ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೈಲ ಬೆಲೆ ನಿಯಂತ್ರಣಕ್ಕೆ ಭಾರತ-ಸೌದಿ ಚರ್ಚೆ  Search similar articles
PTI
ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಇಳಿಕೆಯ ಕುರಿತು ತ್ವರಿತ ಕ್ರಮಗಳನ್ನು ಕೈಗೊಳ್ಳಲು ಭಾರತ ಮತ್ತು ಸೌದಿ ಅರೇಬಿಯಾ ಶನಿವಾರ ಮಾತುಕತೆ ನಡೆಸಿತು.

ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ಪೆಟ್ರೋಲಿಯಂ ಸಚಿವ ಮುರಳಿ ದಿಯೊರಾ ನೇತೃತ್ವದ ಉನ್ನತ ಮಟ್ಟದ ನಿಯೋಗವು ಸೌದಿ ತೈಲ ಶೃಂಗ ಸಭೆಯಲ್ಲಿ ಭಾಗವಹಿಸಲು ಆಗಮಿಸಿರುವ ವೇಳೆ ಈ ಮಾತುಕತೆ ನಡೆಸಿದೆ.

ತೈಲಬೆಲೆಗಳು ನಿಯಂತ್ರಣಕ್ಕೆ ಬಾರದಿರುವ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾವು ಭಾನುವಾರ ಅಂತಾರಾಷ್ಟ್ರೀಯ ಇಂಧನ ಸಮ್ಮೇಳನವನ್ನು ಹಮ್ಮಿಕೊಂಡಿದೆ. ಜಿದ್ದಾದದಲ್ಲಿ ನಡೆಯುವ ಸಮ್ಮೇಳನದಲ್ಲಿ 35 ರಾಷ್ಟ್ರಗಳ ಸಚಿವರು ಮತ್ತು ಮುಖ್ಯಸ್ಥರು ಹಾಗೂ 25 ತೈಲ ಕಂಪೆನಿಗಳ ಉನ್ನತ ಪ್ರತಿನಿಧಿಗಳು ಮತ್ತು ಏಳು ಅಂತಾರಾಷ್ಟ್ರೀಯ ಸಂಘಟನೆಗಳು ಪಾಲ್ಗೊಳ್ಳುತ್ತಿವೆ.

ಹೆಚ್ಚುತ್ತಿರುವ ತೈಲಬೆಲೆಗೆ ಕಡಿವಾಣ ಹಾಕಲು ತೈಲ ಉತ್ಪಾದನಾ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಹೆಚ್ಚಿಸಬೇಕು ಎಂದು ಮುರಳಿ ದಿಯೊರಾ ವಾರದ ಆರಂಭದಲ್ಲಿ ಸೌದಿ ಅರೇಬಿಯಾದ ತೈಲ ಸಚಿವ ಅಲಿ-ಅಲ್ ನೈಮಿ ಅವರಿಗೆ ಪತ್ರ ಬರೆದಿದ್ದರು. ತಮ್ಮ ರಾಷ್ಟ್ರಗಳ ತೈಲ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಜಾಗತಿಕ ಆರ್ಥಿಕ ಅಭಿವೃದ್ಧಿಯನ್ನು ಪುನಶ್ಚೇತನಗೊಳಿಸಲು ಸಹಕರಿಸುವಂತೆ ಅವರು ಪತ್ರದಲ್ಲಿ ಕೋರಿದ್ದಾರೆ.
ಮತ್ತಷ್ಟು
2 ವರ್ಷಗಳಲ್ಲಿ 1.3 ಟ್ರಿಲಿಯನ್ ಆದಾಯ ಗಳಿಸಲಿರುವ ಗಲ್ಫ್
ಹಣದುಬ್ಬರ-ಆತಂಕ ಬೇಡ: ಚಿದಂಬರಂ
ಹಣದುಬ್ಬರ ಹತೋಟಿ: ಸಿಂಗ್-ರೆಡ್ಡಿ ಮಾತುಕತೆ
ಹಣದುಬ್ಬರ: ಉಗ್ರ ಕ್ರಮಕ್ಕೆ ಕಾಂಗ್ರೆಸ್ ಕರೆ
ಎಚ್‌ಡಿಎಫ್‌ಸಿ ಬ್ಯಾಂಕಿನಿಂದ ಸಾಲಬಡ್ಡಿದರ ಏರಿಕೆ
ಹಣದುಬ್ಬರ ಹತೋಟಿಗೆ ಕ್ರಮ: ಚಿದಂಬರಂ