ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಿಲಾಯನ್ಸ್-ಎಂಟಿಎನ್: ಜುಲೈನಲ್ಲಿ ಅಂತಿಮ ಮಾತುಕತೆ  Search similar articles
ಅನಿಲ್ ಅಂಬಾನಿ ನೇತೃತ್ವದ ರಿಲಾಯನ್ಸ್ ಕಮ್ಯುನಿಕೇಶನ್ಸ್ ಮತ್ತು ದಕ್ಷಿಣ ಆಫ್ರಿಕಾದ ಎಂಟಿಎನ್ ನಡುವಿನ ಒಪ್ಪಂದವು ಜುಲೈ ಮೊದಲ ವಾರದಲ್ಲಿ ಅಂತ್ಯಗೊಳ್ಳುವ ನಿರೀಕ್ಷೆಯಿದ್ದು, ಇದರ ಮೂಲಕ 70 ದಶಲಕ್ಷ ಮೌಲ್ಯದ ಸುಮಾರು ಶೇ.40ರಷ್ಟು ಪಾಲನ್ನು ರಿಲಾಯನ್ಸ್ ಪಡೆದುಕೊಳ್ಳಲಿದೆ.

ಮೇ ಕೊನೆಯ ವಾರದಿಂದ ಎರಡೂ ಕಂಪನಿಗಳು ಪ್ರತ್ಯೇಕ ಮಾತುಕತೆಯಲ್ಲಿ ತೊಡಗಿದ್ದು, ಅಂತಿಮ ಹಂತದ ಮಾತುಕತೆಯು ಜುಲೈ ತಿಂಗಳ ಮೊದಲ ವಾರದಲ್ಲಿ ನಡೆಯಲಿದೆ ಎಂದು ಬೆಳವಣಿಗೆಗೆ ಸಮೀಪದ ಮೂಲಗಳು ತಿಳಿಸಿವೆ.

ವಿಲೀನ ಸಂಸ್ಥೆಯ ಕುರಿತಾದ ಸಂಪೂರ್ಣ ವಿವರಗಳನ್ನು ನೀಡಲು ನಿರಾಕರಿಸಿದ ಮೂಲವು, ಅಂತಿಮ ಮಾತುಕತೆಯು ಪ್ರಗತಿಯ ಹಂತದಲ್ಲಿದ್ದು, ಶೇ.30-40 ಪಾಲಿನೊಂದಿಗೆ ಎಂಟಿಎನ್‌ನ ಉಪಸಂಸ್ಥೆಯಾಗಿ ರಿಲಾಯನ್ಸ್ ಕಮ್ಯುನಿಕೇಶನ್ ಹೊರಹೊಮ್ಮಲಿದೆ ಎಂಬ ಸುಳಿವು ನೀಡಿದೆ.

ಒಪ್ಪಂದದ ಕುರಿತಾಗಿ ವಿಸ್ತೃತ ಮಾತುಕತೆಯನ್ನು ನಡೆಸಲು ಎಂಟಿಎನ್ ಮತ್ತು ರಿಲಾಯನ್ಸ್ ಕಮ್ಯುನಿಕೇಶನ್ಸ್ ಭಾರತ ಹಾಗೂ ದಕ್ಷಿಣ ಆಫ್ರಿಕಾಗೆ ಭೇಟಿ ನೀಡಿದ್ದು, ಮಾತುಕತೆಯು ಸುಗಮವಾಗಿ ಸಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಮತ್ತಷ್ಟು
ಬೆಲೆ ಏರಿಕೆ ಹತೋಟಿಗೆ 'ಮಂತ್ರದಂಡ'ವಿಲ್ಲ: ಅಮೆರಿಕ
ಮುಕ್ತ ಗೋಧಿ ಮಾರುಕಟ್ಟೆಗೆ ಸರಕಾರ ಚಿಂತನೆ
ನೌಕರರ ಸಂಖ್ಯೆಯನ್ನು ವೃದ್ಧಿಸಲಿರುವ ಯಾಹೂ ಇಂಡಿಯಾ
ಭಾರತ-ಇರಾನ್ ಪೈಪ್‌ಲೈನ್: ಜುಲೈನಲ್ಲಿ ಮಾತುಕತೆ
ಹಣದುಬ್ಬರ ನಿಯಂತ್ರಣದಿಂದ ಅಭಿವೃದ್ಧಿಗೆ ಧಕ್ಕೆಯಿಲ್ಲ: ರೆಡ್ಡಿ
ಹಣದುಬ್ಬರ ಶೇ.5.5ಕ್ಕೆ ಇಳಿಯಲಿದೆ: ಸಿಎಂಐಇ