ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
140 ಡಾಲರ್‌ಗೇರಿದ ಬ್ಯಾರೆಲ್ ಕಚ್ಚಾ ತೈಲ ಬೆಲೆ  Search similar articles
ತೈಲ ಬೆಲೆಗಳು ಈ ವರ್ಷದಲ್ಲೇ ಬ್ಯಾರೆಲ್ ಒಂದಕ್ಕೆ 150 ಡಾಲರ್‌ಗಿಂತಲೂ ಹೆಚ್ಚಾಗಬಹುದು ಎಂಬ ಒಪೆಕ್ ಅಧ್ಯಕ್ಷರ ಹೇಳಿಕೆ ಹಾಗೂ ತೈಲ ಉತ್ಪಾದನೆ ಕಡಿತಗೊಳಿಸುವುದಾಗಿ ಲಿಬಿಯಾ ಹೇಳಿಕೆ ನೀಡಿದ ಬೆನ್ನಲ್ಲೇ, ಜಾಗತಿಕ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 140 ಡಾಲರ್‌ಗಿಂತಲೂ ಏರಿಕೆ ಕಂಡಿದೆ.

ಆಗಸ್ಟ್ ತಿಂಗಳ ವಿತರಣೆಗಾಗಿ ಇರುವ ಲೈಟ್ ಸ್ವೀಟ್ ಕಚ್ಚಾ ತೈಲದ ಬೆಲೆ ನ್ಯೂಯಾರ್ಕ್ ಮರ್ಕಂಟೈಲ್ ಎಕ್ಸ್‌ಜೇಂಜ್‌ನಲ್ಲಿ ಗುರುವಾರ ಮಧ್ಯಾಹ್ನ ವೇಳೆಗೆ ಬ್ಯಾರೆಲ್ ಒಂದಕ್ಕೆ 140.39 ಡಾಲರ್‌ಗೇರಿತು. ಅಂತ್ಯದ ಬೆಲೆ ಲಭ್ಯವಾಗಿಲ್ಲವಾದರೂ, ಕಚ್ಚಾ ತೈಲ ಬೆಲೆ ದಾಖಲೆಯ ಮಟ್ಟಕ್ಕೇರುವುದು ಖಚಿತವಾಗಿದೆ.

ಲಂಡನ್‌ನಲ್ಲಿ ಆಗಸ್ಟ್ ತಿಂಗಳ ಬ್ರೆಂಟ್ ಕಚ್ಚಾ ತೈಲವು 5.74 ಡಾಲರ್ ಏರಿಕೆ ಕಂಡು 140.05 ಡಾಲರ್ ತಲುಪಿತು.

ಈ ಬೇಸಿಗೆ ವೇಳೆಗೆ ಜಾಗತಿಕ ಕಚ್ಚಾ ತೈಲ ಬೆಲೆಯು 150ರಿಂದ 170 ಡಾಲರ್‌ವರೆಗೂ ಏರಬಹುದು ಎಂದು ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಒಕ್ಕೂಟ (ಒಪೆಕ್) ಅಧ್ಯಕ್ಷ ಚಕೀಬ್ ಖಲೀಲ್ ಅಭಿಪ್ರಾಯಪಟ್ಟಿದ್ದರು. ಆದರೆ ಬೆಲೆಯು 200 ಡಾಲರ್‌ಗೆ ಏರಲಾರದು ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದರು.

ಈ ಮಧ್ಯೆ, ಲಿಬಿಯಾದ ರಾಷ್ಟ್ರೀಯ ತೈಲ ಕಂಪನಿ ಮುಖ್ಯಸ್ಥರು ಕೂಡ ಹೇಳಿಕೆ ನೀಡಿ, ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ನುಡಿದಿರುವುದು ಕೂಡ ತೈಲ ಬೆಲೆ ಏರಿಕೆಗೆ ಹೇತುವಾಯಿತು.
ಮತ್ತಷ್ಟು
ಮೈಕ್ರೋಸಾಫ್ಟ್‌ನಿಂದ ಬಿಲ್‌ಗೇಟ್ಸ್ ನಿವೃತ್ತಿ
ಎಸ್‌ಬಿಐನಿಂದ ಸಾಲ ಬಡ್ಡಿದರ ಹೆಚ್ಚಳ
ಹಣದುಬ್ಬರ ಎರಡಂಕಿಯಲ್ಲೇ ಮುಂದುವರಿಯಲಿದೆ: ಚಿದಂಬರಂ
ತ್ರಿರಾಷ್ಟ್ರ ಪೈಪ್‌ಲೈನ್ ಯೋಜನೆಗೆ ಚೀನಾ ಉತ್ಸುಕ
ಎಟಿಎಫ್ ಬೆಲೆ ಭಾರತದಲ್ಲಿ ಅಧಿಕ: ವರದಿ
ಆಹಾರ ಉತ್ಪನ್ನ ವೆಚ್ಚದಲ್ಲಿ ಇಳಿಕೆ: ಸಮೀಕ್ಷೆ