ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2 ವರ್ಷಗಳಲ್ಲಿ 1.3 ಟ್ರಿಲಿಯನ್ ಆದಾಯ ಗಳಿಸಲಿರುವ ಗಲ್ಫ್  Search similar articles
ತೈಲ ಸಂಪತ್ತು ಗಲ್ಫ್ ಸಹಕಾರ ಸಮಿತಿ(ಜಿಸಿಸಿ)ರಾಷ್ಟ್ರಗಳು 2008-09ರ ಅವಧಿಯಲ್ಲಿ ಸುಮಾರು 1.3 ಟ್ರಿಲಿಯನ್ ಡಾಲರ್ ಆದಾಯ ಗಳಿಸಲಿದೆ ಎಂದು ಕುವೈಟ್ ಆರ್ಥಿಕ ವರದಿಗಳು ತಿಳಿಸಿವೆ.

ಆರು ಮೈತ್ರಿ ರಾಷ್ಟ್ರಗಳಾದ, ಬಹ್ರೈನ್, ಕುವೈಟ್, ಓಮನ್, ಕಥಾರ್, ಯುಎಇ ಮತ್ತು ಸೌದಿ ಅರೇಬಿಯಾಗಳು 2007ರಲ್ಲಿ 364 ಶತಕೋಟಿ ಡಾಲರ್ ಆದಾಯ ಗಳಿಸಿದ್ದವು.

ಜಿಸಿಸಿ ತೈಲ ಆದಾಯವು 2008ರಲ್ಲಿ 636 ಶತಕೋಟಿ ಮತ್ತು 2009ರಲ್ಲಿ 657 ಶತಕೋಟಿ ಡಾಲರ್ ಆದಾಯ ಗಳಿಸಲಿದೆ ಎಂದು ಅಲ್ ಶಾಲ್ ಆರ್ಥಿಕ ವರದಿಗಳು ಹೇಳಿವೆ.

ಜಿಸಿಸಿ ರಾಷ್ಟ್ರಗಳಲ್ಲಿ ಒಂದಾದ ಸೌದಿ ಅರೇಬಿಯಾವು ಎರಡು ವರ್ಷಗಳಲ್ಲಿ ಗಳಿಸಲಿರುವ ಆದಾಯವು 700 ಶತಕೋಟಿ ಡಾಲರ್‌ಗಳಾಗಲಿದ್ದು, 2007ರಲ್ಲಿ ಇದು 194 ಶತಕೋಟಿ ಡಾಲರ್ ಸಂಪಾದಿಸಿತ್ತು.

ಜಗತ್ತಿನ ಅರ್ಧದಷ್ಟು ತೈಲ ಬೇಡಿಕೆಯನ್ನು ಪೂರೈಸುವ ಆರು ರಾಷ್ಟ್ರಗಳು ಪ್ರತಿದಿನ 16 ದಶಲಕ್ಷ ಬ್ಯಾರಲ್‌ಗಳಷ್ಟು ತೈಲವನ್ನು ಉತ್ಪಾದಿಸುತ್ತದೆ.
ಮತ್ತಷ್ಟು
ಹಣದುಬ್ಬರ-ಆತಂಕ ಬೇಡ: ಚಿದಂಬರಂ
ಹಣದುಬ್ಬರ ಹತೋಟಿ: ಸಿಂಗ್-ರೆಡ್ಡಿ ಮಾತುಕತೆ
ಹಣದುಬ್ಬರ: ಉಗ್ರ ಕ್ರಮಕ್ಕೆ ಕಾಂಗ್ರೆಸ್ ಕರೆ
ಎಚ್‌ಡಿಎಫ್‌ಸಿ ಬ್ಯಾಂಕಿನಿಂದ ಸಾಲಬಡ್ಡಿದರ ಏರಿಕೆ
ಹಣದುಬ್ಬರ ಹತೋಟಿಗೆ ಕ್ರಮ: ಚಿದಂಬರಂ
ಹಣದುಬ್ಬರ ಶೇ.15ಕ್ಕೆ ತಲುಪಲಿದೆ: ಎಚ್ಎಸ್‌ಬಿಸಿ