ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉತ್ತಮ ಉದ್ಯಮ ದೇಶ: ಭಾರತದ ಸ್ಥಾನ ಇಳಿಕೆ  Search similar articles
ವಿಶ್ವದಲ್ಲಿನ ಉತ್ತಮ ಉದ್ಯಮ ದೇಶಗಳ ಪಟ್ಟಿಯಲ್ಲಿ ಭಾರತವು 64ನೇ ಸ್ಥಾನವನ್ನು ಪಡೆದುಕೊಂಡಿದ್ದು, ಕಳೆದ ಬಾರಿಗಿಂತ 13 ಸ್ಥಾನಗಳಷ್ಟು ಕೆಳಗಿಳಿದಿದೆ. ಭಾರತದೊಂದಿಗೆ ಚೀನಾದ ಸ್ಥಾನವು ಕೂಡಾ ಕುಸಿತಗೊಂಡಿದ್ದು, 79ನೇ ಸ್ಥಾನವನ್ನು ಪಡೆದುಕೊಂಡಿದೆ.

ಸುಮಾರು 121 ದೇಶಗಳ ವ್ಯವಹಾರ ವಾತಾವರಣವನ್ನು ವಿವಿಧ ಆಧಾರಗಳಲ್ಲಿ ಹೋಲಿಸಿದ್ದ ಫೋರ್ಬ್ಸ್ ಅಧ್ಯಯನವು, ಡೆನ್ಮಾರ್ಕ್‌ಗೆ ಪ್ರಥಮ ಸ್ಥಾನವನ್ನು ನೀಡಿದೆ.ಕಳೆದ ವರ್ಷ ಈ ಸ್ಥಾನವನ್ನು ಅಮೆರಿಕವು ಪಡೆದುಕೊಂಡಿತ್ತು. ಡೆನ್ಮಾರ್ಕ್ ನಂತರದ ಸ್ಥಾನವನ್ನು ಐರ್ಲ್ಯಾಂಡ್ ಮತ್ತು ಫೈನ್ಲಾಂಡ್ ಪಡೆದುಕೊಂಡಿದ್ದು, ಅಮೆರಿಕವು ನಾಲ್ಕನೇ ಸ್ಥಾನಕ್ಕಿಳಿದಿದೆ.

ದೇಶದಲ್ಲಿನ ಹಣದುಬ್ಬರ ಪ್ರಮಾಣ ಮತ್ತು ಆಹಾರ ಹಾಗೂ ಇತರ ಉತ್ಪನ್ನಗಳ ಬೆಲೆ ಏರಿಕೆ ಮುಂತಾದ ಅಂಶಗಳು ಭಾರತ ಮತ್ತು ಚೀನಾದ ಸ್ಥಾನದ ಕುಸಿತಕ್ಕೆ ಕಾರಣವಾಗಿದೆ ಎಂದು ಫೋರ್ಬ್ಸ್ ವರದಿಗಳು ಅಭಿಪ್ರಾಯಪಟ್ಟಿವೆ.

ವಿದೇಶಿ ವ್ಯಾಪಾರ ಮತ್ತು ಹೂಡಿಕೆಯ ನಿಯಂತ್ರಣವನ್ನು ಭಾರತೀಯ ಸರಕಾರವು ಕಡಿಮೆಗೊಳಿಸಿದೆ ಎಂಬುದಾಗಿ ಫೋರ್ಡ್ಸ್ ಅಭಿಪ್ರಾಯಪಟ್ಟಿದ್ದು, ಸೂಕ್ಷ್ಮ ಕ್ಷೇತ್ರಗಳಾದ ಕೃಷಿ ಮುಂತಾದವುಗಳ ಸೇವಾಶುಲ್ಕ ಹೆಚ್ಚಳವು ಭಾರತದ ಅಭಿವೃದ್ಧಿಹೊಂದುತ್ತಿರುವ ಮಾರುಕಟ್ಟೆಗೆ ವಿದೇಶಿ ಆಗಮನಕ್ಕೆ ತಡೆಯೊಡ್ಡುತ್ತಿದೆ ಎಂದು ತಿಳಿಸಿದೆ.
ಮತ್ತಷ್ಟು
ಹಣಕಾಸು ಸಮಗ್ರತೆ ದೇಶದ ಗುರಿ: ಚಿದಂಬರಂ
ಭಾರತ ಬಾಂಗ್ಲಾದೇಶದ ಪ್ರಮುಖ ಆಮದು ಕೇಂದ್ರ
ಶೇ. 11.42 ಕ್ಕೇರಿದ ಹಣದುಬ್ಬರ: ಜನಸಾಮಾನ್ಯ ತತ್ತರ
140 ಡಾಲರ್‌ಗೇರಿದ ಬ್ಯಾರೆಲ್ ಕಚ್ಚಾ ತೈಲ ಬೆಲೆ
ಮೈಕ್ರೋಸಾಫ್ಟ್‌ನಿಂದ ಬಿಲ್‌ಗೇಟ್ಸ್ ನಿವೃತ್ತಿ
ಎಸ್‌ಬಿಐನಿಂದ ಸಾಲ ಬಡ್ಡಿದರ ಹೆಚ್ಚಳ