ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಡಿಬಿಯಿಂದ 9.2 ಬಿ.ಡಾ. ಹಣಕಾಸು ಸಹಕಾರ  Search similar articles
ಇಂಧನ, ಸಾರಿಗೆ ಮತ್ತು ಹಣಕಾಸು ಸೇವೆ ಮುಂತಾದ ಕ್ಷೇತ್ರಗಳ ಸುಮಾರು 31 ಯೋಜನೆಗಳ ಅಭಿವೃದ್ಧಿಗಾಗಿ ಭಾರತವು 2008-10ರ ಅವಧಿಯಲ್ಲಿ ಏಶಿಯನ್ ಅಭಿವೃದ್ಧಿ ಬ್ಯಾಂಕ್‌ನಿಂದ ಸುಮಾರು 9.2 ಶತಕೋಟಿ ಡಾಲರ್ ಸಾಲವನ್ನು ಪಡೆದುಕೊಳ್ಳಲಿದೆ ಎಂದು ಹಣಕಾಸು ಸಚಿವ ಚಿದಂಬರಂ ತಿಳಿಸಿದ್ದಾರೆ.

ದೇಶದ ವಿವಿಧ ಯೋಜನೆಗಳ ಅಭಿವೃದ್ಧಿಗಾಗಿ ಏಶಿಯನ್ ಅಭಿವೃದ್ಧಿ ಬ್ಯಾಂಕಿನ ಸಾಲ ಪಾವತಿಯ ಪ್ರಮಾಣವು 2004ರಿಂದ 400 ದಶಲಕ್ಷ ಡಾಲರ್‌ನಷ್ಟು ಹೆಚ್ಚಳವಾಗಿದೆ ಎಂದು ಚಿದಂಬರಂ ಹೇಳಿದ್ದಾರೆ.

ಸಾರಿಗೆ, ಇಂಧನ, ನಗರಾಭಿವೃದ್ಧಿ, ವ್ಯವಸಾಯ ಮತ್ತು ಹಣಕಾಸು ಕ್ಷೇತ್ರಗಳಲ್ಲಿನ ವಿವಿಧ ಯೋಜನೆಗಳ ಅಭಿವೃದ್ಧಿಗಾಗಿ 2008-10ರ ಅವಧಿಯಲ್ಲಿ ಬಹುಯೋಜನಾ ಸಾಲ ಸಂಸ್ಥೆ ಎಡಿಬಿಯು ಭಾರತಕ್ಕೆ ಸುಮಾರು 9.2 ಶತಕೋಟಿ ಹಣಕಾಸು ಸಹಕಾರವನ್ನು ನೀಡಲಿದೆ ಎಂದು ಹಣಕಾಸು ಸಚಿವರು ತಿಳಿಸಿದರು.

ಎಡಿಬಿಯ ದೇಶೀಯ ನೀತಿಯಲ್ಲಿ ವ್ಯವಸಾಯ ಕ್ಷೇತ್ರವೂ ಕೂಡಾ ಒಳಗೊಂಡಿದ್ದು, ಇದಕ್ಕಾಗಿ ಎಡಿಬಿ 2008-10ರ ಅವಧಿಯಲ್ಲಿ 850 ದಶಲಕ್ಷ ಡಾಲರ್ ಸಹಕಾರ ನೀಡಲಿದೆ ಎಂದು ಹೇಳಿದರು.
ಮತ್ತಷ್ಟು
ಹಣದುಬ್ಬರ ಇಳಿಮುಖಗೊಳ್ಳಲಿದೆ: ಸರಕಾರ
ಗೋಧಿ ಉತ್ಪಾದನೆಯಲ್ಲಿ ಹೆಚ್ಚಳ
ಸಾಲಮನ್ನಾ : ಅರ್ಹ ರೈತರ ಪಟ್ಟಿ ನೀಡಲು ಸೂಚನೆ
ವಿಚಾರಣೆಗೊಳಪಡಲಿರುವ ಯಾಹೂ-ಗೂಗಲ್ ಒಪ್ಪಂದ
ಆರ್‌ಬಿಐ ಹಣಕಾಸು ನೀತಿ ಭಿಗಿಗೊಳಿಸಬೇಕು: ಚಿದಂಬರಂ
ಪಾಕ್‌ನ- ಭಾರತ ವ್ಯವಹಾರ ಕೊರತೆ 894 ಮಿ.ಡಾ.