ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ: ಭಾರತದ ಉದ್ಯಮ ವಿಶ್ವಾಸಕ್ಕೆ ಧಕ್ಕೆ  Search similar articles
ಕಳೆದ ಆರು ತಿಂಗಳಿಗೆ ಹೋಲಿಸಿದರೆ ಭಾರತದ ಪ್ರಸಕ್ತ ಉದ್ಯಮ ಪರಿಸ್ಥಿತಿಯು ದುಸ್ತರವಾಗಿದ್ದು, ಗಗನಾಭಿಮುಖವಾಗಿ ಸಾಗುತ್ತಿರುವ ಹಣದುಬ್ಬರವು ಭಾರತದ ಉದ್ಯಮ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡುತ್ತಿದೆ ಎಂದು ಉದ್ಯಮ ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ.

ಹಣದುಬ್ಬರ ಏರಿಕೆ ಪ್ರವೃತ್ತಿಯು ಇನ್ನಷ್ಟು ಮುಂದುವರಿಯುವ ಸಾಧ್ಯತೆಯಿದ್ದು, ಇದು ಉದ್ಯಮಗಳ ಮೇಲೆ ತೀವ್ರ ರೀತಿಯ ಪರಿಣಾಮವನ್ನು ಬೀರಿದೆ ಎಂದು ವ್ಯವಹಾರ ವಿಶ್ವಾಸದ ಕುರಿತಾಗಿ ಸಮೀಕ್ಷೆ ನಡೆಸಿದ ನಂತರ ಭಾರತೀಯ ವಾಣಿಜ್ಯ ಮತ್ತು ಉದ್ಯಮ ಮಂಡಳಿ ತಿಳಿಸಿದೆ.

ಮೇ ಮತ್ತು ಜೂನ್ ತಿಂಗಳ ಮಧ್ಯದಲ್ಲಿ ನಡೆಸಿದ ಈ ಸಮೀಕ್ಷೆಯು, ದೇಶದ ಆರ್ಥಿಕ, ಉದ್ಯಮದ ನಿರ್ವಹಣೆಯಲ್ಲಿ ಇಳಿಕೆ ಉಂಟಾಗಿದೆ ಎಂದು ತಿಳಿಸಿದೆ.

ಬೆಳವಣಿಗೆಯಲ್ಲಿನ ಮಂದತೆ, ಹಣದುಬ್ಬರ ಏರಿಕೆಯಿಂದಾಗಿ ಪ್ರಸಕ್ತ ಪರಿಸ್ಥಿತಿಯು ಅಂತ್ಯಂತ ಕೆಳಮಟ್ಟದಲ್ಲಿದೆ. ಅಲ್ಲದೆ, ಬಡ್ಡಿದರ ಹೆಚ್ಚಳವೂ ಕೂಡಾ ಉದ್ಯಮದ ಇಳಿಕೆಗೆ ಕಾರಣವಾಗಿದೆ ಎಂದು ಉದ್ಯಮ ಮಂಡಳಿ ಹೇಳಿದೆ.
ಮತ್ತಷ್ಟು
ಚೀನಾ ಭೂಕಂಪ: ನಷ್ಟದಲ್ಲಿ ರೇಶ್ಮೆ ಉದ್ಯಮ
ನ್ಯಾನೋ ಕಾರಿನಿಂದ ಧಕ್ಕೆ ಇಲ್ಲ: ಮಾರುತಿ
ದುಡಿಯುವ ವರ್ಗದ ವ್ಯಯ ಪ್ರಮಾಣ ಹೆಚ್ಚಳ:ಸಮೀಕ್ಷೆ
ದುರ್ಗಾಪೂಜೆಯ ವೇಳೆ ನ್ಯಾನೋ ಮಾರುಕಟ್ಟೆಗೆ
ಉತ್ತಮ ಉದ್ಯಮ ದೇಶ: ಭಾರತದ ಸ್ಥಾನ ಇಳಿಕೆ
ಹಣಕಾಸು ಸಮಗ್ರತೆ ದೇಶದ ಗುರಿ: ಚಿದಂಬರಂ