ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ: ಉಗ್ರ ಕ್ರಮಕ್ಕೆ ಕಾಂಗ್ರೆಸ್ ಕರೆ  Search similar articles
ಎರಡಂಕಿ ತಲುಪಿರುವ ಹಣದುಬ್ಬರ ಹಾಗೂ ವ್ಯವಧಾನವಿಲ್ಲದೆ ಗಗನಕ್ಕೇರುತ್ತಿರುವ ಬೆಲೆಯು ಆಡಳಿತಾರೂಢ ಯುಪಿಎ ಸರಕಾರವನ್ನು ಆತಂಕಕ್ಕೀಡುಮಾಡಿದ್ದು, ಈ ನಿಟ್ಟಿನಲ್ಲಿ ಇವೆರಡನ್ನೂ ಹತೋಟಿಗೆ ತರಲು ಸರಕಾರವು ಕಠಿಣ ಕ್ರಮಕೈಗೊಳ್ಳಬೇಕೆಂದು ಕಾಂಗ್ರೆಸ್ ಸರಕಾರಕ್ಕೆ ಕರೆ ನೀಡಿದೆ.

ಸರಕಾರದ ಕೈಮೀರಿ ಹೋಗಿರುವ ಹಣದುಬ್ಬರವನ್ನು ನಿಯಂತ್ರಿಸಲು ಸರಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದ್ದು, ಈ ಕ್ರಮಗಳಿಂದ ಅಭಿವೃದ್ಧಿ ದರದ ಮೇಲೆ ಪರಿಣಾಮ ಬೀರಿದರೂ ಅಡ್ಡಿಯಿಲ್ಲ ಎಂದು ಕಾಂಗ್ರೆಸ್ ತಿಳಿಸಿದೆ. ಅಲ್ಲದೆ, ಈ ಕುರಿತಾಗಿ ಎಲ್ಲಾ ಮುಖ್ಯ ಮಂತ್ರಿಗಳ ಮತ್ತು ರಾಜ್ಯ ಹಣಕಾಸು ಸಚಿವರ ಸಭೆ ಕರೆಯಲಾಗುವುದು ಎಂದು ಹೇಳಿದೆ.

ಸರಕಾರವು ಉಗ್ರ ಕ್ರಮಗಳನ್ನು ಕೈಗೊಂಡಲ್ಲಿ ಅಭಿವೃದ್ಧಿ ದರದ ಮೇಲೆ ಪರಿಣಾಮ ಉಂಟಾಗಬಹುದು. ಆದರೆ, ಸಾಮಾನ್ಯ ಜನರ ಬೆಲೆ ಏರಿಕೆ ಆತಂಕದ ಬಿಸಿಯನ್ನು ತಣ್ಣಗೆ ಮಾಡಲು, ಸರಕಾರವು ಕ್ರಮಗಳನ್ನು ಕೈಗೊಳ್ಳಲೇಬೇಕಾಗುತ್ತದೆ ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥೆ(ಎಐಸಿಸಿ) ವಕ್ತಾರ ಶಕೀಲ್ ಅಹ್ಮದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಮತ್ತು ಹಣಕಾಸು ಸಚಿವರ ಸಭೆಯನ್ನು ಸರಕಾರವು ಕರೆಯಲಿದ್ದು, ಹಣದುಬ್ಬರ ಹತೋಟಿಯ ಕ್ರಮಗಳ ಬಗ್ಗೆ ವಿವರವಾದ ಚರ್ಚೆಯನ್ನು ಈ ಸಭೆಯಲ್ಲಿ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಹಣದುಬ್ಬರವು ತನ್ನ ನಾಗಾಲೋಟವನ್ನು ಮುಂದುವರಿಸಿ ಎರಡಂಕಿ ತಲುಪಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದ್ದು, ಇದರಿಂದ ಹೆಚ್ಚಿನ ಸಮಸ್ಯೆಯು ಸಾಮಾನ್ಯ ಜನರಿಗೆ ಉಂಟಾಗಲಿದೆ ಎಂದು ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.

ಏನೇ ಆದರೂ, ತೈಲ ಬೆಲೆ ಏರಿಕೆಯನ್ನು ಕಡಿಮೆಗೊಳಿಸಲು ನಿಟ್ಟಿನಲ್ಲಿ ಸರಕಾರದ ತೆರಿಗೆ ಕಡಿತವನ್ನು ಪ್ರಸಕ್ತ ಹಣದುಬ್ಬರ ಎಣಿಕೆಯಲ್ಲಿ ಪರಿಗಣಿಸಿಲ್ಲ ಎಂದು ಅಹ್ಮದ್ ಸ್ಪಷ್ಟಪಡಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಮತ್ತು ಅಡಿಗೆ ಅನಿಲ ಬೆಲೆಗಳಲ್ಲಿನ ವರ್ಧನೆಯಿಂದಾಗಿ ದೇಶದ ಸಗಟು ಬೆಲೆ ಆಧಾರಿತ ಹಣದುಬ್ಬರವು 13 ವರ್ಷಗಳಲ್ಲೇ ಅಧಿಕ ಮಟ್ಟದಲ್ಲಿ ಶೇ.11.05ಕ್ಕೆ ಏರಿಕೆ ಕಂಡಿತ್ತು.
ಮತ್ತಷ್ಟು
ಎಚ್‌ಡಿಎಫ್‌ಸಿ ಬ್ಯಾಂಕಿನಿಂದ ಸಾಲಬಡ್ಡಿದರ ಏರಿಕೆ
ಹಣದುಬ್ಬರ ಹತೋಟಿಗೆ ಕ್ರಮ: ಚಿದಂಬರಂ
ಹಣದುಬ್ಬರ ಶೇ.15ಕ್ಕೆ ತಲುಪಲಿದೆ: ಎಚ್ಎಸ್‌ಬಿಸಿ
ಏಶಿಯನ್ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ
ಇನ್ನಷ್ಟು ವರ್ಧಿಸಿದ ಹಣದುಬ್ಬರ: ಶೇ.11.05ಕ್ಕೆ ಏರಿಕೆ
ಇಂದಿನಿಂದ ವಿಮಾನಯಾನ ಇನ್ನಷ್ಟು ತುಟ್ಟಿ