ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಟಿಎಫ್ ಬೆಲೆ ಭಾರತದಲ್ಲಿ ಅಧಿಕ: ವರದಿ  Search similar articles
ವಿಮಾನ ಇಂಧನದ(ಎಟಿಎಫ್) ಬೆಲೆಯು ಭಾರತದಲ್ಲಿ ಅತ್ಯಧಿಕವಾಗಿದ್ದು, ನೆರೆಯ ಬ್ಯಾಂಕಾಕ್ ಮತ್ತು ಸಿಂಗಾಪುರಗಳಿಗಿಂತ ಶೇ.70ರಷ್ಟು ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ತಿಂಗಳ ಪ್ರಾರಂಭದಲ್ಲಿ ಎಟಿಎಫ್ ಬೆಲೆಯು ಪ್ರತಿ ಕಿಲೋ ಲೀಟರ್‌ಗೆ 69,227ರೂಪಾಯಿಗಳಷ್ಟಿದ್ದು, ಜನವರಿ ತಿಂಗಳಲ್ಲಿ ಇದು 45,496 ರೂಪಾಯಿಗಳಷ್ಟಿತ್ತು.

ಭಾರತದಲ್ಲಿ ಇಂಧನ ತುಂಬುವ ಬೆಲೆಯು ಇತರ ಕಡೆಗಳಲ್ಲಿನ ವಿಮಾನ ಇಂಧನ ಬೆಲೆಗಿಂತ ಹೆಚ್ಚಾಗಿದೆ ಎಂದು ಹೆಚ್ಚಿನ ಪ್ರಾದೇಶಿಕ ಏರ್‌ಲೈನ್ ಸಂಸ್ಥೆಗಳು ಅಭಿಪ್ರಾಯಪಟ್ಟಿದೆ.

ತಮ್ಮ ಒಟ್ಟು ವೆಚ್ಚದ ಸುಮಾರು ಶೇ.33ರಷ್ಟು ಪಾಲು ಇಂಧನಕ್ಕೆ ಮೀಸಲಾದರೆ, ಭಾರತದಲ್ಲಿ ಮಾತ್ರ ಇದು ಶೇ.50ರಷ್ಟಾಗಿರುತ್ತದೆ ಎಂದು ಯುರೋಪಿಯನ್ ಏರ್‌ಲೈನ್ ಸಂಸ್ಥೆಗಳು ತಿಳಿಸಿವೆ.

ವಿಮಾನ ಇಂಧನಕ್ಕಾಗಿ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳು ಪಾವತಿ ಮಾಡುವುದಕ್ಕಿಂತ ಶೇ.51ರಷ್ಟು ಹೆಚ್ಚು ಪಾವತಿಯನ್ನು ಪ್ರಾದೇಶಿಕ ವಿಮಾನ ಸಂಸ್ಥೆಗಳು ಪಾವತಿಸುತ್ತವೆ ಎಂದು ಇತ್ತೀಚಿನ ವರದಿಗಳು ಹೇಳಿವೆ.

ದೇಶದಲ್ಲಿ ಇತ್ತೀಚೆಗೆ ಎಟಿಎಫ್ ಬೆಲೆಯ ಹೆಚ್ಚಳವು ಪರಿಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸಿದ್ದು, ಎಟಿಎಫ್ ಬೆಲೆ ಹೆಚ್ಚಳಕ್ಕೆ ಕಚ್ಛಾತೈಲ ಬೆಲೆ ಹೆಚ್ಚಳ ಮಾತ್ರವೇ ಕಾರಣವಲ್ಲ ದೇಶದಾದ್ಯಂತವಿರುವ ವಿವಿಧ ತೆರಿಗೆ ಕ್ರಮಗಳು ಕೂಡಾ ಇದಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು
ಆಹಾರ ಉತ್ಪನ್ನ ವೆಚ್ಚದಲ್ಲಿ ಇಳಿಕೆ: ಸಮೀಕ್ಷೆ
3 ದಶಕಗಳಲ್ಲಿ ವಿಶ್ವ ಇಂಧನ ಬೇಡಿಕೆ ಹೆಚ್ಚಳ: ವರದಿ
ಇನ್ನಷ್ಟು ತೀವ್ರ ಕ್ರಮ: ಆರ್‌ಬಿಐ
ನೇರ ತೆರಿಗೆ ಸಂಗ್ರಹಣೆಯಲ್ಲಿ ಹೆಚ್ಚಳ: ಸಚಿವಾಲಯ
ತೈಲ ಬೆಲೆ ಏರಿಕೆ-ಡಾಲರ್ ಇಳಿಕೆ ಕಾರಣ: ಒಪಿಇಸಿ
ಬೇಡಿಕೆ ಮಂದವು ಆರ್‌ಬಿಐ ಗುರಿ: ಸರಕಾರ