ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಲಮನ್ನಾ : ಅರ್ಹ ರೈತರ ಪಟ್ಟಿ ನೀಡಲು ಸೂಚನೆ  Search similar articles
ಸಾಲಮನ್ನಾ ಯೋಜನೆಗೆ ಅರ್ಹರಾಗಿರುವ ರೈತರ ಪಟ್ಟಿಯನ್ನು ಜೂನ್ 25ರೊಳಗೆ ಸಲ್ಲಿಸುವಂತೆ ಹಣಕಾಸು ಸಚಿವ ಪಿ.ಚಿದಂಬರಂ ಸರಕಾರಿ ನಿಯಂತ್ರಿತ ಬ್ಯಾಂಕುಗಳಿಗೆ ಕರೆ ನೀಡಿದ್ದು, ಈ ಮೂಲಕ,ಬಜೆಟ್‌ನಲ್ಲಿ ನಮೂದಿಸಿರುವ ಸಾಲಮನ್ನಾ ಯೋಜನೆಯನ್ನು ಈ ತಿಂಗಳೊಳಗೆ ಪೂರ್ಣಗೊಳಿಸಬಹುದೆಂದು ಅಭಿಪ್ರಾಯಪಟ್ಟಿದ್ದಾರೆ.

ಜೂನ್ 25ರೊಳಗೆ ಸಾಲ ಮನ್ನಾ ಯೋಜನೆಯ ಅರ್ಹ ರೈತರ ಪಟ್ಟಿಯನ್ನು ಬ್ಯಾಂಕುಗಳಿಂದ ಪಡೆಯುವ ವಿಶ್ವಾಸವನ್ನು ಹೊಂದಿದ್ದೇನೆ ಎಂದು ಹಣಕಾಸು ಸಚಿವರು ವೀಡಿಯೋ ಕಾನ್ಫರೆನ್ಸ್ ಮೂಲಕ ಪಿಎಸ್‌ಯು ಬ್ಯಾಂಕುಗಳ ಮುಖ್ಯಸ್ಥರಿಗೆ ತಿಳಿಸಿದ್ದಾರೆ.

ಜೂನ್ 23ರರೊಳಗೆ ಸಾಲ ಮನ್ನಾ ಯೋಜನೆಗೆ ಕುರಿತಂತೆ ರೈತರ ಅರ್ಹತೆಗಳನ್ನು ಸರಿಯಾಗಿ ಪರಿಶೀಲನೆಯನ್ನು ನಡೆಸಿ ನಂತರ ಪಟ್ಟಿಯನ್ನು ತಯಾರಿಸುವಂತೆ ಚಿದಂಬರಂ ಬ್ಯಾಂಕುಗಳಿಗೆ ಸೂಚನೆ ನೀಡಿದ್ದಾರೆ.

ಪಟ್ಟಿಯು ತಯಾರಾಗಿದೆ ಎಂಬುದನ್ನು ದೃಢಪಡಿಸಿಕೊಳ್ಳಲು ಜೂನ್ 24ರಂದು ಹಣಕಾಸು ಸೇವಾ ಕಾರ್ಯದರ್ಶಿ ಅರುಣ್ ರಾಮನಾಥನ್ ಎಲ್ಲಾ ಪಿಎಸ್‌ಯು ಬ್ಯಾಂಕುಗಳನ್ನು ಸಂಪರ್ಕಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು
ವಿಚಾರಣೆಗೊಳಪಡಲಿರುವ ಯಾಹೂ-ಗೂಗಲ್ ಒಪ್ಪಂದ
ಆರ್‌ಬಿಐ ಹಣಕಾಸು ನೀತಿ ಭಿಗಿಗೊಳಿಸಬೇಕು: ಚಿದಂಬರಂ
ಪಾಕ್‌ನ- ಭಾರತ ವ್ಯವಹಾರ ಕೊರತೆ 894 ಮಿ.ಡಾ.
ಸದ್ಯದಲ್ಲೇ ಅಂಚೆಕಚೇರಿಗಳ ಅಂತರ್ ಸಂಪರ್ಕ
ಬಾಸ್ಮತಿಯೇತರ ಅಕ್ಕಿ ರಫ್ತು ನಿಷೇಧ ಹಿಂತೆಗೆತ
ಯಾಹೂ ಜೊತೆಗಿನ ಒಪ್ಪಂದ ಲಾಭದಾಯಕ: ಗೂಗಲ್