ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೇ. 11.42 ಕ್ಕೇರಿದ ಹಣದುಬ್ಬರ: ಜನಸಾಮಾನ್ಯ ತತ್ತರ  Search similar articles
ಏರುತ್ತಿರುವ ಬೆಲೆಗಳಿಂದ ಜನಸಾಮಾನ್ಯರ ಪಡಿಪಾಟಲಿಗೆ ಯಾವುದೇ ಪರಿಹಾರವಿಲ್ಲವೆಂಬಂತೆ ತೋರುತ್ತಿದ್ದು, ಜೂನ್ 14ಕ್ಕೆ ಅಂತ್ಯವಾದ ವಾರದಲ್ಲಿ ಹಣದುಬ್ಬರದ ದರವು ಶೇ.11.42ಕ್ಕೆ ಏರಿದೆ.

ಹಿಂದಿನ ವಾರ ಇದು ಶೇ.11.05 ಪ್ರಮಾಣದೊಂದಿಗೆ 13 ವರ್ಷಗಳಷ್ಟು ಹಿಂದಿನ ದಾಖಲೆಯ ಮಟ್ಟಕ್ಕೆ ಏರಿತ್ತು. ಚಹಾ, ಹಾಲು ಮತ್ತು ಧಾನ್ಯ ಮುಂತಾದ ಆಹಾರ ವಸ್ತುಗಳ ಬೆಲೆ ಏರಿಕೆಯು ಹಣದುಬ್ಬರದ ಹೆಚ್ಚಳಕ್ಕೆ ಕಾರಣವಾಗಿದೆ.

ಈ ಮಧ್ಯೆ, ಹಣದುಬ್ಬರವು ನಿರೀಕ್ಷಿತ ಮಟ್ಟಕ್ಕೆ ಏರಿಲ್ಲ ಎಂಬ ಕಾರಣದಿಂದ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದ್ದು, ಬೆಳಿಗ್ಗೆ 500ಕ್ಕೂ ಹೆಚ್ಚು ಅಂಶ ಕುಸಿತ ಕಂಡಿದ್ದ ಮುಂಬಯಿ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕ ಸೆನ್ಸೆಕ್ಸ್ ಸ್ವಲ್ಪ ಚೇತರಿಕೆ ತೋರಿಸಿದೆ.

ಬೆಳಿಗ್ಗೆ 637.45 ಅಂಶ ಕುಸಿದು 13,784 ಕ್ಕೆ ತಲುಪಿದ್ದ ಸೆನ್ಸೆಕ್ಸ್, ಮಾರುಕಟ್ಟೆಯ ನಿರೀಕ್ಷೆಗಿಂತ ಕಡಿಮೆ ಪ್ರಮಾಣದ ಹಣದುಬ್ಬರ ಇರುವುದರಿಂದಾಗಿ ಮಧ್ಯಾಹ್ನ 12 ಗಂಟೆ ವೇಳೆಗೆ ಸ್ವಲ್ಪ ಚೇತರಿಸಿಕೊಂಡು 13,882.82 ಕ್ಕೆ ತಲುಪಿತ್ತು. ಹಣದುಬ್ಬರ ನಿರೀಕ್ಷೆಗಿಂತ ಕಡಿಮೆಯಾದ ಕಾರಣ ಖರೀದಿ ಚಟುವಟಿಕೆಯೂ ಬಿರುಸುಗೊಂಡಿತು.
ಮತ್ತಷ್ಟು
140 ಡಾಲರ್‌ಗೇರಿದ ಬ್ಯಾರೆಲ್ ಕಚ್ಚಾ ತೈಲ ಬೆಲೆ
ಮೈಕ್ರೋಸಾಫ್ಟ್‌ನಿಂದ ಬಿಲ್‌ಗೇಟ್ಸ್ ನಿವೃತ್ತಿ
ಎಸ್‌ಬಿಐನಿಂದ ಸಾಲ ಬಡ್ಡಿದರ ಹೆಚ್ಚಳ
ಹಣದುಬ್ಬರ ಎರಡಂಕಿಯಲ್ಲೇ ಮುಂದುವರಿಯಲಿದೆ: ಚಿದಂಬರಂ
ತ್ರಿರಾಷ್ಟ್ರ ಪೈಪ್‌ಲೈನ್ ಯೋಜನೆಗೆ ಚೀನಾ ಉತ್ಸುಕ
ಎಟಿಎಫ್ ಬೆಲೆ ಭಾರತದಲ್ಲಿ ಅಧಿಕ: ವರದಿ