ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಲೆ ಏರಿಕೆ ಹತೋಟಿಗೆ 'ಮಂತ್ರದಂಡ'ವಿಲ್ಲ: ಅಮೆರಿಕ  Search similar articles
ಗಗನಕ್ಕೇರಿತ್ತಿರುವ ತೈಲ ಬೆಲೆಯು ಜಾಗತಿಕ ಆರ್ಥಿಕತೆಗೆ ಭೀತಿಯನ್ನೊಡ್ಡುತ್ತಿರುವುದರೊಂದಿಗೆ, ಬೆಲೆ ಏರಿಕೆ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಲು ಯಾವುದೇ 'ಮಂತ್ರದಂಡ'ವಿಲ್ಲ ಎಂದಅಮೆರಿಕವು ಸ್ಪಷ್ಟಪಡಿಸಿದೆ.

ಬೆಲೆ ಏರಿಕೆ ಸಮಸ್ಯೆಯು ರಾತ್ರೋರಾತ್ರಿ ಬಗೆಹರಿಯುವ ಸಮಸ್ಯೆಯಲ್ಲ. ಇದಕ್ಕೆ ಯಾವುದೇ ಮಂತ್ರದಂಡವೂ ಇಲ್ಲ. ಜೆದ್ದಾ ಸಮಾವೇಶವು ತೈಲ ಬೆಲೆ ಮತ್ತು ಶೇರು ಮಾರುಕಟ್ಟೆಯ ಮೇಲೆ ತ್ವರಿತ ಪರಿಣಾಮ ಬೀರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಶ್ವೇತಭವನ ವಕ್ತಾರರು ತಿಳಿಸಿದ್ದಾರೆ.

ಇತ್ತೀಚೆಗೆ ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆದ ಸಚಿವರುಗಳ ಸಮಾವೇಶದಲ್ಲಿ ತೈಲ ಬೆಲೆ ಉತ್ಪಾದನೆಯನ್ನು ಹೆಚ್ಚು ಮಾಡುವ ಬಗ್ಗೆ ನಿರ್ಣಯವನ್ನು ಕೈಗೊಂಡಿರುವುದರ ಹೊರತಾಗಿಯೂ ತೈಲ ಬೆಲೆಯಲ್ಲಿ ಇಳಿಕೆ ಉಂಟಾಗಿರುವುದರ ಕುರಿತಾಗಿ ಪ್ರಶ್ನಿಸಲಾದ ವೇಳೆ ಈ ಪ್ರತಿಕ್ರಿಯೆಯನ್ನು ಶ್ವೇತಭವನವು ನೀಡಿದೆ.

ತೈಲ ಬೆಲೆಯ ಕುರಿತಾಗಿ ದೀರ್ಘಾವಧಿಯ ದೂರದೃಷ್ಟಿಯನ್ನು ಹೊಂದುವ ಅಗತ್ಯವಿದೆ, ಪೂರೈಕೆಯನ್ನು ಹೆಚ್ಚಳಗೊಳಿಸಬೇಕೆಂಬ ಸಂಕೇತವನ್ನು ಮಾರುಕಟ್ಟೆಗೆ ನೀಡುವುದರೊಂದಿಗೆ, ಬೇಡಿಕೆಯ ಪ್ರಮಾಣವನ್ನು ಇಳಿಕೆಗೊಳಿಸಲು ಪ್ರಯತ್ನಿಸುವುದರಿಂದ ಸಮತೋಲನವನ್ನು ಕಾಯ್ದುಕೊಳ್ಳಲು ಸಾಧ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು
ಮುಕ್ತ ಗೋಧಿ ಮಾರುಕಟ್ಟೆಗೆ ಸರಕಾರ ಚಿಂತನೆ
ನೌಕರರ ಸಂಖ್ಯೆಯನ್ನು ವೃದ್ಧಿಸಲಿರುವ ಯಾಹೂ ಇಂಡಿಯಾ
ಭಾರತ-ಇರಾನ್ ಪೈಪ್‌ಲೈನ್: ಜುಲೈನಲ್ಲಿ ಮಾತುಕತೆ
ಹಣದುಬ್ಬರ ನಿಯಂತ್ರಣದಿಂದ ಅಭಿವೃದ್ಧಿಗೆ ಧಕ್ಕೆಯಿಲ್ಲ: ರೆಡ್ಡಿ
ಹಣದುಬ್ಬರ ಶೇ.5.5ಕ್ಕೆ ಇಳಿಯಲಿದೆ: ಸಿಎಂಐಇ
ಬ್ಯಾಂಕುಗಳಿಂದ ಇನ್ನಷ್ಟು ಬಡ್ಡಿದರ ಹೆಚ್ಚಳ