ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
3 ದಶಕಗಳಲ್ಲಿ ವಿಶ್ವ ಇಂಧನ ಬೇಡಿಕೆ ಹೆಚ್ಚಳ: ವರದಿ  Search similar articles
ಮುಂದಿನ ಎರಡು ದಶಕಗಳಲ್ಲಿ ವಿಶ್ವ ಇಂಧನ ಬೇಡಿಕೆಯು ಶೇ.50ರಷ್ಟು ಹೆಚ್ಚಳವಾಗಲಿದ್ದು, ತೈಲ ಬೆಲೆಯು ಪ್ರತಿ ಬ್ಯಾರಲಿಗೆ ರೂ.186ಕ್ಕೆ ತಲುಪಲಿದೆ ಮತ್ತು ಜಾಗತಿಕ ತಾಪಮಾನದ ಪರಿಣಾಮದ ಹೊರತಾಗಿಯೂ ಕಲ್ಲಿದ್ದಲು ಅತಿ ದೊಡ್ಡ ವಿದ್ಯುತ್ ಮೂಲವಾಗಲಿದೆ ಎಂದು ಅಮೆರಿಕ ಸರಕಾರಿ ಪರಿಣಿತರು ಭವಿಷ್ಯ ನುಡಿದಿದ್ದಾರೆ.

ಚೀನಾ ಮತ್ತು ಇತರ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಇಂಧನ ಬಳಕೆಯು ಅತಿ ಹೆಚ್ಚಳವಾಗಲಿದ್ದು, ಮಧ್ಯ ಪೂರ್ವ ಮತ್ತು ಆಫ್ರಿಕಾಗಳಲ್ಲೂ ಇಂಧನ ಬೇಡಿಕೆ ವರ್ಧನೆಗೊಳ್ಳಲಿದೆ ಎಂದು ಇದು ತಿಳಿಸಿದೆ.

ಪರಮಾಣು ವಿದ್ಯುತ್ ಸ್ಥಾವರದಿಂದ ವಿದ್ಯುತ್ ಉತ್ಪಾದನೆಯ ಪ್ರಮಾಣದಲ್ಲಿ ಹೆಚ್ಚಳ ಉಂಟಾಗಲಿದ್ದು, 2030ರೊಳಗೆ ಹೆಚ್ಚುವರಿ 124 ಪರಮಾಣು ವಿದ್ಯುತ್ ಸ್ಥಾವರಗಳು ಸ್ಥಾಪನೆಗೊಳ್ಳಲಿವೆ ಎಂದು ವರದಿಗಳು ಹೇಳಿವೆ.

ಇಂಧನ ಬಳಕೆ ಹೆಚ್ಚಳಗೊಂಡಂತೆ, ವಾತಾವರಣಕ್ಕೆ ಬಿಡುಗಡೆಯಾಗುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣದಲ್ಲಿ ಕೂಡಾ ಹೆಚ್ಚಳ ಉಂಟಾಗಲಿದ್ದು, 2030ರ ವೇಳೆಗೆ ಇದು ಶೇ.50ರಷ್ಟು ಹೆಚ್ಚುಗೊಳ್ಳಲಿದೆ ಎಂದು ಅಧ್ಯಯನಗಳು ತಿಳಿಸಿವೆ.
ಮತ್ತಷ್ಟು
ಇನ್ನಷ್ಟು ತೀವ್ರ ಕ್ರಮ: ಆರ್‌ಬಿಐ
ನೇರ ತೆರಿಗೆ ಸಂಗ್ರಹಣೆಯಲ್ಲಿ ಹೆಚ್ಚಳ: ಸಚಿವಾಲಯ
ತೈಲ ಬೆಲೆ ಏರಿಕೆ-ಡಾಲರ್ ಇಳಿಕೆ ಕಾರಣ: ಒಪಿಇಸಿ
ಬೇಡಿಕೆ ಮಂದವು ಆರ್‌ಬಿಐ ಗುರಿ: ಸರಕಾರ
ರೇಪೋ ದರ: ಉತ್ಪಾದನಾ ಕ್ಷೇತ್ರದ ಮೇಲೆ ಪ್ರಭಾವ
ಮೈಕ್ರೋಸಾಫ್ಟ್ ಭಾರತದ ಪ್ರಖ್ಯಾತ ಕಂಪನಿ: ಸಮೀಕ್ಷೆ