ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಹಾರ ಬಿಕ್ಕಟ್ಟು: ಜಿ8 ನಾಯಕರಿಂದ ಕಾರ್ಯಪಡೆ  Search similar articles
ವಿಶ್ವ ಆಹಾರ ಬಿಕ್ಕಟ್ಟನ್ನು ಶಮನಗೊಳಿಸುವ ನಿಟ್ಟಿನಲ್ಲಿ ಮುಂದಿನ ತಿಂಗಳು ನಡೆಯುವ ಎಂಟು ಕೈಗಾರಿಕಾ ರಾಷ್ಟ್ರಗಳ ಜಿ8 ಸಮೂಹದ ನಾಯಕರು ಕಾರ್ಯಪಡೆಯನ್ನು ರೂಪಿಸಲು ಸೋಮವಾರ ಒಪ್ಪಿಗೆ ಸೂಚಿಸಿದ್ದಾರೆ.

ಬಡರಾಷ್ಟ್ರಗಳಲ್ಲಿನ ಆಹಾರ ಕೊರತೆ ನಿವಾರಣೆ ಮತ್ತು ದೀರ್ಘಾವಧಿ ಸವಾಲುಗಳಾದ ಆಹಾರ ಉತ್ಪಾದನೆ ಹೆಚ್ಚಳ ಮುಂತಾದವುಗಳನ್ನು ಎದುರಿಸುವ ಗುರಿಯನ್ನು ಇದು ಹೊಂದಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ರಫ್ತು ನಿರ್ಬಂಧ ತೆರವು ಹಾಗೂ ಅಗತ್ಯವಿರುವ ರಾಷ್ಟ್ರಗಳಿಗೆ ಆಹಾರ ಪೂರೈಕೆ ಮುಂತಾದ ವಿಚಾರಗಳ ಬಗ್ಗೆಯೂ ಈ ಸಭೆಯು ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಪತ್ರಿಕೆಗಳು ತಿಳಿಸಿವೆ.

ಜಗತ್ತಿನ ಆಹಾರ ಬಿಕ್ಕಟ್ಟು ಹಾಗೂ ಹವಾಮಾನ ಬದಲಾವಣೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಜುಲೈ ತಿಂಗಳಲ್ಲಿ ನಡೆಯುವ ಜಿ8 ರಾಷ್ಟ್ರಗಳ ಶೃಂಗಸಭೆಯಲ್ಲಿ ಜಿ8 ನಾಯಕರ ಮೇಲೆ ಒತ್ತಡ ಹೇರುವುದಾಗಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಹೇಳಿರುವ ಬೆನ್ನಲ್ಲೇ ಈ ವರದಿಗಳು ಬಂದಿವೆ.
ಮತ್ತಷ್ಟು
ಎಸ್‌ಬಿಐನಿಂದ ಮೊಬೈಲ್ ಬ್ಯಾಂಕಿಂಗ್ ಸೇವೆ ಪ್ರಾರಂಭ
141 ಡಾಲರ್‌ಗೇರಿದ ಕಚ್ಛಾತೈಲ ಬೆಲೆ
ಸಾಲಮನ್ನಾ ಯೋಜನೆ ಇಂದು ಕಾರ್ಯರೂಪಕ್ಕೆ
ಹಣದುಬ್ಬರ: ಭಾರತದ ಉದ್ಯಮ ವಿಶ್ವಾಸಕ್ಕೆ ಧಕ್ಕೆ
ಚೀನಾ ಭೂಕಂಪ: ನಷ್ಟದಲ್ಲಿ ರೇಶ್ಮೆ ಉದ್ಯಮ
ನ್ಯಾನೋ ಕಾರಿನಿಂದ ಧಕ್ಕೆ ಇಲ್ಲ: ಮಾರುತಿ