ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್‌ಬಿಐ ಹಣಕಾಸು ನೀತಿ ಭಿಗಿಗೊಳಿಸಬೇಕು: ಚಿದಂಬರಂ  Search similar articles
ಯುಪಿಎ ಆಡಳಿತದ ಅವಧಿಯಲ್ಲಿ ಹಣದುಬ್ಬರವು ಏಳು ವರ್ಷಗಳಲ್ಲೇ ಅಧಿಕ ಮಟ್ಟಕ್ಕೆ ತಲುಪಿರುವ ಬಗ್ಗೆ ಹಣಕಾಸು ಸಚಿವ ಪಿ.ಚಿದಂಬರಂ ಆತಂಕ ವ್ಯಕ್ತಪಡಿಸಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಹಣಕಾಸು ನೀತಿಯನ್ನು ಇನ್ನಷ್ಟು ಬಿಗಿಗೊಳಿಸಬೇಕೆಂದು ಸೂಚಿಸಿದ್ದಾರೆ.

ಹಣದುಬ್ಬರವು ಅಧಿಕ ಮಟ್ಟದಲ್ಲಿದೆ. ಆರ್‌ಬಿಐ ಈಗಾಗಲೇ ಕ್ರಮಗಳನ್ನು ಕೈಗೊಂಡಿದ್ದು, ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಚಿದಂಬರಂ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಡ್ಡಿದರದ ಮೇಲೆ ಒತ್ತಡ ಹೇರುವ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ ರೇಪೋ ದರವನ್ನು ಶೇ0.25ರಷ್ಟು ಹೆಚ್ಚುಗೊಳಿಸಿದ ನಂತರ, ಇದು ಹಣಕಾಸು ಸಚಿವರ ಮೊದಲ ಹೇಳಿಕೆಯಾಗಿದೆ.

ಹಣದುಬ್ಬರವು ಶೇ.8.75ರಷ್ಟು ಏರಿಕೆಗೊಂಡಿದ್ದು, ಮುಂದಿನ ವಾರದ ಹಣದುಬ್ಬರವು ಇಂಧನ ಬೆಲೆ ಏರಿಕೆ ಪರಿಣಾಮವನ್ನು ಪ್ರತಿಬಿಂಬಿಸುವುದರಿಂದ ಶೇ.ಒಂಬತ್ತರ ಗಡಿಯನ್ನು ದಾಟುವ ನಿರೀಕ್ಷೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು
ಪಾಕ್‌ನ- ಭಾರತ ವ್ಯವಹಾರ ಕೊರತೆ 894 ಮಿ.ಡಾ.
ಸದ್ಯದಲ್ಲೇ ಅಂಚೆಕಚೇರಿಗಳ ಅಂತರ್ ಸಂಪರ್ಕ
ಬಾಸ್ಮತಿಯೇತರ ಅಕ್ಕಿ ರಫ್ತು ನಿಷೇಧ ಹಿಂತೆಗೆತ
ಯಾಹೂ ಜೊತೆಗಿನ ಒಪ್ಪಂದ ಲಾಭದಾಯಕ: ಗೂಗಲ್
ಆಹಾರ ಕೊರತೆ ನಿರ್ವಹಣೆಗೆ ಮೊದಲ ಆದ್ಯತೆ: ನಾಥ್
ನೋಕಿಯಾದಿಂದ ನೂತನ ಇ ಸಿರೀಸ್ ಮೊಬೈಲ್