ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣಕಾಸು ಸಮಗ್ರತೆ ದೇಶದ ಗುರಿ: ಚಿದಂಬರಂ  Search similar articles
ದೇಶದಲ್ಲಿ ಮುಂದಿನ ಐದು ವರ್ಷಗಳಲ್ಲಿ ಹಣಕಾಸು ಸಮಗ್ರತೆಯನ್ನು ಸಾಧಿಸುವ ಗುರಿಯನ್ನು ಸರಕಾರವು ಹೊಂದಿರುವುದಾಗಿ ಹಣಕಾಸು ಸಚಿವ ಪಿ.ಚಿದಂಬರಂ ತಿಳಿಸಿದ್ದು, ಈ ನಿಟ್ಟಿನಲ್ಲಿ, ಬ್ಯಾಂಕುಗಳು ತಮ್ಮ ಗ್ರಾಮೀಣ ವಹಿವಾಟನ್ನು ವೃದ್ಧಿಗೊಳಿಸುವತ್ತ ಬ್ಯಾಂಕುಗಳಿಗೆ ಉತ್ತೇಜನ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ಸರಕಾರವು ಹಣಕಾಸು ಸಮಗ್ರತೆಯನ್ನು ಸಾಧಿಸಲಿದೆ. ದೇಶವು ಉತ್ತಮ ಬ್ಯಾಂಕುಗಳನ್ನು ಹೊಂದಿದ್ದು, ದೇಶದ ಮೂಲೆ ಮೂಲೆಗಳಲ್ಲೂ ತಮ್ಮ ವ್ಯವಹಾರವನ್ನು ನಡೆಸಿದಲ್ಲಿ ಮಾತ್ರವೇ ಅತ್ಯುತ್ತಮ ಬ್ಯಾಂಕು ಆಗಿ ಹೊರಹೊಮ್ಮಲಿವೆ ಎಂದು ಚಿದಂಬರಂ ಹೇಳಿದ್ದಾರೆ.

ವ್ಯವಹಾರವು ವೃದ್ಧಿಗೊಳ್ಳುತ್ತಿರುವುದರೊಂದಿಗೆ ದೇಶದ ಬ್ಯಾಂಕಿಂಗ್ ಉದ್ಯಮವು ಉತ್ತಮ ಬೆಳವಣಿಗೆಯ ಹಾದಿಯಲ್ಲಿದೆ ಎಂದು ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ ನಿಯಂತ್ರಿತ ಬ್ಯಾಂಕುಗಳ ಆದ್ಯತಾ ಕ್ಷೇತ್ರದ ಮುಂಗಡವು ದ್ವಿಗುಣಗೊಂಡರೆ, ಕೃಷಿ ಕ್ಷೇತ್ರದ ಮುಂಗಡವು ಮೂರು ಪಟ್ಟು ಹೆಚ್ಚಾಗಿದೆ ಎಂದು ಚಿದಂಬರಂ ಸ್ಪಷ್ಟಪಡಿಸಿದ್ದಾರೆ.

ಈ ನಡುವೆ, ಬ್ಯಾಂಕ್ ಕಾರ್ಯಗಳು ಉತ್ತಮವಾಗಿ ಸಾಗಲು ಬ್ಯಾಂಕ್ ಆಡಳಿತ ಮಂಡಳಿ ಮತ್ತು ನೌಕರ ಗುಂಪಿನ ನಡುವೆ ಉತ್ತಮ ಸಂಪರ್ಕವನ್ನು ಅಭಿವೃದ್ಧಿಗೊಳಿಸಲು ಚಿದಂಬರಂ ಕರೆ ನೀಡಿದ್ದಾರೆ.
ಮತ್ತಷ್ಟು
ಭಾರತ ಬಾಂಗ್ಲಾದೇಶದ ಪ್ರಮುಖ ಆಮದು ಕೇಂದ್ರ
ಶೇ. 11.42 ಕ್ಕೇರಿದ ಹಣದುಬ್ಬರ: ಜನಸಾಮಾನ್ಯ ತತ್ತರ
140 ಡಾಲರ್‌ಗೇರಿದ ಬ್ಯಾರೆಲ್ ಕಚ್ಚಾ ತೈಲ ಬೆಲೆ
ಮೈಕ್ರೋಸಾಫ್ಟ್‌ನಿಂದ ಬಿಲ್‌ಗೇಟ್ಸ್ ನಿವೃತ್ತಿ
ಎಸ್‌ಬಿಐನಿಂದ ಸಾಲ ಬಡ್ಡಿದರ ಹೆಚ್ಚಳ
ಹಣದುಬ್ಬರ ಎರಡಂಕಿಯಲ್ಲೇ ಮುಂದುವರಿಯಲಿದೆ: ಚಿದಂಬರಂ