ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೈಕ್ರೋಸಾಫ್ಟ್‌ನಿಂದ ಬಿಲ್‌ಗೇಟ್ಸ್ ನಿವೃತ್ತಿ  Search similar articles
ಪರ್ಸನಲ್ ಕಂಪ್ಯೂಟರ್ ಕ್ರಾಂತಿಕಾರಿಯನ್ನು ಪ್ರಾರಂಭಿಸಿದ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್‌ನಿಂದ ಶುಕ್ರವಾರ ನಿವೃತ್ತಿಯನ್ನು ಹೊಂದಲಿದ್ದಾರೆ.

ಜಗತ್ತಿನ ಅತಿ ದೊಡ್ಡ ಸಾಫ್ಟ್‌ವೇರ್ ಸಂಸ್ಥೆ ಮೈಕ್ರೋಸಾಫ್ಟ್‌ನಿಂದ ಹೊರಬರಲಿರುವ ಗೇಟ್ಸ್, ಇನ್ನು ಮುಂದೆ, ತನ್ನ ಅಪಾರ ಸಂಪತ್ತಿನಿಂದ ಸ್ಥಾಪಿತಗೊಂಡಿರುವ ಧಾರ್ಮಿಕ ಸಂಸ್ಥೆ ಬಿಲ್ ಆಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್‌ನತ್ತ ತನ್ನ ಗಮನವನ್ನು ಹರಿಸಲಿದ್ದಾರೆ.

ಜಗತ್ತಿನ ಅತಿ ದೊಡ್ಡ ಶ್ರೀಮಂತ ಎಂಬ ಹಿರಿಮೆಗೆ ಪಾತ್ರವಾಗಿದ್ದ 52 ವರ್ಷದ ಬಿಲ್ ಗೇಟ್ಸ್, ಅಪಾರ ಐಶ್ವರ್ಯವು ಅಧಿಕ ಜವಾಬ್ಧಾರಿಯನ್ನೂ ಹೊತ್ತು ತರುತ್ತದೆ ಎಂದು ಅಭಿಪ್ರಾಯಪಡುತ್ತಾರೆ.

ಏನೇ ಆದರೂ, ಮೈಕ್ರೋಸಾಫ್ಟ್‌ನ ಮುಖ್ಯಸ್ಥನಾಗಿಯೇ ಬಿಲ್ ಗೇಟ್ಸ್ ಮುಂದುವರಿಯಲಿದ್ದು, ಮೈಕ್ರೋಸಾಫ್ಟ್‌ನ ವಿಶೇಷ ತಾಂತ್ರಿಕ ಯೋಜನೆಗಳಿಗೂ ಕಾರ್ಯನಿರ್ವಹಿಸಿಲಿದ್ದಾರೆ.

ಹಾರ್ಡ್‌ವೇರ್‌ಗಿಂತಲೂ ಸಾಫ್ಟ್‌ವೇರ್ ತಂತ್ರಜ್ಞಾನವು ಅತ್ಯಗತ್ಯ ಎಂದು ಅರಿತುಕೊಂಡ ಬಿಲ್ ಗೇಟ್ಸ್ ತನ್ನ ಸಹವರ್ತಿ ಪಾಲ್ ಅಲೆನ್ ಜೊತೆಗೆ ಮೈಕ್ರೋಸಾಫ್ಟ್‌ ಸಂಸ್ಥೆಯನ್ನು ಸ್ಥಾಪಿಸಿದ್ದರು.
ಮತ್ತಷ್ಟು
ಎಸ್‌ಬಿಐನಿಂದ ಸಾಲ ಬಡ್ಡಿದರ ಹೆಚ್ಚಳ
ಹಣದುಬ್ಬರ ಎರಡಂಕಿಯಲ್ಲೇ ಮುಂದುವರಿಯಲಿದೆ: ಚಿದಂಬರಂ
ತ್ರಿರಾಷ್ಟ್ರ ಪೈಪ್‌ಲೈನ್ ಯೋಜನೆಗೆ ಚೀನಾ ಉತ್ಸುಕ
ಎಟಿಎಫ್ ಬೆಲೆ ಭಾರತದಲ್ಲಿ ಅಧಿಕ: ವರದಿ
ಆಹಾರ ಉತ್ಪನ್ನ ವೆಚ್ಚದಲ್ಲಿ ಇಳಿಕೆ: ಸಮೀಕ್ಷೆ
3 ದಶಕಗಳಲ್ಲಿ ವಿಶ್ವ ಇಂಧನ ಬೇಡಿಕೆ ಹೆಚ್ಚಳ: ವರದಿ