ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತ್ರಿರಾಷ್ಟ್ರ ಪೈಪ್‌ಲೈನ್ ಯೋಜನೆಗೆ ಚೀನಾ ಉತ್ಸುಕ  Search similar articles
ಇರಾನ್-ಪಾಕಿಸ್ತಾನ-ಭಾರತ ಅನಿಲ ಕೊಳವೆ ಯೋಜನೆಯಲ್ಲಿ ಪಾಲ್ಗೊಳ್ಳಲು ಚೀನಾವು ಉತ್ಸುಕಗೊಂಡಿದ್ದು, ಇದರ ಕುರಿತಾಗಿ ಮಾತುಕತೆ ನಡೆಸಲು ನಿಯೋಗವೊಂದನ್ನು ಪಾಕಿಸ್ತಾನಕ್ಕೆ ಕಳುಹಿಸಲಿದೆ ಎಂದು ಪಾಕಿಸ್ತಾನ ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಯೋಜನೆಯಲ್ಲಿ ಸೇರ್ಪಡೆಗೊಳ್ಳುವಂತೆ ಈ ತಿಂಗಳ ಪ್ರಾರಂಭದಲ್ಲಿ ಚೀನಾಗೆ ಅಧಿಕೃತ ಪ್ರಸ್ತಾಪವನ್ನು ಕಳುಹಿಸಲಾಗಿತ್ತು. ಈ ಸಂಬಂಧ ಧನಾತ್ಮಕ ಪ್ರತಿಕ್ರಿಯೆಯನ್ನು ಚೀನಾವು ನೀಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಾಥಮಿಕ ಮಾತುಕತೆಗಾಗಿ ಚೀನಾ ನಿಯೋಗವು ಸದ್ಯದಲ್ಲಿಯೇ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದು, ನಂತರ ಇರಾನ್ ಪ್ರವಾಸವನ್ನು ಕೈಗೊಳ್ಳುವ ಸಾಧ್ಯತೆ ಇದೆ.

ಭಾರತ-ಪಾಕಿಸ್ತಾನ-ಇರಾನ್ ಅನಿಲ ಕೊಳವೆ ಯೋಜನೆಯು 2,775 ಕಿ.ಮೀ.ಉದ್ದದ ಅನಿಲಕೊಳವೆ ಯೋಜನೆಯಾಗಿದ್ದು, ಈ ಯೋಜನೆಯ ಮೂಲಕ ಇರಾನ್ ಪಾಕಿಸ್ತಾನ ಮತ್ತು ಭಾರತಕ್ಕೆ ನೈಸರ್ಗಿಕ ಅನಿಲವನ್ನು ಸರಬರಾಜು ಮಾಡುತ್ತದೆ. ಈ ಯೋಜನೆಯ ಬಗ್ಗೆ ಇನ್ನಷ್ಟು ವಿವರಗಳನ್ನು ನೀಡುವಂತೆ ಚೀನಾವು ಮನವಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಅಲ್ಲದೆ ಇದಕ್ಕೆ ಇರಾನಿನ ಸಮ್ಮತಿಯೂ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
ಎಟಿಎಫ್ ಬೆಲೆ ಭಾರತದಲ್ಲಿ ಅಧಿಕ: ವರದಿ
ಆಹಾರ ಉತ್ಪನ್ನ ವೆಚ್ಚದಲ್ಲಿ ಇಳಿಕೆ: ಸಮೀಕ್ಷೆ
3 ದಶಕಗಳಲ್ಲಿ ವಿಶ್ವ ಇಂಧನ ಬೇಡಿಕೆ ಹೆಚ್ಚಳ: ವರದಿ
ಇನ್ನಷ್ಟು ತೀವ್ರ ಕ್ರಮ: ಆರ್‌ಬಿಐ
ನೇರ ತೆರಿಗೆ ಸಂಗ್ರಹಣೆಯಲ್ಲಿ ಹೆಚ್ಚಳ: ಸಚಿವಾಲಯ
ತೈಲ ಬೆಲೆ ಏರಿಕೆ-ಡಾಲರ್ ಇಳಿಕೆ ಕಾರಣ: ಒಪಿಇಸಿ