ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ನಷ್ಟು ವರ್ಧಿಸಿದ ಹಣದುಬ್ಬರ: ಶೇ.11.05ಕ್ಕೆ ಏರಿಕೆ  Search similar articles
PTI
ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲಗಳ ಬೆಲೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಿಂದಾಗಿ, ಜೂನ್ ಏಳಕ್ಕೆ ಅಂತ್ಯಗೊಂಡ ವಾರದಲ್ಲಿ ದೇಶದ ಸಗಟು ಬೆಲೆ ಆಧಾರಿತ ಹಣದುಬ್ಬರವು ಶೇ.11.05ರಷ್ಟು ಏರಿಕೆಗೊಂಡಿದ್ದು, ಆಡಳಿತಾರೂಢ ಯುಪಿಎ ಸರಕಾರವನ್ನು ಇನ್ನಷ್ಟು ಆತಂಕಕ್ಕೀಡುಮಾಡಿದೆ.

ಕಳೆದ ವಾರದಲ್ಲಿ ಶೇ.8.75ರಷ್ಟು ಏರಿಕೆಗೊಂಡಿದ್ದ ಹಣದುಬ್ಬರವು, ಅನೇಕ ಆರ್ಥಿಕ ವಿಶ್ಲೇಷಣೆಯ ಪ್ರಕಾರ ಪ್ರಸಕ್ತ ಅವಧಿಯಲ್ಲಿ ಶೇ.9ರ ಗಡಿಯನ್ನು ದಾಟುವ ನಿರೀಕ್ಷೆಯಿತ್ತು. ತನ್ನ ನಾಗಾಲೋಟವನ್ನು ಇನ್ನಷ್ಟು ತೀವ್ರಗೊಳಿಸಿ ಹದಿಮೂರು ವರ್ಷಗಳಲ್ಲೇ ಅಧಿಕ ಮಟ್ಟದಲ್ಲಿ ಏರಿಕೆ ಕಂಡಿದೆ.

ಈಗಾಗಲೇ ಆಹಾರ ಉತ್ಪನ್ನಗಳ ಬೆಲೆ ಏರಿಕೆಗೊಂಡಿದ್ದು, ಪೆಟ್ರೋಲ್ ಉತ್ಪನ್ನಗಳ ಬೆಲೆ ಏರಿಕೆಯು ಹಣದುಬ್ಬರ ವರ್ಧನೆಗೆ ಇನ್ನಷ್ಟು ಪುಷ್ಠಿ ನೀಡಿದೆ. ಈ ಅವಧಿಯಲ್ಲಿ ಇಂಧನ ,ವಿದ್ಯುತ್ ಉತ್ಪನ್ನಗಳು ಶೇ.7.8ರಷ್ಟು ಹೆಚ್ಚಳಗೊಂಡರೆ, ಆಹಾರ ಉತ್ಪನ್ನಗಳ ಬೆಲೆಯಲ್ಲಿಯೂ ಶೇ.1.8ರಷ್ಟು ಏರಿಕೆ ಉಂಟಾಗಿದೆ.
ಮತ್ತಷ್ಟು
ಇಂದಿನಿಂದ ವಿಮಾನಯಾನ ಇನ್ನಷ್ಟು ತುಟ್ಟಿ
ಎಡಿಬಿಯಿಂದ 9.2 ಬಿ.ಡಾ. ಹಣಕಾಸು ಸಹಕಾರ
ಹಣದುಬ್ಬರ ಇಳಿಮುಖಗೊಳ್ಳಲಿದೆ: ಸರಕಾರ
ಗೋಧಿ ಉತ್ಪಾದನೆಯಲ್ಲಿ ಹೆಚ್ಚಳ
ಸಾಲಮನ್ನಾ : ಅರ್ಹ ರೈತರ ಪಟ್ಟಿ ನೀಡಲು ಸೂಚನೆ
ವಿಚಾರಣೆಗೊಳಪಡಲಿರುವ ಯಾಹೂ-ಗೂಗಲ್ ಒಪ್ಪಂದ