ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾನೋ ಕಾರಿನಿಂದ ಧಕ್ಕೆ ಇಲ್ಲ: ಮಾರುತಿ  Search similar articles
ರತನ್ ಟಾಟಾ ಅವರ ಒಂದು ಲಕ್ಷ ರೂಪಾಯಿಯ ನ್ಯಾನೋ ಕಾರು ದುರ್ಗಾ ಪೂಜೆಯ ಅವಧಿಯಲ್ಲಿ ಮಾರುಕಟ್ಟೆಗೆ ಬರಲು ಸಜ್ಜಾಗುತ್ತಿರುವುದರೊಂದಿಗೆ, ನ್ಯಾನೋ ಕಾರಿನಿಂದ ಇತರ ಚತುಶ್ಚಕ್ರ ವಾಹನಗಳಿಗೆ ಅಷ್ಟೇನು ಧಕ್ಕೆ ಉಂಟಾಗುವುದಿಲ್ಲ ಎಂದು ದೇಶದ ಅತಿ ದೊಡ್ಡ ಕಾರು ನಿರ್ಮಾಣ ಸಂಸ್ಥೆ ಮಾರುತಿ ಸುಜುಕಿ ವಿಶ್ವಾಸ ವ್ಯಕ್ತಪಡಿಸಿದೆ.

ನ್ಯಾನೋ ಮಾರುಕಟ್ಟೆ ಗಾತ್ರವನ್ನು ಹೆಚ್ಚುಗೊಳಿಸಬಹುದು ಆದರೆ, ಎರಡು ಲಕ್ಷ ರೂಪಾಯಿಯ ಕಾರನ್ನು ಖರೀದಿಸುತ್ತಿದ್ದ ಜನರ ಪ್ರಮಾಣವನ್ನು ಕಡಿತಗೊಳಿಸುವುದಿಲ್ಲ. ಎರಡು ಲಕ್ಷ ರೂಪಾಯಿಗೆ ಕಾರು ಕೊಳ್ಳಲು ಶಕ್ತರಾಗಿರುವ ಕೆಲವೇ ವ್ಯಕ್ತಿಗಳು ನ್ಯಾನೋ ಕಾರನ್ನು ಖರೀದಿಸಿಬಹುದು ಎಂದು ಮಾರುತಿ ಸುಜುಕಿ ಇಂಡಿಯಾದ ಅಧ್ಯಕ್ಷ ಆರ್.ಸಿ.ಬಾರ್ಗವ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬೆಲೆ ಕಡಿಮೆ ಇರುವ ಕಾರಣ ಮಾರುತಿ 800 ಖರೀದಿಸಲು ಶಕ್ತರಲ್ಲದ ವರ್ಗ ಮಾತ್ರವೇ ನ್ಯಾನೋ ಕಾರು ಖರೀದಿಸಲು ಆಸಕ್ತಿ ತೋರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಟಾಟಾ ನ್ಯಾನೋ ಕಾರು ಇತರ ಚತುಶ್ಚಕ್ರ ವಾಹನಗಳ ಮೇಲೆ ಪರಿಣಾಮ ಬೀರುವುದಕ್ಕಿಂತಲೂ, ದ್ವಿಚಕ್ರ ವಾಹನಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾರ್ಗವ ಅವರು ತಿಳಿಸಿದ್ದು, ಮಾರುತಿ 800 ಕಾರು ಕೊಳ್ಳುವಷ್ಟು ಶಕ್ತರಲ್ಲದ ಮಂದಿ ಮತ್ತು ಮೋಟಾರ್ ಸೈಕಲ್‌ಗಳನ್ನು ಹೊಂದಿದ್ದ ಮಂದಿಯು ಕಡಿಮೆ ಬೆಲೆಯ ನ್ಯಾನೋ ಕಾರಿನತ್ತ ಆಸಕ್ತಿ ತೋರುವ ಕಾರಣ ಇದು ದ್ವಿಚಕ್ರ ವಾಹನಗಳ ಮೇಲೆ ಪರಿಮಾಣ ಬೀರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆದರೆ, ಮಾರುತಿ ಅಥವಾ ಆಲ್ಟೋ ಕಾರು ಖರೀದಿಸಲು ಶಕ್ತರಾಗಿರುವ ವರ್ಗವು ನ್ಯಾನೋ ಕಾರು ಖರೀದಿಯತ್ತ ಆಸಕ್ತಿ ತೋರುವ ಸಾಧ್ಯತೆ ಕಡಿಮೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಏನೇ ಆದರೂ, ನ್ಯಾನೋ ಕಾರಿಗೆ ಸ್ಪರ್ಧೆಯೊಡ್ಡಲು ಒಂದು ಲಕ್ಷ ರೂಪಾಯಿಗೆ ಮಾರುತಿ ಕಾರನ್ನು ಬಿಡುಗಡೆ ಮಾಡುವ ಸಾಧ್ಯತೆಯನ್ನು ಭಾರ್ಗವ ಅವರು ತಳ್ಳಿಹಾಕಿದ್ದಾರೆ.
ಮತ್ತಷ್ಟು
ದುಡಿಯುವ ವರ್ಗದ ವ್ಯಯ ಪ್ರಮಾಣ ಹೆಚ್ಚಳ:ಸಮೀಕ್ಷೆ
ದುರ್ಗಾಪೂಜೆಯ ವೇಳೆ ನ್ಯಾನೋ ಮಾರುಕಟ್ಟೆಗೆ
ಉತ್ತಮ ಉದ್ಯಮ ದೇಶ: ಭಾರತದ ಸ್ಥಾನ ಇಳಿಕೆ
ಹಣಕಾಸು ಸಮಗ್ರತೆ ದೇಶದ ಗುರಿ: ಚಿದಂಬರಂ
ಭಾರತ ಬಾಂಗ್ಲಾದೇಶದ ಪ್ರಮುಖ ಆಮದು ಕೇಂದ್ರ
ಶೇ. 11.42 ಕ್ಕೇರಿದ ಹಣದುಬ್ಬರ: ಜನಸಾಮಾನ್ಯ ತತ್ತರ