ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಹಾರ ಉತ್ಪನ್ನ ವೆಚ್ಚದಲ್ಲಿ ಇಳಿಕೆ: ಸಮೀಕ್ಷೆ  Search similar articles
ಹೆಚ್ಚುತ್ತಿರುವ ಆಹಾರ ಬೆಲೆಯು ಹಣದುಬ್ಬರ ಏರಿಕೆಗೆ ಕಾರಣವಾಗುತ್ತಿದ್ದರೂ, ಕಳೆದ ಎರಡು ವರ್ಷಗಳಲ್ಲಿ ಆಹಾರ ಉತ್ಪನ್ನಗಳ ಮೇಲಿನ ವೆಚ್ಚವನ್ನು ಗ್ರಾಹಕರು ಕಡಿತಗೊಳಿಸಿದ್ದಾರೆ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ.

ಗ್ರಾಹಕರು ತಮ್ಮ ಒಟ್ಟು ಆದಾಯದಲ್ಲಿ ಶೇ.31ರಷ್ಟನ್ನು ಮಾತ್ರವೇ ಆಹಾರ ಉತ್ಪನ್ನಗಳಿಗಾಗಿ ವಿನಿಯೋಗಿಸುತ್ತಿದ್ದು, 2006ರಲ್ಲಿ ಇದರ ಪ್ರಮಾಣವು ಶೇ.35.1ರಷ್ಟಿತ್ತು ಎಂದು ಸಂಶೋಧನಾ ಸಂಸ್ಥೆಯೊಂದರ ಸಮೀಕ್ಷೆಗಳು ಹೇಳಿವೆ.

ಬಟ್ಟೆಬರೆ ಹಾಗೂ ಆಹಾರ ಉತ್ಪನ್ನಗಳ ವೆಚ್ಚವನ್ನು ಕಡಿತಗೊಳಿಸಿದ್ದು, ಬಾಡಿಗೆ, ವೈದ್ಯಕೀಯ ಖರ್ಚು, ಸಾರಿಗೆ, ಶಿಕ್ಷಣ ಮುಂತಾದವುಗಳಿಗೆ ಹೆಚ್ಚು ವೆಚ್ಚ ಮಾಡುತ್ತಾರೆ ಎಂದು ಈ ಸಮೀಕ್ಷೆಯಿಂದ ತಿಳಿದುಬಂದಿದೆ.

ತಲಾ ಆದಾಯ ಹೆಚ್ಚಳಕ್ಕಾಗಿ ಬೇಡಿಕೆ ವಿಧಾನದಲ್ಲಿ ಬದಲಾವಣೆ ಉಂಟಾಗಿದೆ ಎಂದು ಈ ಸಮೀಕ್ಷೆಯು ಅಭಿಪ್ರಾಯಪಟ್ಟಿದ್ದು, ಶಿಕ್ಷಣ ಮಟ್ಟದ ವೃದ್ಧಿ ಮತ್ತು ನಗರೀಕರಣವು ಕೂಡಾ ಇದಕ್ಕೆ ಕಾರಣವಾಗಿದೆ ಎಂದು ಹೇಳಿದೆ.
ಮತ್ತಷ್ಟು
3 ದಶಕಗಳಲ್ಲಿ ವಿಶ್ವ ಇಂಧನ ಬೇಡಿಕೆ ಹೆಚ್ಚಳ: ವರದಿ
ಇನ್ನಷ್ಟು ತೀವ್ರ ಕ್ರಮ: ಆರ್‌ಬಿಐ
ನೇರ ತೆರಿಗೆ ಸಂಗ್ರಹಣೆಯಲ್ಲಿ ಹೆಚ್ಚಳ: ಸಚಿವಾಲಯ
ತೈಲ ಬೆಲೆ ಏರಿಕೆ-ಡಾಲರ್ ಇಳಿಕೆ ಕಾರಣ: ಒಪಿಇಸಿ
ಬೇಡಿಕೆ ಮಂದವು ಆರ್‌ಬಿಐ ಗುರಿ: ಸರಕಾರ
ರೇಪೋ ದರ: ಉತ್ಪಾದನಾ ಕ್ಷೇತ್ರದ ಮೇಲೆ ಪ್ರಭಾವ