ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೀನಾ ಭೂಕಂಪ: ನಷ್ಟದಲ್ಲಿ ರೇಶ್ಮೆ ಉದ್ಯಮ  Search similar articles
ಭಾರತಕ್ಕೆ ಕಚ್ಛಾರೇಶ್ಮೆ ಪೂರೈಸುವ ಮುಖ್ಯ ಕೇಂದ್ರವಾಗಿರುವ ಚೀನಾದಲ್ಲಿ ಕಳೆದ ತಿಂಗಳು ಉಂಟಾಗಿದ್ದ ಭೂಕಂಪದಿಂದಾಗಿ, ವಾರ್ಷಿಕವಾಗಿ ಸುಮಾರು 10,000 ಕೋಟಿ ವ್ಯವಹಾರ ನಡೆಸುತ್ತಿದ್ದ ಭಾರತೀಯ ರೇಶ್ಮೆ ಉದ್ಯಮಕ್ಕೆಅತ್ಯಂತ ನಷ್ಟ ಉಂಟಾಗಿದೆ ಎಂದು ಉದ್ಯಮ ಮೂಲಗಳು ತಿಳಿಸಿವೆ.

ರೇಶ್ಮೆ ಉತ್ಪನ್ನಗಳ ವೆಚ್ಚವು ಶೇ.40ರಷ್ಟು ಹೆಚ್ಚಳಗೊಂಡ ಕಾರಣ ವಾರಣಾಸಿ, ಮಧುರೈ, ಕೊಯಂಬತ್ತೂರು, ಭಾಗಾಲ್ಪುರ್ ಮುಂತಾದ ಕಡೆಗಳಲ್ಲಿನ ನೂರಾರು ರೇಶ್ಮೆ ಕೇಂದ್ರಗಳು ಮುಚ್ಚಲ್ಪಟ್ಟಿದ್ದು, ಸುಮಾರು 1000 ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಉದ್ಯಮವು ತಿಳಿಸಿದೆ.

ಚೀನಾವು ಭಾರತಕ್ಕೆ ಕಚ್ಛಾರೇಶ್ಮೆಯನ್ನು ಪೂರೈಸುವ ಮುಖ್ಯ ಕೇಂದ್ರವಾಗಿದ್ದು, ಚೀನಾದಲ್ಲಿ ಸಂಭವಿಸಿದ್ದ ಪ್ರಬಲ ಭೂಕಂಪದಿಂದಾಗಿ ಹೆಚ್ಚಿನ ಮಲ್ಬರಿ ತೋಟಗಳು ನಾಶ ಹೊಂದಿದ್ದು, ಇದು ಭಾರತದಲ್ಲಿ ಉತ್ಪಾದನೆ ಇಳಿಕೆಗೆ ಕಾರಣವಾಗಿದೆ.

ಚೀನಾದಲ್ಲಿ ಭೂಕಂಪ ಮತ್ತು ನಿರಂತರ ನೆರೆಯು ಆಮದು ಬೆಲೆಯ ಮೇಲೆ ಪರಿಣಾಮ ಬೀರಿದ್ದು, ಶೇ.30ರಿಂದ 40ರಷ್ಟು ಏರಿಕೆಗೊಂಡಿದೆ ಎಂದು ಭಾರತೀಯ ರೇಶ್ಮೆ ರಫ್ತು ವ್ಯಾಪಾರ ಅಭಿವೃದ್ಧಿ ಸಮಿತಿಯ ಮುಖ್ಯಸ್ಥ ಟಿ.ವಿ.ಮಾರುತಿ ತಿಳಿಸಿದ್ದಾರೆ.

ಇದರೊಂದಿಗೆ, ಕಾರ್ಮಿಕ ಮತ್ತು ಇತರ ವೆಚ್ಚದೊಂದಿಗೆ, ತೈಲ ಬೆಲೆ ಏರಿಕೆಯಿಂದಾಗಿ ಸಾಗಾಣಿಕೆ ವೆಚ್ಚದ ಹೆಚ್ಚಳದಿಂದಲೂ ಉದ್ಯಮವು ತತ್ತರಿಸುತ್ತಿದೆ ಎಂದು ಅವರು ಹೇಳಿದರು.
ಮತ್ತಷ್ಟು
ನ್ಯಾನೋ ಕಾರಿನಿಂದ ಧಕ್ಕೆ ಇಲ್ಲ: ಮಾರುತಿ
ದುಡಿಯುವ ವರ್ಗದ ವ್ಯಯ ಪ್ರಮಾಣ ಹೆಚ್ಚಳ:ಸಮೀಕ್ಷೆ
ದುರ್ಗಾಪೂಜೆಯ ವೇಳೆ ನ್ಯಾನೋ ಮಾರುಕಟ್ಟೆಗೆ
ಉತ್ತಮ ಉದ್ಯಮ ದೇಶ: ಭಾರತದ ಸ್ಥಾನ ಇಳಿಕೆ
ಹಣಕಾಸು ಸಮಗ್ರತೆ ದೇಶದ ಗುರಿ: ಚಿದಂಬರಂ
ಭಾರತ ಬಾಂಗ್ಲಾದೇಶದ ಪ್ರಮುಖ ಆಮದು ಕೇಂದ್ರ