ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೇಡಿಕೆ ಮಂದವು ಆರ್‌ಬಿಐ ಗುರಿ: ಸರಕಾರ  Search similar articles
ಬೇಡಿಕೆಯ ಪ್ರಮಾಣವನ್ನು ಮಂದಗೊಳಿಸುವ ಗುರಿಯೊಂದಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ಭಿಗಿ ಕ್ರಮಗಳನ್ನು ಕೈಗೊಂಡಿದ್ದು, ಆರ್‌ಬಿಐನ ಈ ನೀತಿಯ ದೃಷ್ಟಿಕೋನವು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರ ವಿಶ್ವಾಸವನ್ನು ವರ್ಧಿಸಬೇಕು ಎಂದು ಹಣಕಾಸು ಸಚಿವಾಲಯದ ಹೇಳಿಕೆಗಳು ತಿಳಿಸಿದೆ.

ತಕ್ಷಣವೇ ಜಾರಿಗೆ ಬರುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ರೇಪೋ ದರವನ್ನು ಮತ್ತು ನಗದು ಮೀಸಲು ಪ್ರಮಾಣವನ್ನು ಮಂಗಳವಾರ ಏರಿಸಿತ್ತು.

ಮಾರ್ಚ್ 2002ರ ನಂತರ ರೇಪೋ ದರವು ಪ್ರಸಕ್ತ ಅಧಿಕ ಮಟ್ಟದಲ್ಲಿದ್ದು, ಬೇಡಿಕೆಯ ಪ್ರಮಾಣವನ್ನು ಮಂದಗೊಳಿಸುವುದು ಆರ್‌ಬಿಐ ಗುರಿಯಾಗಿದೆ ಎಂದು ಹೇಳಿಕೆಗಳು ತಿಳಿಸಿವೆ.

ಭಾರತೀಯ ರಿಸರ್ವ್ ಬ್ಯಾಂಕಿನ ಈ ನಿರ್ಧಾರವು ವಿದೇಶಿ ಮತ್ತು ಪ್ರಾದೇಶಿಕ ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸುವುದರೊಂದಿಗೆ ಆರ್ಥಿಕತೆಯ ಅಭಿವೃದ್ಧಿಗೆ ಶುಭಶಕುನವನ್ನು ನೀಡಲಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆಗಳು ಸ್ಪಷ್ಟಪಡಿಸಿವೆ.
ಮತ್ತಷ್ಟು
ರೇಪೋ ದರ: ಉತ್ಪಾದನಾ ಕ್ಷೇತ್ರದ ಮೇಲೆ ಪ್ರಭಾವ
ಮೈಕ್ರೋಸಾಫ್ಟ್ ಭಾರತದ ಪ್ರಖ್ಯಾತ ಕಂಪನಿ: ಸಮೀಕ್ಷೆ
ರಫ್ತು ಪ್ರಮಾಣ ಹೆಚ್ಚಳ: ಆರ್‌ಬಿಐ
ರಿಲಾಯನ್ಸ್-ಎಂಟಿಎನ್: ಜುಲೈನಲ್ಲಿ ಅಂತಿಮ ಮಾತುಕತೆ
ಬೆಲೆ ಏರಿಕೆ ಹತೋಟಿಗೆ 'ಮಂತ್ರದಂಡ'ವಿಲ್ಲ: ಅಮೆರಿಕ
ಮುಕ್ತ ಗೋಧಿ ಮಾರುಕಟ್ಟೆಗೆ ಸರಕಾರ ಚಿಂತನೆ