋಕಿಯಾದಿಂದ ನೂತನ ಇ ಸಿರೀಸ್ ಮೊಬೈಲ್  Search similar articles
PTI
ವಿಶ್ವದ ಅತಿ ದೊಡ್ಡ ಮೊಬೈಲ್ ನಿರ್ಮಾಣ ಸಂಸ್ಥೆ ಎಂಬ ಸ್ಥಾನವನ್ನು ರಕ್ಷಿಸಿಕೊಳ್ಳುವ ಸಲುವಾಗಿ, ಮೊಬೈಲ್ ನಿರ್ಮಾಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನೋಕಿಯಾ ವ್ಯವಹಾರ ಉದ್ಯಮಿಗಳನ್ನು ಗುರಿಯಾಗಿರಿಸಿಕೊಂಡು, ನೂತನ ಇಮೈಲ್ ಯೋಗ್ಯ ಮೊಬೈಲ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ನೋಕಿಯಾದ ನೂತನ ಇ71 ಮತ್ತು ಇ 76 ಮಾಡೆಲ್‌ಗಳು ಮೈಕ್ರೋಸಾಫ್ಟ್‌ನ ಪ್ರಮುಖ ಇಮೈಲ್ ಪ್ರೋಗ್ರಾಂ ಪ್ರೀಲೋಡ್ ಆಗಿರುವುದರೊಂದಿಗೆ, ತ್ವರಿತ ಸುಲಭ ಇಮೈಲ್‌ ಗಳನ್ನು ಬಯಸುವಂತಹ ವ್ಯವಹಾರ ವೃತ್ತಿನಿರತರಿಗೆ ಅನುಕೂಲಕರವಾಗ ರೀತಿಯಲ್ಲಿದೆ.

ತಮ್ಮ ವೃತ್ತಿಯಲ್ಲಿ ಮೊಬೈಲ್ ಮೂಲಕ ತ್ವರಿತ ಇಂಟರ್ನೆಟ್ ಸೇವೆ ಬಯಸುವವರಿಗಾಗಿ ಇ ಸಿರೀಸ್ ಮೊಬೈಲ್ ಪೋನ್‌ಗಳನ್ನು ನೋಕಿಯಾ ಬಿಡುಗಡೆ ಮಾಡುತ್ತಿದೆ ಎಂದು ನೋಕಿಯಾ ಉಪಾಧ್ಯಕ್ಷ ಕ್ರಿಸ್ ಕಾರ್ ಮೊಬೈಲ್ ಅನಾವರಣದ ವೇಳೆ ತಿಳಿಸಿದ್ದಾರೆ.

ಈ ಎರಡೂ ಇ ಸಿರೀಸ್ ಫೋನ್‌ಗಳು ಜುಲೈ ತಿಂಗಳಲ್ಲಿ ದೊರೆಯಲಿದ್ದು, ಯಾಹೂ, ಗೂಗಲ್, ಜಿಮೈಲ್ ಮುಂತಾದವುಗಳ ಸಂಪರ್ಕಇದರಲ್ಲಿ ಸಾಧ್ಯವಾಗಲಿದೆ.

ಜಾಗತಿಕವಾಗಿ, ಅಂದಾಜು 1.5 ಶತಕೋಟಿ ಇಮೈಲ್ ಬಳಕೆದಾರರಿದ್ದು, ಇದರಲ್ಲಿ 2009ರ ವೇಳೆಗೆ ನಾಲ್ಕು ಶತಕೋಟಿ ಮಂದಿ ಮೊಬೈಲ್ ಇಂಟರ್ನೆಟ್ ಬಳಕೆದಾರರಾಗಿ ಹೊರಹೊಮ್ಮಲಿದ್ದಾರೆ.
ಮತ್ತಷ್ಟು
ಭಾರತದ ಬಂಡವಾಳ ಹೂಡಲು ಸೌದಿ ಒಲವು
ಖಾದ್ಯ ತೈಲ ಆಮದಿನಲ್ಲಿ ಇಳಿಕೆ
ಜಿಡಿಪಿ ಶೇ.9.5ರಷ್ಟು ಏರಿಕೆ ಸಾಧ್ಯತೆ: ಸಿಎಂಐಇ
ವಿಮಾ ಉತ್ಪನ್ನಗಳು ಸರಳವಾಗಿರಬೇಕು: ಚಿದಂಬರಂ
ಬೆಲೆ ಏರಿಕೆ ಆರ್ಥಿಕ ಸ್ಥಿರತೆಗೆ ಧಕ್ಕೆ: ಎಡಿಬಿ
ಮೊಬೈಲ್ ಬಳಕೆಯಿಂದ ಮೆದುಳಿಗೆ ಅಪಾಯ: ಸರಕಾರ ಎಚ್ಚರಿಕೆ