ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ-ಇರಾನ್ ಪೈಪ್‌ಲೈನ್: ಜುಲೈನಲ್ಲಿ ಮಾತುಕತೆ  Search similar articles
ಭಾರತ-ಪಾಕಿಸ್ತಾನ-ಇರಾನ್ ಅನಿಲ ಕೊಳವೆ ಯೋಜನೆಯ ಕುರಿತಾಗಿ ತ್ರಿರಾಷ್ಟ್ರಗಳ 7.4 ಶತಕೋಟಿ ಡಾಲರ್ ಈ ಯೋಜನೆಯನ್ನು ವಿವರಗಳನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ, ಮೊದಲ ತ್ರಿಪಕ್ಷೀಯ ಮಾತುಕತೆಯು ಜುಲೈ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ.

ಜಿದ್ದಾ ಶೃಂಗಸಭೆಯ ವೇಳೆ ತನ್ನ ಸಹೋದ್ಯೋಗಿ ಗೋಲಾಂ ಹೋಸಿನ್ ನೋಜಾರಿ ಅವರನ್ನು ಭೇಟಿ ಮಾಡಿದ ಪೆಟ್ರೋಲಿಯಂ ಸಚಿವ ಮುರಲಿ ದೇವುರಾ, ಮುಂದಿನ ತಿಂಗಳು ತೆಹ್ರಾನ್‍‌ನಲ್ಲಿ ತ್ರಿಪಕ್ಷೀಯ ಮಾತುಕತೆಯನ್ನು ನಡೆಸಲು ಒಪ್ಪಿಗೆ ಸೂಚಿಸಿದ್ದಾರೆ.

ಹೆಚ್ಚಿನ ದ್ವಿಪಕ್ಷೀಯ ಮಾತುಕತೆಗಳು ಪರಿಹಾರ ಕಂಡಿವೆ. ತೈಲ ಸಚಿವರ ತ್ರಿಪಕ್ಷೀಯ ಮಾತುಕತೆಯು ತೆಹ್ರಾನ್‌ನಲ್ಲಿ ಮುಂದಿನ ತಿಂಗಳು ನಡೆಯುವ ಸಾಧ್ಯತೆ ಇದೆ ಎಂದು ಪೆಟ್ರೋಲಿಯಂ ಕಾರ್ಯದರ್ಶಿ ಎಂ.ಎಸ್.ಶ್ರೀನಿವಾಸನ್ ತಿಳಿಸಿದ್ದಾರೆ.

ಅನಿಲ ಕೊಳವೆ ಒಪ್ಪಂದದ ಕುರಿತಾಗಿ ಯುಪಿಎ ಸರಕಾರವನ್ನು ಎಡಪಕ್ಷಗಳು ಟೀಕಿಸಿದ ಬೆನ್ನಲ್ಲೇ, ಒಪ್ಪಂದದ ಬಗ್ಗೆ ತ್ರಿಪಕ್ಷೀಯ ಮಾತುಕತೆಯನ್ನು ನಡೆಸುವಂತೆ ಸರಕಾರವು ಇರಾನಿಗೆ ಮನವಿ ಮಾಡಿತ್ತು.

ಸಾಗಾಣಿಕೆಗೆ ಸಂಬಂಧಿಸಿದ ಪಾಕಿಸ್ತಾನದೊಂದಿಗಿನ ವಿವಾದವು ಮುಕ್ತಾಯಗೊಂಡಿದ್ದು, ಇರಾನ್‌ನೊಂದಿಗೆ ಕೆಲವು ಸಣ್ಣ ವಿವಾದಗಳಿದ್ದು, ಅದನ್ನು ತ್ರಿಪಕ್ಷೀಯ ಸಭೆಯ ವೇಳೆ ಸರಿಪಡಿಸಲಾಗುವುದು ಎಂದು ದೇವುರಾ ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
ಹಣದುಬ್ಬರ ನಿಯಂತ್ರಣದಿಂದ ಅಭಿವೃದ್ಧಿಗೆ ಧಕ್ಕೆಯಿಲ್ಲ: ರೆಡ್ಡಿ
ಹಣದುಬ್ಬರ ಶೇ.5.5ಕ್ಕೆ ಇಳಿಯಲಿದೆ: ಸಿಎಂಐಇ
ಬ್ಯಾಂಕುಗಳಿಂದ ಇನ್ನಷ್ಟು ಬಡ್ಡಿದರ ಹೆಚ್ಚಳ
ಬುಲೆಟ್ ಟ್ರೇನ್‌ಗೆ ರೈಲ್ವೇಯಿಂದ ಜಾಗತಿಕ ಟೆಂಡರ್
ತೈಲ ಬೆಲೆ ನಿಯಂತ್ರಣಕ್ಕೆ ಭಾರತ-ಸೌದಿ ಚರ್ಚೆ
2 ವರ್ಷಗಳಲ್ಲಿ 1.3 ಟ್ರಿಲಿಯನ್ ಆದಾಯ ಗಳಿಸಲಿರುವ ಗಲ್ಫ್