ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಸ್‌ಬಿಐನಿಂದ ಮೊಬೈಲ್ ಬ್ಯಾಂಕಿಂಗ್ ಸೇವೆ ಪ್ರಾರಂಭ  Search similar articles
ಸರಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜುಲೈ ಒಂದರಂದು ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಪ್ರಾರಂಭಿಸಲಿದ್ದು, ಈ ಮೂಲಕ, ಗ್ರಾಹಕರಿಗೆ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ನೀಡುವ ಮೊದಲ ಸರಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಇದರೊಂದಿಗೆ, ಕೋರ್ ಬ್ಯಾಂಕಿಂಗ್ ಸೊಲ್ಯುಶನ್(ಸಿಬಿಎಸ್) ಕಾರ್ಯನಿರ್ವಹಣೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾನು 101 ಶಾಖೆಗಳನ್ನು ಪ್ರಾರಂಭಿಸಲಿದ್ದು, ಹಣಕಾಸು ಸಚಿವ ಪಿ.ಚಿದಂಬರಂ ಅವರು ಈ ಶಾಖೆಗಳನ್ನು ನವದೆಹಲಿಯಲ್ಲಿ ಉದ್ಘಾಟಿಸಲಿದ್ದಾರೆ. ನೂತನ ಶಾಖೆಗಳ ಪ್ರತಿನಿಧಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಟ್ಟು 10,385 ಶಾಖೆಗಳನ್ನು ಹೊಂದಿದ್ದು, ಇದರಲ್ಲಿ 10,100 ಬ್ಯಾಂಕುಗಳ ಸಿಬಿಎಸ್ ಸೇವೆಯನ್ನು ನೀಡುತ್ತಿವೆ. ಅಲ್ಲದೆ, ಯಾವುದೇ ಎಸ್‌ಬಿಐ ಶಾಖೆಯಿಂದ ವಹಿವಾಟನ್ನು ನಡೆಸಲು ಅನುಕೂಲವಾಗುವಂತೆ ಎಲ್ಲಾ ಶಾಖೆಗಳು ಪರಸ್ಪರ ಸಂಪರ್ಕವನ್ನು ಹೊಂದಿವೆ.

ಮೊಬೈಲ್ ಪಾವತಿಯ ಕುರಿತಾದ ಸಲಹಾಸೂತ್ರ ಕರಡುಪ್ರತಿಯನ್ನು ಭಾರತೀಯ ರಿಸರ್ವ್ ಬ್ಯಾಂಕಿಂಗ್ ಬಿಡುಗಡೆಗೊಳಿಸಿದ ಬೆನ್ನಲ್ಲೇ ಎಸ್‌ಬಿಐ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಪ್ರಾರಂಭಿಸಲಿದ್ದು, ಈ ಸೇವೆಯ ಮೂಲಕ ಸುಮಾರು 1,500 ರೂಪಾಯಿವರೆಗಿನ ಮೊತ್ತವನ್ನು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ವರ್ಗಾಯಿಸಲು ಗ್ರಾಹಕರಿಗೆ ಸಾಧ್ಯವಾಗಲಿದೆ.

ಮೊಬೈಲ್ ಬ್ಯಾಂಕಿಂಗ್ ವಿಧಾನವು ಎಲ್ಲಾ ಮೊಬೈಲ್‌ಗಳಲ್ಲೂ ಕಾರ್ಯನಿರ್ವಹಿಸುವಂತಾಗಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ ಆದೇಶ ನೀಡಿದ್ದು, ವಹಿವಾಟಿನ ಮಧ್ಯವರ್ತಿಯಾಗಿ ಎಸ್ಎಂಎಸ್‌ನ್ನು ಬಳಸುವಂತೆ ಸಲಹೆ ನೀಡಿದೆ.
ಮತ್ತಷ್ಟು
141 ಡಾಲರ್‌ಗೇರಿದ ಕಚ್ಛಾತೈಲ ಬೆಲೆ
ಸಾಲಮನ್ನಾ ಯೋಜನೆ ಇಂದು ಕಾರ್ಯರೂಪಕ್ಕೆ
ಹಣದುಬ್ಬರ: ಭಾರತದ ಉದ್ಯಮ ವಿಶ್ವಾಸಕ್ಕೆ ಧಕ್ಕೆ
ಚೀನಾ ಭೂಕಂಪ: ನಷ್ಟದಲ್ಲಿ ರೇಶ್ಮೆ ಉದ್ಯಮ
ನ್ಯಾನೋ ಕಾರಿನಿಂದ ಧಕ್ಕೆ ಇಲ್ಲ: ಮಾರುತಿ
ದುಡಿಯುವ ವರ್ಗದ ವ್ಯಯ ಪ್ರಮಾಣ ಹೆಚ್ಚಳ:ಸಮೀಕ್ಷೆ