ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೋಧಿ ಉತ್ಪಾದನೆಯಲ್ಲಿ ಹೆಚ್ಚಳ  Search similar articles
ದೇಶದ ಗೋಧಿ ಉತ್ಪಾದನೆಯು 2007-8ರ ಅವಧಿಯಲ್ಲಿ 78 ದಶಲಕ್ಷ ಟನ್‌ಗಳಿಗೆ ತಲುಪಿದ್ದು, ಇದು ಸರಕಾರದ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಾಗಿದೆ.

ಈ ಅವಧಿಯಲ್ಲಿ ಗೋಧಿ ಉತ್ಪಾದನೆಯು 78 ದಶಲಕ್ಷ ಟನ್‌ಗಳಿಗೆ ತಲುಪಿದೆ ಎಂದು ಭಾರತೀಯ ಆಹಾರ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಅಲೋಕ್ ಸಿನ್ಹಾ ತಿಳಿಸಿದ್ದಾರೆ.

ಕಳೆದ ವರ್ಷದ 75.81 ದಶಲಕ್ಷ ಟನ್ ಗೋಧಿ ಉತ್ಪಾದನೆಯನ್ನು ಆಧರಿಸಿ ಸರಕಾರವು ತನ್ನ ಪೂರ್ವ ಅಂದಾಜಿನಲ್ಲಿ 2007-08ರ ಅವಧಿಯಲ್ಲಿ 76.78 ದಶಲಕ್ಷ ಟನ್ ಗೋಧಿ ಉತ್ಪಾದನೆಯನ್ನು ನಿರೀಕ್ಷಿಸಿತ್ತು.

ದಾಖಲೆಯುತ ಉತ್ಪಾದನೆ ಮತ್ತು ಗರಿಷ್ಠ ಬೆಂಬಲ ಬೆಲೆಯ ಕಾರಣದಿಂದಾಗಿ, ಆಹಾರ ಉತ್ಪನ್ನ ಸಂಗ್ರಹಣಾ ಮತ್ತು ಸರಬರಾಜು ಸಂಸ್ಥೆಯು ರಾಜ್ಯ ಸಂಸ್ಥೆಗಳೊಂದಿಗೆ ಸುಮಾರು 22.14 ದಶಲಕ್ಷ ಟನ್ ಗೋಧಿಯನ್ನು ಸಂಗ್ರಹಸಿದೆ.

ಅತಿ ಹೆಚ್ಚು ಗೋಧಿ ಬೇಡಿಕೆಯ ಸಮಯದಲ್ಲಿ ಗೋಧಿ ಸಂಗ್ರಹಣೆಯನ್ನು ವೃದ್ಧಿಗೊಳಿಸುವ ನಿಟ್ಟಿನಲ್ಲಿ ಸರಕಾರವು ಗೋಧಿಗೆ ಪ್ರತಿ ಕ್ವಿಂಟಾಲಿಗೆ ರೂ.1000 ಕನಿಷ್ಟ ಬೆಂಬಲ ಬೆಲೆಯನ್ನು ನಿಗದಿಪಡಿಸಿತ್ತು.

ಕಳೆದ ವರ್ಷ ಮಂದ ಗೋಧಿ ಸಂಗ್ರಹಣೆಯಿಂದಾಗಿ ಕೇಂದ್ರವು 7.3 ದಶಲಕ್ಷ ಟನ್ ಗೋಧಿಯನ್ನು ಆಮದುಮಾಡಿಕೊಂಡಿದ್ದು.
ಮತ್ತಷ್ಟು
ಸಾಲಮನ್ನಾ : ಅರ್ಹ ರೈತರ ಪಟ್ಟಿ ನೀಡಲು ಸೂಚನೆ
ವಿಚಾರಣೆಗೊಳಪಡಲಿರುವ ಯಾಹೂ-ಗೂಗಲ್ ಒಪ್ಪಂದ
ಆರ್‌ಬಿಐ ಹಣಕಾಸು ನೀತಿ ಭಿಗಿಗೊಳಿಸಬೇಕು: ಚಿದಂಬರಂ
ಪಾಕ್‌ನ- ಭಾರತ ವ್ಯವಹಾರ ಕೊರತೆ 894 ಮಿ.ಡಾ.
ಸದ್ಯದಲ್ಲೇ ಅಂಚೆಕಚೇರಿಗಳ ಅಂತರ್ ಸಂಪರ್ಕ
ಬಾಸ್ಮತಿಯೇತರ ಅಕ್ಕಿ ರಫ್ತು ನಿಷೇಧ ಹಿಂತೆಗೆತ