ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸದ್ಯದಲ್ಲೇ ಅಂಚೆಕಚೇರಿಗಳ ಅಂತರ್ ಸಂಪರ್ಕ  Search similar articles
ದೇಶದಲ್ಲಿರುವ ಎಲ್ಲಾ ಅಂಚೆಕಚೇರಿಗಳು ಕೆಲವೇ ವರ್ಷದೊಳಗೆ ಅಂತರ್ ಸಂಪರ್ಕಿತಗೊಳ್ಳಲಿದೆ ಎಂದು ಅಂಚೆ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವರ್ಷದೊಳಗೆ ದೇಶದಲ್ಲಿರುವ ಎಲ್ಲಾ ಅಂಚೆಕಚೇರಿಗಳು ಪರಸ್ಪರ ಅಂತರ್ ಸಂಪರ್ಕಗೊಳ್ಳಲಿದ್ದು, ಈ ಮೂಲಕ ಯಾವುದೇ ವ್ಯಕ್ತಿಯು ಯಾವುದೇ ಪ್ರದೇಶದಲ್ಲಿದ್ದುಕೊಂಡು ಯಾವುದೇ ಅಂಚೆಕಚೇರಿಯಿಂದ ಹಣಕಾಸು ವ್ಯವಹಾರಗಳನ್ನು ನಡೆಸಬಹುದಾಗಿದೆ ಎಂದು ಪಂಜಾಬ್ ಪ್ರಧಾನ ಅಂಚೆ ಅಧಿಕಾರಿ ಪೃಥ್ವಿ ರಾಜ್ ಕುಮಾರ್ ತಿಳಿಸಿದ್ದಾರೆ.

ಸ್ಥಾನಮಾನ ಪಡೆದ ಬ್ಯಾಂಕಿಂಗ್ ಸಂಸ್ಥೆಗಳಂತೆಯೇ ಭಾರತೀಯ ಅಂಚೆಯು ಸದ್ಯದಲ್ಲಿಯೇ ಕಾರ್ಯನಿರ್ವಹಿಸಲಿದೆ ಎಂದ ಅವರು, ರಖಂ ಮತ್ತು ಇತರ ವ್ಯವಹಾರಗಳಿಗಾಗಿ ಕೆಲವು ಸ್ಥಳಗಳನ್ನು ಬಾಡಿಗೆಗೆ ಪಡೆಯಲು ಅಂಚೆ ವಿಭಾಗವು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಅಂಚೆ ವಿಭಾಗವು ಕೇರಳ ಸಂಬಾರ ಪದಾರ್ಥಮಂಡಳಿಯೊಂದಿಗೆ ಈಗಾಗಲೇ ಕೈಜೋಡಿಸಿದ್ದು, ಈ ಹೊಂದಾಣಿಕೆಯಡಿಯಲ್ಲಿ ಅಂಚೆ ವಿಭಾಗದ ಮೂಲಕ ಸಂಬಾರ ಪದಾರ್ಧಗಳ ವ್ಯಾಪಾರಾದೇಶವನ್ನು ಮಾಡಬಹುದಾಗಿದೆ ಎಂದು ಕುಮಾರ್ ತಿಳಿಸಿದ್ದಾರೆ.

ಇದರೊಂದಿಗೆ, ಅಸ್ಸಾಂ ಚಹಾ ಮತ್ತು ತಿರುಪತಿ ಪ್ರಸಾದದೊಂದಿಗೂ ಕೈಜೋಡಿಸಿದ್ದು, ಅಂಚೆ ಮೂಲಕವೇ ಇವುಗಳನ್ನು ಪಡೆದುಕೊಳ್ಳಬಹುದಾಗಿದೆ.

ರಿಟೈಲ್ ಪೋಸ್ಟ್, ಬಿಲ್ ಮೈಲ್ ಸರ್ವೀಸ್ ಮುಂತಾದ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿಯೂ ಟೆಲಿಕಾಂ ಸಂಸ್ಥೆಗಳಾದ ಬಿಎಸ್ಎನ್ಎಲ್, ರಿಲಾಯನ್ಸ್, ವಡಾಫೋನ್, ಏರ್‌ಟೆಲ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಅಂಚೆ ಇಲಾಖೆಯು ನಿರ್ಧಿರಿಸಿದೆ.
ಮತ್ತಷ್ಟು
ಬಾಸ್ಮತಿಯೇತರ ಅಕ್ಕಿ ರಫ್ತು ನಿಷೇಧ ಹಿಂತೆಗೆತ
ಯಾಹೂ ಜೊತೆಗಿನ ಒಪ್ಪಂದ ಲಾಭದಾಯಕ: ಗೂಗಲ್
ಆಹಾರ ಕೊರತೆ ನಿರ್ವಹಣೆಗೆ ಮೊದಲ ಆದ್ಯತೆ: ನಾಥ್
ನೋಕಿಯಾದಿಂದ ನೂತನ ಇ ಸಿರೀಸ್ ಮೊಬೈಲ್
ಭಾರತದಲ್ಲಿ ಬಂಡವಾಳ ಹೂಡಲು ಸೌದಿ ಒಲವು
ಖಾದ್ಯ ತೈಲ ಆಮದಿನಲ್ಲಿ ಇಳಿಕೆ