ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಇಳಿಮುಖಗೊಳ್ಳಲಿದೆ: ಸರಕಾರ  Search similar articles
ಜಾಗತಿಕ ಆಹಾರ ಉತ್ಪನ್ನ ಮತ್ತು ಕಚ್ಛಾತೈಲ ಬೆಲೆ ಏರಿಕೆಯಿಂದಾಗಿ ಗಗನಕ್ಕೇರಿರುವ ಹಣದುಬ್ಬರವು ಪ್ರಸಕ್ತ ವರ್ಷದ ಅಕ್ಟೋಬರ್ ತಿಂಗಳೊಳಗೆ ಇಳಿಮುಖಗೊಳ್ಳುವ ಸಾಧ್ಯತೆಯಿದೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಕೆಲವು ವಾರಗಳಲ್ಲಿ ಹಣದುಬ್ಬರದಲ್ಲಿ ಅಧಿಕ ಮಟ್ಟದಲ್ಲಿ ಅಸ್ಥಿರತೆಯಿದ್ದು, ಅಕ್ಟೋಬರ್-ಡಿಸೆಂಬರ್ ತಿಂಗಳಲ್ಲಿ ಹಣದುಬ್ಬರದಲ್ಲಿ ಇಳಿಮುಖ ಪ್ರವೃತ್ತಿ ಉಂಟಾಗಲಿದೆ ಎಂದು ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹಾಗಾರ ಅರವಿಂದ್ ವೀರಮಣಿ ತಿಳಿಸಿದ್ದಾರೆ.

ಸರಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಕೈಗೊಂಡ ಹಣಕಾಸು ಕ್ರಮಗಳಿಂದ ಮತ್ತು ಧನಾತ್ಮಕ ಮಾನ್ಸೂನ್ ಸಂಕೇತವು ಹಣದುಬ್ಬರದ ಮೇಲೆ ಉತ್ತಮ ರೀತಿಯ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ.

ಭಾರತೀಯ ದೃಷ್ಟಿಯಲ್ಲಿ ಹಣದುಬ್ಬರವು ಅತಿ ಮುಖ್ಯವಾದ ವಿಷಯವಾಗಿದ್ದು, ಹಣದುಬ್ಬರ ಇಳಿಕೆಗಾಗಿ ಭಾರತದ ನೀತಿ ನಿರ್ಮಾಪಕರು ನಿರಂತರವಾಗಿ ವಿಮರ್ಷೆಗಳನ್ನು ನಡೆಸುತ್ತಲೇ ಇದ್ದಾರೆ ಎಂದು ಅವರು ತಿಳಿಸಿದರು.

ಭಾರತದ ಆರ್ಥಿಕತೆಗೆ ಅತಿ ಅಗತ್ಯವಾಗಿರುವ ಹಣದುಬ್ಬರ ನಿರೀಕ್ಷೆಗಳತ್ತ ಕೇಂದ್ರ ಬ್ಯಾಂಕ್ ದೃಷ್ಟಿ ಹಾಯಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಮತ್ತಷ್ಟು
ಗೋಧಿ ಉತ್ಪಾದನೆಯಲ್ಲಿ ಹೆಚ್ಚಳ
ಸಾಲಮನ್ನಾ : ಅರ್ಹ ರೈತರ ಪಟ್ಟಿ ನೀಡಲು ಸೂಚನೆ
ವಿಚಾರಣೆಗೊಳಪಡಲಿರುವ ಯಾಹೂ-ಗೂಗಲ್ ಒಪ್ಪಂದ
ಆರ್‌ಬಿಐ ಹಣಕಾಸು ನೀತಿ ಭಿಗಿಗೊಳಿಸಬೇಕು: ಚಿದಂಬರಂ
ಪಾಕ್‌ನ- ಭಾರತ ವ್ಯವಹಾರ ಕೊರತೆ 894 ಮಿ.ಡಾ.
ಸದ್ಯದಲ್ಲೇ ಅಂಚೆಕಚೇರಿಗಳ ಅಂತರ್ ಸಂಪರ್ಕ