ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಲಮನ್ನಾ ಯೋಜನೆ ಇಂದು ಕಾರ್ಯರೂಪಕ್ಕೆ  Search similar articles
ದೇಶದ ಮಹತ್ವಾಕಾಂಕ್ಷೆಯ 71,000 ಕೋಟಿ ಮೊತ್ತದ ಸಾಲಮನ್ನಾ ಯೋಜನೆಯು ಸೋಮವಾರದಿಂದ ಕಾರ್ಯಗತಗೊಳ್ಳಲಿದೆ.

ಸಾಲಮನ್ನಾ ಯೋಜನೆಗೆ ಅರ್ಹರಾದ ರೈತರ ಪಟ್ಟಿಯನ್ನು ಎಲ್ಲಾ ಸರಕಾರಿ ಬ್ಯಾಂಕುಗಳು ಇಂದು ಪ್ರಕಟಿಸಲಿವೆ.

ಸಾಲಮನ್ನಾ ಯೋಜನೆಯ ಪ್ರಯೋಜನವನ್ನು ಪಡೆದ ರೈತರಿಗೆ ಪ್ರಸಕ್ತ ಮುಂಗಾರು ಅವಧಿಯಲ್ಲಿನ ಕೃಷಿ ಪ್ರಾರಂಭಕ್ಕಾಗಿ ನೂತನ ಸಾಲಪಡೆಯಲು ಸಾಧ್ಯವಾಗಲಿದೆ ಎಂದು ಹಣಕಾಸು ಸಚಿವಾಲಯವು ತಿಳಿಸಿದೆ.

ಏತನ್ಮಧ್ಯೆ, ಸಾಲಮನ್ನಾ ಯೋಜನೆಯ ಅರ್ಹ ರೈತರ ಆಯ್ಕೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿರುವ ಹಣಕಾಸು ಸಚಿವ ಪಿ.ಚಿದಂಬರಂ, ನೂತನ ಹಾದಿಯತ್ತ ದೃಷ್ಟಿ ಹಾಯಿಸಿ ಇತರ ಕಾರ್ಯಗಳಾದ ಹೈನುಗಾರಿಕೆ, ಕೋಳಿ ಸಾಗಾಣಿಕೆ, ಕೃಷಿ ಆಧಾರಿತ ಉದ್ಯಮ ಮುಂತಾದವುಗಳ ಕಡೆ ಗಮನಹರಿಸುವಂತೆ ರೈತರಿಗೆ ಕರೆ ನೀಡಿದ್ದಾರೆ.

ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳಾದ ನಿಂಬೆ, ಮಾವು ಮುಂತಾದವುಗಳನ್ನು ಬೆಳೆಸುವುದರೊಂದಿಗೆ,ಕಡಿಮೆ ಮಳೆ ಬೀಳುವ ಪ್ರದೇಶಗಳ ರೈತರು ಹನಿ ನೀರಾವರಿ ಯೋಜನೆಯನ್ನು ಬಳಸಿಕೊಳ್ಳುವಂತೆ ಚಿದಂಬರಂ ರೈತರಿಗೆ ಸಲಹೆ ನೀಡಿದ್ದಾರೆ.

ಈ ವೆರೆಗೆ ರೈತರು ಸಾಗಿದ ಹಾದಿಯು ಅತ್ಯಂತ ಕಷ್ಟಕರವಾಗಿದ್ದು, ಅತ್ಯಂತ ನಷ್ಟವೂ ಕೂಡಾ ಉಂಟಾಗಿದೆ. ಈ ನಿಟ್ಟಿನಲ್ಲಿ ನೂತನ ಹಾದಿಯನ್ನು ಕಂಡುಕೊಳ್ಳುವುದು ಅಗತ್ಯವೂ ಆಗಿದೆ. ಪ್ರಾರಂಭದಲ್ಲಿ ಇದಕ್ಕೆ ವಿರೋಧ ಉಂಟಾಗಬಹುದು ಆದರೆ ಆತ್ಮವಿಶ್ವಾಸದಿಂದ ಮುಂದೆ ಸಾಗಿದರೆ ಗೆಲುವು ಖಚಿತ ಎಂದು ಹಣಕಾಸು ಸಚಿವರಂ ರೈತರಿಗೆ ತಿಳಿಸಿದ್ದಾರೆ.

ದೇಶದಲ್ಲಿ ಒಟ್ಟು ನಾಲ್ಕು ಕೋಟಿ ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದು, ಇದರಲ್ಲಿ ಕೇವಲ ತಮಿಳುನಾಡಿನಲ್ಲಿ ಮಾತ್ರವೇ 15 ಲಕ್ಷ ರೈತರು ಪಡೆದುಕೊಂಡಿದ್ದಾರೆ ಎಂದು ಹೇಳಿದ ಅವರು, ಸಾಲಮನ್ನಾ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ಹಣ ಸಂದಾಯವಾದ ಬಳಿಕವಷ್ಟೇ ನಿಖರ ರೈತರ ಸಾಲ ಮನ್ನಾ ಮೊತ್ತವನ್ನು ಹೇಳಬಹುದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
ಹಣದುಬ್ಬರ: ಭಾರತದ ಉದ್ಯಮ ವಿಶ್ವಾಸಕ್ಕೆ ಧಕ್ಕೆ
ಚೀನಾ ಭೂಕಂಪ: ನಷ್ಟದಲ್ಲಿ ರೇಶ್ಮೆ ಉದ್ಯಮ
ನ್ಯಾನೋ ಕಾರಿನಿಂದ ಧಕ್ಕೆ ಇಲ್ಲ: ಮಾರುತಿ
ದುಡಿಯುವ ವರ್ಗದ ವ್ಯಯ ಪ್ರಮಾಣ ಹೆಚ್ಚಳ:ಸಮೀಕ್ಷೆ
ದುರ್ಗಾಪೂಜೆಯ ವೇಳೆ ನ್ಯಾನೋ ಮಾರುಕಟ್ಟೆಗೆ
ಉತ್ತಮ ಉದ್ಯಮ ದೇಶ: ಭಾರತದ ಸ್ಥಾನ ಇಳಿಕೆ