ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಸ್ಮತಿಯೇತರ ಅಕ್ಕಿ ರಫ್ತು ನಿಷೇಧ ಹಿಂತೆಗೆತ  Search similar articles
ಹೆಚ್ಚುತ್ತಿರುವ ದೇಶೀಯ ಬೆಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬಾಸ್ಮತಿಯೇತರ ಅಕ್ಕಿ ರಫ್ತಿನ ಮೇಲೆ ಹೇರಲಾಗಿದ್ದ ನಿಷೇಧವನ್ನು ಸರಕಾರವು ಹಿಂತೆಗೆಯಲಿದ್ದು, ಮುಂದಿನ ನವೆಂಬರ್ ತಿಂಗಳಿನಿಂದ ಭಾರತವು ಬಾಸ್ಮತಿಯೇತರ ಅಕ್ಕಿ ರಫ್ತನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

ಅಂತಾರಾಷ್ಟ್ರೀಯ ಅಕ್ಕಿ ಮಾರುಕಟ್ಟೆಯ ಒಟ್ಟು 28 ದಶಲಕ್ಷ ಟನ್‌ಗಳಲ್ಲಿ ಭಾರತದ ನಾಲ್ಕು ದಶಲಕ್ಷ ಟನ್ ರಫ್ತಿನ ಪ್ರಮಾಣವು ಭವಿಷ್ಯದಲ್ಲಿ ಜಗತ್ತಿನ ಅಕ್ಕಿ ಕೊರತೆಯನ್ನು ನೀಗಿಸಲು ಸಹಾಯಕವಾಗುವುದರೊಂದಿಗೆ, ಅಧಿಕ ರಫ್ತು ಬೆಲೆಯಿಂದಾಗಿ ರೈತರಿಗೂ ಲಾಭಉಂಟಾಗಲಿದೆ.

ಅಕ್ಕಿ ಉತ್ಪಾದನೆಯಲ್ಲಿನ ಹೆಚ್ಚಳದ ಸಾಧ್ಯತೆಯೊಂದಿಗೆ, ನವೆಂಬರ್ ತಿಂಗಳಲ್ಲಿ ಅಕ್ಕಿ ರಫ್ತು ನಿಷೇಧವನ್ನು ಹಿಂತೆಗೆಯಲಾಗುವುದು ಎಂದು ವಾಣಿಜ್ಯ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ತಿಳಿಸಿದ್ದಾರೆ.

ದೇಶದಲ್ಲಿ 200708ರ ಅವಧಿಯಲ್ಲಿ ಸುಮಾರು 94 ದಶಲಕ್ಷ ಟನ್ ಅಕ್ಕಿ ಉತ್ಪಾದನೆಯಾಗಿದ್ದಲ್ಲಿ, ಸುಮಾರು ಮೂರರಿಂದ ನಾಲ್ಕು ದಶಲಕ್ಷ ಟನ್ ಹೆಚ್ಚುವರಿ ಅಕ್ಕಿ ಸಂಗ್ರಹಣೆಯಿರುವ ಸಾಧ್ಯತೆಯಿದ್ದು, ಇದನ್ನು ರಫ್ತಿಗಾಗಿ ಬಳಸಬಹುದಾಗಿದೆ ಎಂದು ಪಿಳ್ಳೈ ಸುದ್ದಿಗಾರಿರಗೆ ತಿಳಿಸಿದ್ದಾರೆ.

ಸರಕಾರದ ಈ ಕ್ರಮಕ್ಕೆ ಅನೇಕ ರಾಜಕೀಯ ಟೀಕೆಗಳು ಹರಿದುಬರಬಹುದು. ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಾಭ ಉಂಟಾಗುವ ದೃಷ್ಟಿಯಿಂದ ಸರಕಾರವು ಈ ನಿರ್ಧಾರವನ್ನು ಕೈಗೊಂಡಿದೆ. ಅಲ್ಲದೆ, ರೈತರಿಗೆ ನೀಡುವ ಕನಿಷ್ಟ ಬೆಂಬಲ ಬೆಲೆಯು ಅತಿ ಕಡಿಮೆ ಎಂದು ಬಿಜೆಪಿ ಪಕ್ಷದ ದೂರಿನ ಹಿನ್ನೆಲೆಯಲ್ಲಿ ಈ ನಿರ್ಧಾರವು ಸಹಾಯಕವಾಗಲಿದೆ ಎಂದು ಪಿಳ್ಳೈ ತಿಳಿಸಿದರು.
ಮತ್ತಷ್ಟು
ಯಾಹೂ ಜೊತೆಗಿನ ಒಪ್ಪಂದ ಲಾಭದಾಯಕ: ಗೂಗಲ್
ಆಹಾರ ಕೊರತೆ ನಿರ್ವಹಣೆಗೆ ಮೊದಲ ಆದ್ಯತೆ: ನಾಥ್
ನೋಕಿಯಾದಿಂದ ನೂತನ ಇ ಸಿರೀಸ್ ಮೊಬೈಲ್
ಭಾರತದಲ್ಲಿ ಬಂಡವಾಳ ಹೂಡಲು ಸೌದಿ ಒಲವು
ಖಾದ್ಯ ತೈಲ ಆಮದಿನಲ್ಲಿ ಇಳಿಕೆ
ಜಿಡಿಪಿ ಶೇ.9.5ರಷ್ಟು ಏರಿಕೆ ಸಾಧ್ಯತೆ: ಸಿಎಂಐಇ