ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತ ಬಾಂಗ್ಲಾದೇಶದ ಪ್ರಮುಖ ಆಮದು ಕೇಂದ್ರ  Search similar articles
ಮಾರ್ಚ್ ತಿಂಗಳವರೆಗಿನ ಎಂಟು ತಿಂಗಳ ಅವಧಿಯಲ್ಲಿ ಬಾಂಗ್ಲಾದೇಶವು ಅತಿ ಹೆಚ್ಚಿನ ಪ್ರಮಾಣದ ಉತ್ಪನ್ನಗಳನ್ನು ಭಾರತದಿಂದ ಆಮದು ಮಾಡಿಕೊಂಡಿದ್ದು, ಈ ಮೂಲಕ ಪ್ರಸಕ್ತ ಭಾರತವು ಬಾಂಗ್ಲಾದೇಶದ ಪ್ರಮುಖ ಆಮದು ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ.

ಜೂನ್ 2006ರಲ್ಲಿ ಚೀನಾವು ಈ ಸ್ಥಾನದಲ್ಲಿದ್ದು, ದಕ್ಷಿಣ ಏಶಿಯಾದಲ್ಲೇ ಅತಿ ದೊಡ್ಡ ಆಮದು ಕೇಂದ್ರ ಎಂಬ ಪ್ರಖ್ಯಾತಿ ಗಳಿಸಿತ್ತು.

ಆದರೆ, ಜುಲೈ-2007ರಿಂದ ಮಾರ್ಚ್-2008ರ ಅವಧಿಯಲ್ಲಿ ಭಾರತದಿಂದ ಆಮದು ಮಾಡಿದ ಪ್ರಮಾಣವು 2.45 ಶತಕೋಟಿ ಡಾಲರ್ ಆಗಿದ್ದು, ಇದು ಚೀನಾದಿಂದ ಆಮದು ಮಾಡಿದ 2,29 ಶತಕೋಟಿ ಡಾಲರ್ ಪ್ರಮಾಣಕ್ಕಿಂತ ಹೆಚ್ಚಾಗಿದೆ.

ಜುಲೈನಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಭಾರತದಿಂದ ಬಾಂಗ್ಲಾದೇಶವು ಸುಮಾರು 730 ದಶಲಕ್ಷ ಡಾಲರ್ ಅಕ್ಕಿಯನ್ನು ಆಮದು ಮಾಡಿಕೊಂಡಿದ್ದು,ಕಳೆದ ಹಣಕಾಸು ವರ್ಷಕ್ಕಿಂತ ಇದರ ಪ್ರಮಾಣವು ಅಧಿಕವಾಗಿದೆ.

ಚೀನಾದಲ್ಲಿ ಉಡುಪು, ಯಂತ್ರಗಳು ಮತ್ತು ರಾಸಾಯನಿಕ ಉತ್ಪನ್ನಗಳು ಪ್ರಮುಖ ಆಮದು ವಸ್ತುಗಳಾದರೆ, ಆಹಾರ ಉತ್ಪನ್ನಗಳು ಉಡುಪು ಹಾಗೂ ಯಂತ್ರೋಪಕರಣಗಳು ಭಾರತದ ಪ್ರಮುಖ ಆಮದು ಉತ್ಪನ್ನಗಳಾಗಿವೆ.
ಮತ್ತಷ್ಟು
ಶೇ. 11.42 ಕ್ಕೇರಿದ ಹಣದುಬ್ಬರ: ಜನಸಾಮಾನ್ಯ ತತ್ತರ
140 ಡಾಲರ್‌ಗೇರಿದ ಬ್ಯಾರೆಲ್ ಕಚ್ಚಾ ತೈಲ ಬೆಲೆ
ಮೈಕ್ರೋಸಾಫ್ಟ್‌ನಿಂದ ಬಿಲ್‌ಗೇಟ್ಸ್ ನಿವೃತ್ತಿ
ಎಸ್‌ಬಿಐನಿಂದ ಸಾಲ ಬಡ್ಡಿದರ ಹೆಚ್ಚಳ
ಹಣದುಬ್ಬರ ಎರಡಂಕಿಯಲ್ಲೇ ಮುಂದುವರಿಯಲಿದೆ: ಚಿದಂಬರಂ
ತ್ರಿರಾಷ್ಟ್ರ ಪೈಪ್‌ಲೈನ್ ಯೋಜನೆಗೆ ಚೀನಾ ಉತ್ಸುಕ