ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಶೇ.5.5ಕ್ಕೆ ಇಳಿಯಲಿದೆ: ಸಿಎಂಐಇ  Search similar articles
ಹಣಕಾಸು ವರ್ಷ 2008-09ರಲ್ಲಿ ಹಣದುಬ್ಬರವು ಶೇ.5.5ಕ್ಕೆ ಇಳಿಯುವ ನಿರೀಕ್ಷೆಯಿದ್ದು, ಮುಂಗಾರು ಮಳೆಯು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಭಾರತೀಯ ಆರ್ಥಿಕ ಪರಿವೀಕ್ಷಣಾ ಕೇಂದ್ರವು ಹೇಳಿದೆ.

ಹಣದುಬ್ಬರವು ಮುಂದಿನ ಎರಡು ತಿಂಗಳಲ್ಲಿ ಮೇಲ್ಮುಖ ಹಾದಿಯಲ್ಲಿಯೇ ಇರಲಿದ್ದು, ಸೆಪ್ಟೆಂಬರ್ ತಿಂಗಳ ನಂತರ ತನ್ನ ನಿಲುವನ್ನು ಬದಲಿಸಲಿದೆ. ಅಲ್ಲದೆ, ಮುಂಗಾರು ಮಳೆಯು ಈ ಸಂಬಂಧ ಪ್ರಧಾನ ಪಾತ್ರ ವಹಿಸಲಿದೆ ಎಂದು ಸಿಎಂಐಇ ತನ್ನ ಮಾಸಿಕ ವಿಮರ್ಷೆಯಲ್ಲಿ ತಿಳಿಸಿದೆ.

ಜೂನ್ 20ಕ್ಕೆ ಅಂತ್ಯಗೊಂಡ ವಾರದಲ್ಲಿ ಹಣದುಬ್ಬರವು ಶೇ.11.05ರಷ್ಟು ಏರಿಕೆಕೊಂಡಿದ್ದು, ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆ ಏರಿಕೆಯು ಇದಕ್ಕೆ ಕಾರಣ ಎಂದು ಸರಕಾರವು ಸಮರ್ಥಿಸಿಕೊಂಡಿದೆ.

ಹಣದುಬ್ಬರ ಏರಿಕೆಯಲ್ಲಿ ಸುಮಾರು ಶೇ.85ರಷ್ಟು ಭಾಗವು ಮೆಟಲ್ ಉತ್ಪನ್ನಗಳು, ಉತ್ಪಾದಕ ವಸ್ತುಗಳು, ಆಹಾರ ಉತ್ಪನ್ನಗಳಪ, ಎಣ್ಣೆ ಬೀಜ ಮುಂತಾದವುಗಳ ಬೆಲೆ ಹೆಚ್ಚಳವೇ ಕಾರಣ ಎಂದು ಸಿಎಂಇಐ ಸ್ಪಷ್ಟಪಡಿಸಿದೆ.
ಮತ್ತಷ್ಟು
ಬ್ಯಾಂಕುಗಳಿಂದ ಇನ್ನಷ್ಟು ಬಡ್ಡಿದರ ಹೆಚ್ಚಳ
ಬುಲೆಟ್ ಟ್ರೇನ್‌ಗೆ ರೈಲ್ವೇಯಿಂದ ಜಾಗತಿಕ ಟೆಂಡರ್
ತೈಲ ಬೆಲೆ ನಿಯಂತ್ರಣಕ್ಕೆ ಭಾರತ-ಸೌದಿ ಚರ್ಚೆ
2 ವರ್ಷಗಳಲ್ಲಿ 1.3 ಟ್ರಿಲಿಯನ್ ಆದಾಯ ಗಳಿಸಲಿರುವ ಗಲ್ಫ್
ಹಣದುಬ್ಬರ-ಆತಂಕ ಬೇಡ: ಚಿದಂಬರಂ
ಹಣದುಬ್ಬರ ಹತೋಟಿ: ಸಿಂಗ್-ರೆಡ್ಡಿ ಮಾತುಕತೆ