ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂದಿನಿಂದ ವಿಮಾನಯಾನ ಇನ್ನಷ್ಟು ತುಟ್ಟಿ  Search similar articles
ವೈಮಾನಿಕ ಇಂಧನ(ಎಟಿಎಫ್) ಬೆಲೆಯು ಗಗನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ, ಅಗ್ಗದ ಮತ್ತು ಐಷಾರಾಮಿ ಸೇವೆ ಒದಗಿಸುವ ವಿಮಾನ ಯಾನ ಸಂಸ್ಥೆಗಳು ರೂ.300 ರಿಂದ ರೂ. 3000ದಷ್ಟು ಪ್ರಯಾಣ ದರ ಹೆಚ್ಚಿಸುವುದರೊಂದಿಗೆ, ಇಂದಿನಿಂದ ವಿಮಾನಯಾನವು ಇನ್ನಷ್ಟು ದುಬಾರಿಯಾಗಲಿದೆ.

ದೇಶೀಯ ವಿಮಾನಯಾನದ ಹೊಸ ದರಗಳು ಶುಕ್ರವಾರದಿಂದಲೇ ಜಾರಿಗಬರುವುದಾಗಿ ಏರ್ ಇಂಡಿಯಾ, ಜೆಟ್ ಏರ್‌ವೇಸ್, ಕಿಂಗ್‌ಫಿಷರ್ ಸಂಸ್ಥೆಗಳು ಗುರುವಾರ ಈ ನಿರ್ಧಾರ ಘೋಷಿಸಿದ್ದು, ದರಗಳು ಶೇ.10 ರಿಂದ 15ರಷ್ಟು ಹೆಚ್ಚಳಗೊಂಡಿದೆ.

ಕಡಿಮೆ ದರದ ಸ್ಪೈಸ್ ಜೆಟ್ ಸಂಸ್ಥೆ ರೂ. 300 ರಿಂದ 500ರಷ್ಟು ಮತ್ತು ಇತರ ಸಂಸ್ಥೆಗಳು ಪ್ರಯಾಣ ದೂರ ಆಧರಿಸಿ ರೂ.300 ರಿಂದ 3000 ರೂ.ವರೆಗೆ ಹೆಚ್ಚಿಸಿರುವುದಾಗಿ ಹೇಳಿವೆ.

750 ಕಿ.ಮೀ.ದೂರಗಳಷ್ಟು ಅಂತರಕ್ಕೆ ರೂ.1000, 750 ಕಿ.ಮೀ.ನಂತರದ ಮತ್ತು
1000ಕಿ.ಮೀ, ಒಳಗಿನ ದೂರಕ್ಕೆ 2250ರಷ್ಟು ದರ ಹೆಚ್ಚಲಿದೆ. 1000ಕಿಮೀ.ಗಳಾಚೆಗಿನ ಅಂತರಕ್ಕೆ ರೂ.3000ರೂ.ಹೆಚ್ಚಳ ಮಾಡಿದೆ.
ಮತ್ತಷ್ಟು
ಎಡಿಬಿಯಿಂದ 9.2 ಬಿ.ಡಾ. ಹಣಕಾಸು ಸಹಕಾರ
ಹಣದುಬ್ಬರ ಇಳಿಮುಖಗೊಳ್ಳಲಿದೆ: ಸರಕಾರ
ಗೋಧಿ ಉತ್ಪಾದನೆಯಲ್ಲಿ ಹೆಚ್ಚಳ
ಸಾಲಮನ್ನಾ : ಅರ್ಹ ರೈತರ ಪಟ್ಟಿ ನೀಡಲು ಸೂಚನೆ
ವಿಚಾರಣೆಗೊಳಪಡಲಿರುವ ಯಾಹೂ-ಗೂಗಲ್ ಒಪ್ಪಂದ
ಆರ್‌ಬಿಐ ಹಣಕಾಸು ನೀತಿ ಭಿಗಿಗೊಳಿಸಬೇಕು: ಚಿದಂಬರಂ