ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೈಲ ಬೆಲೆ ಏರಿಕೆ-ಡಾಲರ್ ಇಳಿಕೆ ಕಾರಣ: ಒಪಿಇಸಿ  Search similar articles
ತನ್ನ ನಿಯಂತ್ರಣದಲ್ಲಿಲ್ಲದ ಅಂಶಗಳಾದ ಇರಾನ್ ಮೇಲಿನ ಅಮೆರಿಕ ಒತ್ತಡ ಹಾಗೂ ಡಾಲರ್ ಇಳಿಕೆಯು ತೈಲ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಒಪಿಇಸಿ ಅಧ್ಯಕ್ಷ ಚಾಕಿಬ್ ಖೇಲಿಲ್ ಅಭಿಪ್ರಾಯಪಟ್ಟಿದ್ದು, ತೈಲ ಉತ್ಪಾದಕರು ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಸಕ್ತ ಬೇಡಿಕೆಗೆ ಬೇಕಾಗುವಷ್ಟು ತೈಲವನ್ನು ಪೂರೈಸಲು ತೈಲ ಉತ್ಪಾದಕ ರಾಷ್ಟ್ರಗಳು ಸಾಕಷ್ಟು ತೈಲವನ್ನು ಉತ್ಪಾದನೆ ಮಾಡುತ್ತಿದ್ದು, ಹೆಚ್ಚುವರಿ ಸಂಗ್ರಹಣೆಯನ್ನು ಕೂಡಾ ಹೊಂದಿದೆ ಎಂದು ಯುರೋಪಿಯನ್ ಒಕ್ಕೂಟ ರಾಷ್ಟ್ರಗಳೊಂದಿಗಿನ ಮಾತುಕತೆಯ ನಂತಕ ಖೇಲಿಲ್ ತಿಳಿಸಿದ್ದಾರೆ.

ಮುಂದಿನ ಕೆಲವು ವಾರಗಳಲ್ಲಿ ತೈಲ ಬೆಲೆಯು ಅಮೆರಿಕವವು ಇರಾನ್‌ನೊಂದಿಗೆ ಯಾವ ರೀತಿ ಮಾತುಕತೆ ನಡೆಸುತ್ತದೆ ಮತ್ತು ಅಮೆರಿಕ ಡಾಲರ್‌ನ ಮೌಲ್ಯ ಏರಿಕೆಯನ್ನು ಆಧರಿಸಿದೆ ಎಂದು ಅವರು ಹೇಳಿದ್ದಾರೆ.

ಜುಲೈ ವೇಳೆ ಡಾಲರ್ ಮೌಲ್ಯ ಪ್ರಮಾಣವು ಎಷ್ಟಿರುತ್ತದೆ ಮತ್ತು ಇರಾನ್ ಅಮೆರಿಕ ನಡುವಿನ ವಿವಾದವು ಯಾವ ರೀತಿ ಮುಂದುವರಿಯುತ್ತದೆ ಎಂಬುದನ್ನು ತೈಲ ಬೆಲೆಯು ಅವಲಂಬಿಸಿದೆ ಎಂದು ಖೇಲಿಲ್ ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
ಬೇಡಿಕೆ ಮಂದವು ಆರ್‌ಬಿಐ ಗುರಿ: ಸರಕಾರ
ರೇಪೋ ದರ: ಉತ್ಪಾದನಾ ಕ್ಷೇತ್ರದ ಮೇಲೆ ಪ್ರಭಾವ
ಮೈಕ್ರೋಸಾಫ್ಟ್ ಭಾರತದ ಪ್ರಖ್ಯಾತ ಕಂಪನಿ: ಸಮೀಕ್ಷೆ
ರಫ್ತು ಪ್ರಮಾಣ ಹೆಚ್ಚಳ: ಆರ್‌ಬಿಐ
ರಿಲಾಯನ್ಸ್-ಎಂಟಿಎನ್: ಜುಲೈನಲ್ಲಿ ಅಂತಿಮ ಮಾತುಕತೆ
ಬೆಲೆ ಏರಿಕೆ ಹತೋಟಿಗೆ 'ಮಂತ್ರದಂಡ'ವಿಲ್ಲ: ಅಮೆರಿಕ