ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಶೇ.15ಕ್ಕೆ ತಲುಪಲಿದೆ: ಎಚ್ಎಸ್‌ಬಿಸಿ  Search similar articles
ಮುಂದಿನ ಒಂಬತ್ತು ತಿಂಗಳುಗಳ ಕಾಲ ದೇಶದ ಸಗಟು ಬೆಲೆ ಆಧಾರಿತ ಹಣದುಬ್ಬರವು ಎರಡಂಕಿಯಲ್ಲಿಯೇ ಮುಂದುವರಿಯಲಿದ್ದು, 2008ರ ಅಂತ್ಯದ ವೇಳೆಗೆ ಶೇ.15ಕ್ಕೆ ತಲುಪುವ ಸಾಧ್ಯತೆಯಿದೆ ಎಂದು ಎಚ್‌ಎಸ್‌ಬಿಸಿ ತಿಳಿಸಿದೆ.

ಸಗಟು ಬೆಲೆ ಆಧಾರಿತ ಹಣದುಬ್ಬರವು ಕನಿಷ್ಟ ಐದು ತಿಂಗಳವರೆಗೆ ಎರಡಂಕಿಯಲ್ಲಿಯೇ ಉಳಿಯಲಿದೆ ಎಂದು ಎಸ್‌ಎಸ್‌ಬಿಸಿಯ ಭಾರತದ ಮುಖ್ಯ ಆರ್ಥಿಕತಜ್ಞ ರೋಬರ್ಟ್ ಪ್ರಿಯರ್ ತಿಳಿಸಿದ್ದಾರೆ.

ಕೇಂದ್ರ ಬ್ಯಾಂಕ್ ತನ್ನ ರೇಪೋ ದರವನ್ನು ಶೇ.0.50ರಷ್ಟು ಮತ್ತು ನಗದು ಮೀಸಲು ಪ್ರಮಾಣವನ್ನು ಶೇ.0.75ರಷ್ಟು ಹೆಚ್ಚಳಗೊಳಿಸುವ ನಿರೀಕ್ಷೆಯಿರುವುದಾಗಿ ಎಚ್ಎಸ್‌ಬಿಸಿ ತಿಳಿಸಿದೆ.

ನಗದು ಮೀಸಲು ಪ್ರಮಾಣವನ್ನು ಹೆಚ್ಚಳಗೊಳಿಸುವ ಮೂಲಕ ನಗದು ಲಭ್ಯತೆಯನ್ನು ಭಿಗಿಗೊಳಿಸಿದರೂ, ಮಾರ್ಚ್ 2007ರ ನಂತರ ಮೊದಲ ಬಾರಿಗೆ ಕೇಂದ್ರ ಬ್ಯಾಂಕ್ ಕಳೆದ ವಾರ ರೇಪೋ ದರವನ್ನು ಶೇ.0.25 ಅಂಕಗಳಷ್ಟು ಹೆಚ್ಚುಗೊಳಿಸಿತ್ತು.

ಒಂದು ವೇಳೆ ಆಹಾರ ಬೆಲೆಯಲ್ಲಿ ಇಳಿಮುಖ ಉಂಟಾದರೂ, ಸಂಪೂರ್ಣ ದರದ ಶೇ.15ರಷ್ಟನ್ನು ಮಾತ್ರವೇ ಒಳಗೊಂಡಿದ್ದು, ಇದರಿಂದ ಹಣದುಬ್ಬರವು ಪೂರ್ಣಪ್ರಮಾಣದಲ್ಲಿ ಇಳಿಕೆಗೊಳ್ಳುವ ಸಾಧ್ಯತೆಯಿಲ್ಲ ಎಂದು ಎಚ್ಎಸ್‌ಬಿಸಿ ಅಭಿಪ್ರಾಯಪಟ್ಟಿದೆ.
ಮತ್ತಷ್ಟು
ಏಶಿಯನ್ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ
ಇನ್ನಷ್ಟು ವರ್ಧಿಸಿದ ಹಣದುಬ್ಬರ: ಶೇ.11.05ಕ್ಕೆ ಏರಿಕೆ
ಇಂದಿನಿಂದ ವಿಮಾನಯಾನ ಇನ್ನಷ್ಟು ತುಟ್ಟಿ
ಎಡಿಬಿಯಿಂದ 9.2 ಬಿ.ಡಾ. ಹಣಕಾಸು ಸಹಕಾರ
ಹಣದುಬ್ಬರ ಇಳಿಮುಖಗೊಳ್ಳಲಿದೆ: ಸರಕಾರ
ಗೋಧಿ ಉತ್ಪಾದನೆಯಲ್ಲಿ ಹೆಚ್ಚಳ