ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಕ್ತ ಗೋಧಿ ಮಾರುಕಟ್ಟೆಗೆ ಸರಕಾರ ಚಿಂತನೆ  Search similar articles
ಸುಮಾರು 222 ಲಕ್ಷ ಟನ್‌ಗಳಷ್ಟು ಗೋಧಿ ಸಂಗ್ರಹಣೆಯನ್ನು ಹೊಂದಿರುವುದರೊಂದಿಗೆ, ಬೆಲೆ ಏರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದೊಂದಿಗೆ ಮುಕ್ತ ಗೋಧಿ ಮಾರುಕಟ್ಟೆಯನ್ನು ಪ್ರಾರಂಭಿಸಲು ಸರಕಾರವು ಚಿಂತನೆ ನಡೆಸುತ್ತಿದೆ.

ದೇಶವು ಸುಮಾರು 222 ಲಕ್ಷ ಟನ್‌ಗಳಷ್ಟು ಗೋಧಿಯನ್ನು ಸಂಗ್ರಹಿಸಿದ್ದು, ದೇಶದಲ್ಲಿ ಗೋಧಿ ಲಭ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಕ್ತ ಗೋಧಿ ಮಾರುಕಟ್ಟೆಯನ್ನು ಪ್ರಾರಂಭಿಸಲು ಸರಕಾರವು ನಿರ್ಧರಿಸಿದೆ ಎಂದು ಕೃಷಿ ಮತ್ತು ಆಹಾರ ಸಚಿವ ಶರದ್ ಪವಾರ್ ತಿಳಿಸಿದ್ದಾರೆ.

ಈ ಯೋಜನೆಯು, ದೇಶದಲ್ಲಿ ಆಹಾರ ಉತ್ಪನ್ನಗಳ ಲಭ್ಯತೆಯನ್ನು ಹೆಚ್ಚಳಗೊಳಿಸುವ ಮೂಲಕ ಬೆಲೆ ಏರಿಕೆಯನ್ನು ನಿಯಂತ್ರಿಸುವ ಸರಕಾರದ ಪ್ರಯತ್ನವಾಗಿದೆ ಎಂದು ಪವಾರ್ ಹೇಳಿದ್ದಾರೆ.

ಸಾರ್ವಜನಿಕ ಸರಬರಾಜು ವಿಧಾನ(ಪಿಡಿಎಸ್)ಗೆ ಬೇಕಾಗುವಷ್ಟು ಗೋಧಿಯು ಸಂಗ್ರಹಣೆಗೊಂಡ ನಂತರ, ಉಳಿದ ಪ್ರಮಾಣವನ್ನು ರಾಜ್ಯಗಳಲ್ಲಿನ ಮುಕ್ತ ಮಾರುಕಟ್ಟೆ ಮಾರಾಟದ ಮೂಲಕ ಗೋಧಿ ಲಭಿಸುವಂತೆ ಮಾಡಲು ಸರಕಾರವು ಬಯಸಿದೆ ಎಂದು ಪವಾರ್ ತಿಳಿಸಿದ್ದಾರೆ.

ಈ ನಡುವೆ, 2007-08ರ ಅವಧಿಯಲ್ಲಿ ಸುಮಾರು 78 ದಶಲಕ್ಷ ಟನ್ ಗೋಧಿ ಉತ್ಪಾದನೆಯಾಗಿದೆ ಎಂದು ಹೇಳಿದ ಅವರು, ಇದು ಕಳೆದ ವರ್ಷದ ಗೋಧಿ ಉತ್ಪಾದನೆಯ ಪ್ರಮಾಣಕ್ಕಿಂತ ಒಂದು ದಶಲಕ್ಷ ಟನ್ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.
ಮತ್ತಷ್ಟು
ನೌಕರರ ಸಂಖ್ಯೆಯನ್ನು ವೃದ್ಧಿಸಲಿರುವ ಯಾಹೂ ಇಂಡಿಯಾ
ಭಾರತ-ಇರಾನ್ ಪೈಪ್‌ಲೈನ್: ಜುಲೈನಲ್ಲಿ ಮಾತುಕತೆ
ಹಣದುಬ್ಬರ ನಿಯಂತ್ರಣದಿಂದ ಅಭಿವೃದ್ಧಿಗೆ ಧಕ್ಕೆಯಿಲ್ಲ: ರೆಡ್ಡಿ
ಹಣದುಬ್ಬರ ಶೇ.5.5ಕ್ಕೆ ಇಳಿಯಲಿದೆ: ಸಿಎಂಐಇ
ಬ್ಯಾಂಕುಗಳಿಂದ ಇನ್ನಷ್ಟು ಬಡ್ಡಿದರ ಹೆಚ್ಚಳ
ಬುಲೆಟ್ ಟ್ರೇನ್‌ಗೆ ರೈಲ್ವೇಯಿಂದ ಜಾಗತಿಕ ಟೆಂಡರ್