ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್‌ನ- ಭಾರತ ವ್ಯವಹಾರ ಕೊರತೆ 894 ಮಿ.ಡಾ.  Search similar articles
ಪ್ರಸಕ್ತ ಹಣಕಾಸು ವರ್ಷದ ಮೊದಲ ಹತ್ತು ತಿಂಗಳಲ್ಲಿ ಭಾರತದೊಂದಿಗಿನ ಭಾರತದ ವ್ಯಾಪಾರ ಅಸಮತೋಲನವು 894 ದಶಲಕ್ಷ ಡಾಲರ್ ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 866 ದಶಲಕ್ಷ ಡಾಲರ್ ಆಗಿತ್ತು ಎಂದು ವ್ಯಾಪಾರ ಮತ್ತು ವಾಣಿಜ್ಯ ಸಚಿವಾಲಯಗಳು ತಿಳಿಸಿವೆ.

ಜುಲೈ 2007 ಮತ್ತು ಏಪ್ರಿಲ್ 2008ರ ನಡುವಿನಲ್ಲಿ ಪಾಕಿಸ್ತಾನವು ಅಧಿಕೃತವಾಗಿ ಸುಮಾರು 1,209 ಶತಕೋಟಿ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಭಾರತದಿಂದ ಆಮದು ಮಾಡಿಕೊಂಡಿದ್ದು, ಕಳೆದ ವರ್ಷ ಇದೇ ಅವಧಿಯ 1,181 ಶತಕೋಟಿ ಡಾಲರ್ ಮೌಲ್ಯದ ಆಮದಿಗೆ ಹೋಲಿಸಿದರೆ, ಪ್ರಸಕ್ತ ವರ್ಷದಲ್ಲಿ 28,000 ಡಾಲರ್ ಹೆಚ್ಚಳ ಉಂಟಾಗಿದೆ.

ಇದೇ ಅವಧಿಯಲ್ಲಿ ಪಾಕಿಸ್ತಾನವು ಭಾರತಕ್ಕೆ 227 ದಶಲಕ್ಷ ಡಾಲರ್ ಮೌಲ್ಯದ ರಫ್ತು ಮಾಡಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಇದರ ಪ್ರಮಾಣವು 315 ದಶಲಕ್ಷ ಡಾಲರ್‌ಗಳಾಗಿತ್ತು.

ಕಳೆದ ವರ್ಷ ಭಾರತೀಯ ರಕ್ಷಣಾ ಮತ್ತು ವಿನಿಮಯ ಮಂಡಳಿ(ಸೆಬಿ) ಮತ್ತು ಪಾಕಿಸ್ತಾನ ರಕ್ಷಣಾ ಮತ್ತು ವಿನಿಮಯ ಆಯೋಗ(ಎಸ್ಇಸಿಪಿ) ಎರಡೂ ಸಂಸ್ಥೆಗಳ ನಡುವೆ ಮಾಹಿತಿ ವಿನಿಮಯಕ್ಕಾಗಿ ಒಪ್ಪಂದವೊಂದಕ್ಕೆ ಸಹಿ ಹಾಕಿತ್ತು.

ಈ ಒಪ್ಪಂದವು ಎರಡೂ ದೇಶಗಳಲ್ಲಿನ ವ್ಯಾಪಾರಿಗಳ ವಿಶ್ವಾಸವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಪಾಕಿಸ್ತಾನದ ವ್ಯಾಪಾರಿ ಮಂಡಳಿ ಹಾಗೂ ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.

ಉಭಯ ದೇಶಗಳ ನಡುವಿನ ಈ ವ್ಯಾಪಾರ ಅಸಮತೋಲನವನ್ನು ಸರಿಪಡಿಸಲು ಭಾರತ ಮತ್ತು ಪಾಕಿಸ್ತಾನವು ನೂತನ ದ್ವಿಪಕ್ಷೀಯ ವ್ಯಾಪಾರ ನೀತಿಯನ್ನು ಅನುಸರಿಸಬೇಕೆಂದು ಪಾಕಿಸ್ತಾನದ ವ್ಯಾಪಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನವು ನೂರಾರು ಉತ್ಪನ್ನಗಳನ್ನು ಇತರ ದೇಶಗಳಿಗೆ ರಫ್ತು ಮಾಡುತ್ತಿದ್ದು, ಅದರಲ್ಲಿ ಕೆಲವು ಉತ್ಪನ್ನಗಳು ಭಾರತಕ್ಕೆ ಆವಶ್ಯವಿದ್ದದ್ದಾಗಿದೆ. ಇಂತಹ ಉತ್ಪನ್ನಗಳನ್ನು ಭಾರತಕ್ಕೆ ರಫ್ತು ಮಾಡುವ ಮೂಲಕ ವ್ಯಾಪಾರ ಸಮತೋಲನವನ್ನು ಎರಡೂ ದೇಶಗಳು ಕಾಯ್ದುಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು
ಸದ್ಯದಲ್ಲೇ ಅಂಚೆಕಚೇರಿಗಳ ಅಂತರ್ ಸಂಪರ್ಕ
ಬಾಸ್ಮತಿಯೇತರ ಅಕ್ಕಿ ರಫ್ತು ನಿಷೇಧ ಹಿಂತೆಗೆತ
ಯಾಹೂ ಜೊತೆಗಿನ ಒಪ್ಪಂದ ಲಾಭದಾಯಕ: ಗೂಗಲ್
ಆಹಾರ ಕೊರತೆ ನಿರ್ವಹಣೆಗೆ ಮೊದಲ ಆದ್ಯತೆ: ನಾಥ್
ನೋಕಿಯಾದಿಂದ ನೂತನ ಇ ಸಿರೀಸ್ ಮೊಬೈಲ್
ಭಾರತದಲ್ಲಿ ಬಂಡವಾಳ ಹೂಡಲು ಸೌದಿ ಒಲವು