ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಸ್‌ಬಿಐನಿಂದ ಸಾಲ ಬಡ್ಡಿದರ ಹೆಚ್ಚಳ  Search similar articles
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಪ್ರಮುಖ ಸಾಲ ಬಡ್ಡಿ ದರದ ಪ್ರಮಾಣವನ್ನು ಶೇ.0.5ರಷ್ಟು ಹೆಚ್ಚಳಗೊಳಿಸಿದ್ದು, ಈ ಬದಲಾವಣೆಯು ಶುಕ್ರವಾರದಿಂದ ಜಾರಿಗೆ ಬರಲಿದೆ.

ಶೇ.12.75ಕ್ಕೆ ಸಾಲಬಡ್ಡಿದರವನ್ನು ಸ್ಟೇಟ್‌ಬ್ಯಾಂಕ್ ಏರಿಕೆಗೊಳಿಸುವುದರೊಂದಿಗೆ ಸ್ಟೇಟ್‌ಬ್ಯಾಂಕಿನ ಈ ನಿರ್ಧಾರವು ಸಾಲವನ್ನು ಇನ್ನಷ್ಟು ತುಟ್ಟಿಯಾಗಿಸಲಿದೆ.

ರೇಪೋ ದರ ಮತ್ತು ನಗದು ಮೀಸಲು ಪ್ರಮಾಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಜೂನ್ 24ರಂದು ಹೆಚ್ಚಳಗೊಳಿಸಿದ ನಂತರ, ಬ್ಯಾಂಕಿನ ಆಸ್ತಿ ಬಾಧ್ಯತಾ ಸಮಿತಿಯು(ಎಎಲ್‌ಸಿಒ) ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಾಲ ಬಡ್ಡಿ ದರ ಏರಿಕೆಯು ಎಲ್ಲಾ ವಿಧದ ಸಾಲಗಳಿಗೂ ಅನ್ವಯಿಸುತ್ತದೆ ಎಂದು ಎಸ್‌ಬಿಐ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಮುಕಾಂಡ್ ತಿಳಿಸಿದ್ದಾರೆ.

ಈ ಮೊದಲು ಕಡಿತಗೊಳಿಸಿದ್ದ ಮುಖ್ಯ ಸಾಲಬಡ್ಡಿದರವನ್ನು ಎಸ್‌ಬಿಐ ಮತ್ತೆ ಏರಿಸಿದ್ದು, ಎಲ್ಲಾ ವಿಧದ ಸಾಲಗಳಿಗೂ ಇದು ಅನ್ವಯವಾಗುತ್ತದೆ ಎಂದು ಮುಕಾಂಡ್ ಹೇಳಿದ್ದಾರೆ.

ಏನೇ ಆದರೂ, ಇತ್ತೀಚೆಗಷ್ಟೇ ಬ್ಯಾಂಕ್ ಠೇವಣಿ ದರಗಳನ್ನು ಹೆಚ್ಚುಗೊಳಿಸಿರುವುದರಿಂದ ಅದರಲ್ಲಿ ಠೇವಣಿ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
ಹಣದುಬ್ಬರ ಎರಡಂಕಿಯಲ್ಲೇ ಮುಂದುವರಿಯಲಿದೆ: ಚಿದಂಬರಂ
ತ್ರಿರಾಷ್ಟ್ರ ಪೈಪ್‌ಲೈನ್ ಯೋಜನೆಗೆ ಚೀನಾ ಉತ್ಸುಕ
ಎಟಿಎಫ್ ಬೆಲೆ ಭಾರತದಲ್ಲಿ ಅಧಿಕ: ವರದಿ
ಆಹಾರ ಉತ್ಪನ್ನ ವೆಚ್ಚದಲ್ಲಿ ಇಳಿಕೆ: ಸಮೀಕ್ಷೆ
3 ದಶಕಗಳಲ್ಲಿ ವಿಶ್ವ ಇಂಧನ ಬೇಡಿಕೆ ಹೆಚ್ಚಳ: ವರದಿ
ಇನ್ನಷ್ಟು ತೀವ್ರ ಕ್ರಮ: ಆರ್‌ಬಿಐ