ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಹತೋಟಿಗೆ ಕ್ರಮ: ಚಿದಂಬರಂ  Search similar articles
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯು ಹಣದುಬ್ಬರ ಎರಡಂಕಿಗೆ ವರ್ಧನೆಗೊಳ್ಳಲು ಕಾರಣ ಎಂಬುದಾಗಿ ಸೂಚಿಸುವುದರೊಂದಿಗೆ, ಬೆಲೆ ಏರಿಕೆ ಹತೋಟಿಗೆ ತರುವ ನಿಟ್ಟಿನಲ್ಲಿ ಬೇಡಿಕೆ ಮತ್ತು ಪೂರೈಕೆ ಅಂತರವನ್ನು ಕಡಿಮೆಗೊಳಿಸಲು ಹೆಚ್ಚಿನ ಕ್ರಮ ಕೈಗೊಳ್ಳುವ ಸುಳಿವನ್ನು ಹಣಕಾಸು ಸಚಿವ ಚಿದಂಬರಂ ನೀಡಿದ್ದಾರೆ.

ಇದು ಅತ್ಯಂತ ಕಷ್ಟಕರ ಸಮಯವಾಗಿದೆ. ಇದರ ಬಗ್ಗೆ ಸರಕಾರಕ್ಕೆ ಅರಿವಿದೆ. ಇದರ ಬಗ್ಗೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಸಾಧ್ಯವಾಗುವ ರೀತಿಯಲ್ಲಿ ಸರಕಾರವು ಪೂರೈಕೆ ಹೆಚ್ಚಳಕ್ಕೆ ಮತ್ತು ಬೆಲೆ ಇಳಿಕೆಗೆ ಶ್ರಮವಹಿಸಲಿದೆ ಎಂದು ಚಿದಂಬರಂ ತಿಳಿಸಿದ್ದಾರೆ.

ಆದರೆ, ಸರಕಾರ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಯಾವ ರೀತಿಯ ಕ್ರಮಕೈಗೊಳ್ಳಲಿದೆ ಎಂಬುದನ್ನು ಬಹಿರಂಗಪಡಿಸಲು ಹಣಕಾಸು ಸಚಿವರು ನಿರಾಕರಿಸಿದ್ದಾರೆ.

ಪೆಟ್ರೋಲ್, ಡೀಸೇಲ್ ಮತ್ತು ಅಡುಗೆ ಅನಿಲ ಬೆಲೆಯನ್ನು ಏರಿಕೆಗೊಳಿಸುವ ಸಂದರ್ಭದಲ್ಲಿ ಹಣದುಬ್ಬರವು ಎರಡಂಕಿ ತಲುಪಲಿದೆ ಎಂಬುದಾಗಿ ಸಂಸತ್ತಿಗೆ ಈ ಮೊದಲೇ ಎಚ್ಚರಿಕೆ ನೀಡಲಾಗಿತ್ತು ಎಂದು ಚಿದಂಬರಂ ಸುದ್ದಿಗಾರರಿಗೆ ತಿಳಿಸಿದರು.

ಜೂನ್ ಏಳಕ್ಕೆ ಅಂತ್ಯಗೊಂಡ ವಾರದಲ್ಲಿ ಹಣದುಬ್ಬರವು 13 ವರ್ಷಗಳಲ್ಲೇ ಅಧಿಕ ಮಟ್ಟದಲ್ಲಿ ಏರಿಕೆ ಕಂಡಿದ್ದು, ಪೆಟ್ರೋಲ್, ಡೀಸೇಲ್ ಮತ್ತು ಎಲ್‌ಪಿಜಿಯು ಈ ಏರಿಕೆಯಲ್ಲಿ ಶೇ.94ರಷ್ಟು ಭಾಗವನ್ನು ಹಂಚಿಕೊಂಡಿದೆ ಎಂದ ಚಿದಂಬರಂ ಈ ಏರಿಕೆಯನ್ನು ಮುಂಚಿತವಾಗಿಯೇ ನಿರೀಕ್ಷಿಸಲಾಗಿತ್ತು ಎಂದು ಹೇಳಿದ್ದಾರೆ.
ಮತ್ತಷ್ಟು
ಹಣದುಬ್ಬರ ಶೇ.15ಕ್ಕೆ ತಲುಪಲಿದೆ: ಎಚ್ಎಸ್‌ಬಿಸಿ
ಏಶಿಯನ್ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ
ಇನ್ನಷ್ಟು ವರ್ಧಿಸಿದ ಹಣದುಬ್ಬರ: ಶೇ.11.05ಕ್ಕೆ ಏರಿಕೆ
ಇಂದಿನಿಂದ ವಿಮಾನಯಾನ ಇನ್ನಷ್ಟು ತುಟ್ಟಿ
ಎಡಿಬಿಯಿಂದ 9.2 ಬಿ.ಡಾ. ಹಣಕಾಸು ಸಹಕಾರ
ಹಣದುಬ್ಬರ ಇಳಿಮುಖಗೊಳ್ಳಲಿದೆ: ಸರಕಾರ