ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೇರ ತೆರಿಗೆ ಸಂಗ್ರಹಣೆಯಲ್ಲಿ ಹೆಚ್ಚಳ: ಸಚಿವಾಲಯ  Search similar articles
ಕಾರ್ಪೋರೇಟ್‌ಗಳಿಂದ ಮುಂಚಿತ ತೆರಿಗೆ ಪಾವತಿಯ ಫಲವಾಗಿ ನೇರ ತೆರಿಗೆ ಸಂಗ್ರಹಣೆಯಲ್ಲಿ ಶೇ.43.45ರಷ್ಟು ಹೆಚ್ಚಳ ಉಂಟಾಗಿದ್ದು, ದೇಶದಲ್ಲಿ ಜೂನ್ 21ರವರೆಗೆ ಸುಮಾರು 49,411 ಕೋಟಿ ನೇರ ತೆರಿಗೆಯನ್ನು ಸಂಗ್ರಹಿಸಲಾಗಿತ್ತು.

ಕಾರ್ಪೋರೇಟ್ ತೆರಿಗೆ ವಸೂಲಿ ಪ್ರಮಾಣವು 30,655 ಕೋಟಿಗಳಷ್ಟಿದ್ದು, ಶೇ.39.81ರಷ್ಟು ಏರಿಕೆಯಾಗಿದ್ದು, ಇದೇ ಅವಧಿಯಲ್ಲಿ ಸುಮಾರು 18,756 ಕೋಟಿ ಆದಾಯ ತೆರಿಗೆ ಸಂಗ್ರಹಣೆ ಮಾಡುವ ಮೂಲಕ ಆದಾಯ ತೆರಿಗೆ ವಸೂಲಿಯಲ್ಲಿ ಶೇ.49.8ರಷ್ಟು ಏರಿಕೆ ಉಂಟಾಗಿದೆ.

ಉನ್ನತ ಕಂಪನಿಗಳಿಂದ ಮುಂಚಿತ ತೆರಿಗೆ ಪಾವತಿಯು ಉತ್ತಮ ಬೆಳವಣಿಗೆಯನ್ನು ಮೂಡಿಸಿದ್ದು, ಒಎನ್‌ಸಿಜಿ, ಎಸ್‌ಬಿಐ ಮತ್ತು ಸೈಲ್ ಗರಿಷ್ಠ ಪ್ರಮಾಣದಲ್ಲಿ ತೆರಿಗೆ ಪಾವತಿಸಿದೆ ಎಂದು ಸಚಿವಾಲಯವು ತಿಳಿಸಿದೆ.
ಮತ್ತಷ್ಟು
ತೈಲ ಬೆಲೆ ಏರಿಕೆ-ಡಾಲರ್ ಇಳಿಕೆ ಕಾರಣ: ಒಪಿಇಸಿ
ಬೇಡಿಕೆ ಮಂದವು ಆರ್‌ಬಿಐ ಗುರಿ: ಸರಕಾರ
ರೇಪೋ ದರ: ಉತ್ಪಾದನಾ ಕ್ಷೇತ್ರದ ಮೇಲೆ ಪ್ರಭಾವ
ಮೈಕ್ರೋಸಾಫ್ಟ್ ಭಾರತದ ಪ್ರಖ್ಯಾತ ಕಂಪನಿ: ಸಮೀಕ್ಷೆ
ರಫ್ತು ಪ್ರಮಾಣ ಹೆಚ್ಚಳ: ಆರ್‌ಬಿಐ
ರಿಲಾಯನ್ಸ್-ಎಂಟಿಎನ್: ಜುಲೈನಲ್ಲಿ ಅಂತಿಮ ಮಾತುಕತೆ