ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬುಲೆಟ್ ಟ್ರೇನ್‌ಗೆ ರೈಲ್ವೇಯಿಂದ ಜಾಗತಿಕ ಟೆಂಡರ್  Search similar articles
PTI
ಪೂನಾ-ಅಹ್ಮದಾಬಾದ್-ಮುಂಬೈ ನಡುವೆ ಓಡಿಸಲುದ್ದೇಶಿಸಿರುವ ಹೈಸ್ಪೀಡ್ ಅಥವಾ ಬುಲೆಟ್ ಟ್ರೇನ್ ಕುರಿತು ಪೂರ್ವ ಅಧ್ಯಯನಕ್ಕಾಗಿ ಜಾಗತಿಕ ಟೆಂಡರ್ ಕರೆಯಲು ರೈಲ್ವೇ ಇಲಾಖೆ ನಿರ್ಧರಿಸಿದೆ.

ಪ್ರಸ್ತುತ 660 ಕಿ.ಮೀ ದೂರದ ಈ ದಾರಿಯನ್ನು ಒಂದು ರಾತ್ರಿಯಲ್ಲಿ ಕ್ರಮಿಸುತ್ತಿದ್ದರೆ, ಉದ್ದೇಶಿತ ಬುಲೆಟ್ ರೈಲು ಜಾರಿಗೆ ಬಂದಲ್ಲಿ ಅದು ಗಂಟೆಗೆ 300 ಕಿ.ಮೀ ದೂರ ಕ್ರಮಿಸಲಿದ್ದು ಪ್ರಯಾಣದ ಸಮಯವನ್ನು ಅರ್ಧಕ್ಕರ್ಧ ಇಳಿಸಲಿದೆ.

ಹೈಸ್ಪೀಡ್ ಕಾರಿಡಾರ್ ಕುರಿತ ಅಧ್ಯಯನ ನಡೆಸಲು ಒಬ್ಬ ಸಲಹೆಗಾರನನ್ನು ನೇಮಿಸಲಾಗುವುದು ಎಂದು ರೈಲ್ವೇ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಧ್ಯಯನವು ತಾಂತ್ರಿಕತೆ, ಹಣಕಾಸು ಮತ್ತು ಯೋಜನೆಯ ಕಾರ್ಯನಿರ್ವಹಣಾ ಸಾಮರ್ಥ್ಯ ಮುಂತಾದ ವಿಚಾರಗಳತ್ತ ಗಮನ ಕೇಂದ್ರೀಕರಿಸಲಿದೆ.

ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಜಪಾನ್, ಚೀನ, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ ಹಲವಾರು ರಾಷ್ಟ್ರಗಳು ಆಸಕ್ತಿ ತೋರಿವೆ.

ಈ ಅಧ್ಯಯನಾ ವೆಚ್ಚವನ್ನು ಮಹಾರಾಷ್ಟ್ರ, ಗುಜರಾತ್, ಮತ್ತು ರೈಲ್ವೇ ಸಚಿವಾಲಯಗಳು ಭರಿಸಲಿವೆ.
ಮತ್ತಷ್ಟು
ತೈಲ ಬೆಲೆ ನಿಯಂತ್ರಣಕ್ಕೆ ಭಾರತ-ಸೌದಿ ಚರ್ಚೆ
2 ವರ್ಷಗಳಲ್ಲಿ 1.3 ಟ್ರಿಲಿಯನ್ ಆದಾಯ ಗಳಿಸಲಿರುವ ಗಲ್ಫ್
ಹಣದುಬ್ಬರ-ಆತಂಕ ಬೇಡ: ಚಿದಂಬರಂ
ಹಣದುಬ್ಬರ ಹತೋಟಿ: ಸಿಂಗ್-ರೆಡ್ಡಿ ಮಾತುಕತೆ
ಹಣದುಬ್ಬರ: ಉಗ್ರ ಕ್ರಮಕ್ಕೆ ಕಾಂಗ್ರೆಸ್ ಕರೆ
ಎಚ್‌ಡಿಎಫ್‌ಸಿ ಬ್ಯಾಂಕಿನಿಂದ ಸಾಲಬಡ್ಡಿದರ ಏರಿಕೆ