ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೇಪೋ ದರ: ಉತ್ಪಾದನಾ ಕ್ಷೇತ್ರದ ಮೇಲೆ ಪ್ರಭಾವ  Search similar articles
ಹಣದುಬ್ಬರ ನಿಯಂತ್ರಣಕ್ಕಾಗಿ ರೆಪೋ ದರವನ್ನು ಏರಿಸುವ ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ಧಾರದಿಂದ, ಈಗಾಗಲೇ ಹೆಚ್ಚು ಬಡ್ಡಿದರದ ಪ್ರಭಾವಕ್ಕೆ ಒಳಗಾಗಿರುವ ಉತ್ಪಾದನಾ ಕ್ಷೇತ್ರಕ್ಕೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಉದ್ಯಮ ಮಂಡಳಿ ತಿಳಿಸಿದೆ.

ಅಧಿಕ ಬಡ್ಡಿದರದಿಂದ ಈಗಾಗಲೇ ಮಂದವಾಗಿರುವ ಉತ್ಪಾದನಾ ಕೇತ್ರವು ಆರ್‌ಬಿಐನ ಈ ನಿರ್ಧಾರದಿಂದ ಇನ್ನಷ್ಟು ಪ್ರಭಾವಕ್ಕೆ ಒಳಗಾಗಲಿದೆ ಎಂದು ಉದ್ಯಮ ಮಂಡಳಿ ಎಫ್‌ಐಸಿಸಿಐ ಹೇಳಿದೆ.

ಭಾರತೀಯ ರಿಸರ್ವ್ ಬ್ಯಾಂಕಿನ ಈ ನಿರ್ಧಾರವು ಉತ್ಪಾದನಾ ಕ್ಷೇತ್ರದ ಮೇಲೆ ಪರಿಣಾಮ ಬೀರುವುದರ ಜೊತೆಗೆ ದೇಶದ ಆರ್ಥಿಕತೆಯ ಒಟ್ಟು ಜಿಡಿಪಿ ಬೆಳವಣಿಗೆಗೂ ಇದರಿಂದ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಉದ್ಯಮ ಮಂಡಳಿಯು ಅಭಿಪ್ರಾಯಪಟ್ಟಿದೆ.

ರೇಪೋ ದರ ಮತ್ತು ನಗದು ಮೀಸಲು ಪ್ರಮಾಣವನ್ನು ಹೆಚ್ಚಿಸುವುದರೊಂದಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಇನ್ನಷ್ಟು ಕ್ರಮಗಳನ್ನು ಕೈಗೊಂಡಿದ್ದು, ಇದು ಬಡ್ಡಿದರವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಅಸೋಚಾಂ ಅಧ್ಯಕ್ಷ ಸಜ್ಜನ್ ಜಿಂದಾಲ್ ತಿಳಿಸಿದ್ದಾರೆ.

ಈ ನಡುವೆ, ಆರ್‌ಬಿಐನ ರೇಪೋ ದರ ಮತ್ತು ನಗದು ಮೀಸಲು ಪ್ರಮಾಣ ದರ ಏರಿಕೆಯ ನಿರ್ಧಾರದ ನಂತರ ಎಲ್ಲಾ ಬ್ಯಾಂಕುಗಳು ಬಡ್ಡಿದರವನ್ನು ಏರಿಕೆಗೊಳಿಸಲು ನಿರ್ಧರಿಸಿದ್ದು, ಈ ಮೂಲಕ ಗೃಹ, ಕಾರು, ವೈಯಕ್ತಿಕ ಸಾಲ ಮುಂತಾದವುಗಳು ಸಾಲ ಬಡ್ಡಿದರವೂ ಏರಿಕೆಗೊಳ್ಳಲಿದೆ.

ಗ್ರಾಹಕ ಸಾಲ, ಗೃಹ ಸಾಲ, ವೈಯಕ್ತಿಕ ಸಾಲ ಮುಂತಾದವುಗಳ ಬಡ್ಡಿದರಗಳು ಏರಿಕೆಗೊಳ್ಳಲಿವೆ ಎಂದು ಪಂಜಾಬ್ ನ್ಯಾಶನಲ್ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಚಕ್ರವರ್ತಿ ತಿಳಿಸಿದ್ದು, ಇದೇ ವೇಳೆ ಬ್ಯಾಂಕುಗಳು ಠೇವಣಿ ದರವನ್ನು ಕೂಡಾ ಹೆಚ್ಚುಗೊಳಿಸಲಿವೆ ಎಂದು ಹೇಳಿದ್ದಾರೆ.
ಮತ್ತಷ್ಟು
ಮೈಕ್ರೋಸಾಫ್ಟ್ ಭಾರತದ ಪ್ರಖ್ಯಾತ ಕಂಪನಿ: ಸಮೀಕ್ಷೆ
ರಫ್ತು ಪ್ರಮಾಣ ಹೆಚ್ಚಳ: ಆರ್‌ಬಿಐ
ರಿಲಾಯನ್ಸ್-ಎಂಟಿಎನ್: ಜುಲೈನಲ್ಲಿ ಅಂತಿಮ ಮಾತುಕತೆ
ಬೆಲೆ ಏರಿಕೆ ಹತೋಟಿಗೆ 'ಮಂತ್ರದಂಡ'ವಿಲ್ಲ: ಅಮೆರಿಕ
ಮುಕ್ತ ಗೋಧಿ ಮಾರುಕಟ್ಟೆಗೆ ಸರಕಾರ ಚಿಂತನೆ
ನೌಕರರ ಸಂಖ್ಯೆಯನ್ನು ವೃದ್ಧಿಸಲಿರುವ ಯಾಹೂ ಇಂಡಿಯಾ